ಮುಂಗಾರು ಮಳೆ ಏನೋ ಆರಂಭವಾಗಿದೆ. ಆದರೆ ನಿರೀಕ್ಷೆ ತಕ್ಕಂತೆ ಮಳೆ ಬೀಳುತ್ತಿಲ್ಲ. ಕರ್ನಾಟಕ(Karnataka) ರಾಜ್ಯಾದ್ಯಂತ ಅಲ್ಲಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆ(Rain) ಆಗುತ್ತಿದೆ. ಮೊದಲಿನ ರೀತಿ ಮುಂಗಾರು ಮಳೆ ಭಾರೀ ಆಗದಿದ್ದರೂ ಕಳೆದ ಕೆಲ ದಿನಗಳಿಂದ ಹಗುರದಿಂದ ಸಾಧಾರಣ ಮಳೆಯಂತೂ ಮುಂದುವರಿದಿದೆ. ಇದು ಈ ಭಾಗದ ಜಲಾಶಯಗಳ (Dam Water Level Today) ಮೇಲೆ ಪರಿಣಾಮ ಬೀರಿದೆ. ಹಳೆ ಮೈಸೂರು(Mysure) ಭಾಗದ ಮಂಡ್ಯ(Mandya), ಹಾಸನ(Hasan), ಚಾಮರಾಜನಗರ(Chamaraj nagara), ಕೊಡಗು(Kodagu) ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ತುಂತುರು ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.
ಕಬಿನಿ ಜಲಾಶಯದಲ್ಲಿ ಕಡಿಮೆಯಾದ ಒಳಹರಿವು ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಕಬಿನಿ ಜಲಾಶಯಕ್ಕೆ ಒಳಹರಿವು ತೀರ ಕಡಿಮೆ ಯಾಗಿದೆ ಕಳೆದ 5 ದಿನಗಳಲ್ಲಿ 2 ಸಾವಿರ ಕ್ಯೂಸೆಕ್‌ನಷ್ಟಿದೆ. ಒಳಹರಿವು ದಿನದಿಂದ ದಿನಕ್ಕೆ ತೀರ ಕಡಿಮೆಯಾಗುತ್ತಿದೆ. 2284 ಅಡಿಗಳ ಸಾಮರ್ಥ್ಯವಿರುವ ಜಲಾಶಯದ ಇಂದಿನ ಮಟ್ಟ 2263.78 ಅಡಿಗಳಾಗಿದ್ದು, ಜಲಾಶಯಕ್ಕೆ ಕೇವಲ 549 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ. ಜಲಾಶಯದಿಂದ 300 ಕ್ಯೂಸೆಕ್ ನೀರನ್ನು ಅನೇಕ ಉದ್ದೇಶಗಳಿಗೆ ಜಲಾಶಯದಿಂದ ಹೊರ ಹರಿಸಲಾಗುತ್ತಿದೆ. ಜಲಾಶಯಕ್ಕೆ ಮುಂಗಾರು ಶುರುವಾದ ನಂತರ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಒಳಹರಿವು ಹರಿದು ಬರುತ್ತಿದೆ.
ಇನ್ನೊಂದೆಡೆ ಬೆಂಗಳೂರು ನಗರ ಸಹಿತ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿದೆ. ಮುಂಗಾರು ಮಳೆ ಜೂನ್ 2 ರಂದು ಆಗಮಿಸಿದ್ದರೂ ಹೆಚ್ಚಿನ ಪ್ರಭಾವ ಬೀರಿಲ್ಲ. ಇದರಿಂದ ಮಳೆ ಪ್ರಮಾಣವೂ ಕಡಿಮೆಯಾಗುತ್ತಿದೆ. ಆದರೂ ಮೇ ಹಾಗೂ ಜೂನ್ ತಿಂಗಳಲ್ಲಿ ಇದುವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…