ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಮಲೆನಾಡು ಹಾಗೂ ಗಿರಿ ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಸುರಿಯುತ್ತಿದ್ದು, ಆಕಾಲಿಕ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ.
ಮೂಡಿಗೆರೆ, ಕಳಸ, ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ಹಲವೆಡೆ ಕೊಯ್ಲು ಮಾಡಿ ಒಣ ಹಾಕಿದ್ದ ಕಾಫಿ ಬೆಳೆಗಳು ನೀರಿಗೆ ಕೊಚ್ಚಿಹೋಗಿರುವ ವರದಿಗಳಿವೆ. ನಿರಂತರ ಮಳೆಯು ಮುಂದುವರಿದರೆ ಗಿಡದಲ್ಲಿರುವ ಕಾಫಿ ಉದುರುವ ಸಾಧ್ಯತೆ ಇರುವುದಲ್ಲದೆ, ಕೊಯ್ಲು ಮಾಡಿದ ಕಾಫಿಯನ್ನು ಸರಿಯಾಗಿ ಒಣಗಿಸಲು ಸಾಧ್ಯವಾಗದೇ ಗುಣಮಟ್ಟ ಕುಸಿಯುವ ಭೀತಿ ಎದುರಾಗಿದೆ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಅಡಿಕೆ ಕೃಷಿಕರೂ ಮಳೆಯ ಪರಿಣಾಮದಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಡಿಕೆ ತೋಟಗಳಲ್ಲಿ ಹೆಚ್ಚಿದ ತೇವಾಂಶದಿಂದ ಕಾಯಿ ಉದುರುವಿಕೆ, ಶಿಲೀಂಧ್ರ ರೋಗಗಳ ಹರಡುವಿಕೆ ಹಾಗೂ ಒಣಗಿಸುವ ಹಂತದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕೃಷಿಕರ ಪ್ರಕಾರ, ಹವಾಮಾನದಲ್ಲಿ ಸ್ಥಿರತೆ ಇಲ್ಲದಿರುವುದರಿಂದ ಕೊಯ್ಲು, ಒಣಗಿಸುವಿಕೆ ಮತ್ತು ಮಾರುಕಟ್ಟೆ ಸಾಗಣೆಯ ಹಂತಗಳಲ್ಲೂ ಸಂಕಷ್ಟ ಇದೆ. ಮುಂದಿನ ದಿನ ಕೆಲವು ದಿನಗಳಲ್ಲಿ ಮಳೆ ತಗ್ಗದಿದ್ದರೆ ಕಾಫಿ ಹಾಗೂ ಅಡಿಕೆ ಎರಡೂ ಬೆಳೆಗಳಿಗೆ ನಷ್ಟದ ಪ್ರಮಾಣ ಹೆಚ್ಚಾಗುವ ಆತಂಕವಿದೆ.
ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…
Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…
ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…
ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…
ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…
ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…