ಕೃಷಿಯಲ್ಲಿ ಶ್ರಮ ಉಳಿತಾಯ ಮಾಡುವ ಸುಲಭ ಉಪಾಯ | ತಾಂತ್ರಿಕ ಐಡಿಯಾದ ಯುವ ಕೃಷಿಕರೇ ಈಗ ಕೃಷಿಗೆ ಬೇಕಿದೆ |

August 23, 2021
10:10 PM

ಕೃಷಿಯಲ್ಲಿ ಈಗ ಶ್ರಮ ಉಳಿತಾಯವಾಗಬೇಕು, ಈ ಮೂಲಕ ಕೃಷಿ ಆದಾಯವೂ ಉಳಿತಾಯವಾಗಬೇಕು, ಪ್ರಧಾನಿಗಳು ಹೇಳಿದ ಕೃಷಿ ಆದಾಯದ ದ್ವಿಗುಣದ ದಾರಿಯೂ ಸುಲಭ ಆಗಬೇಕು. ಕೃಷಿಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ತಾಂತ್ರಿಕ ವಿಧಾನಗಳ ಬಳಕೆಯೂ ಇಂದು ಅಗತ್ಯವಾಗಿದೆ. ಇದಕ್ಕೆ ಯುವಕರ ವಿನೂತನ ಟೆಕ್ನಿಕಲ್ ಐಡಿಯಾಗಳೂ ಕಾರಣವಾಗುತ್ತದೆ.ಇಂತಹದ್ದೊಂದು ಐಡಿಯಾವನ್ನು ಯುವಕ ಉಣ್ಣಿಕೃಷ್ಣನ್ ಮಾಡಿದ್ದಾರೆ.‌ ಹಲವು ಕೃಷಿಕರಿಗೆ ಈ ಐಡಿಯಾ ಮೆಚ್ಚುಗೆಯೂ ಆಗಿದೆ.

ಸರಕಾರ ಕೃಷಿ ಉಳಿಸಲು ಇನ್ನಿಲ್ಲದ ಸರಕಾರ ನೀಡುತ್ತಿದೆ. ಬಡ್ಡಿ ರಹಿತ ಸಾಲದಿಂದ ತೊಡಗಿ ಕೃಷಿ ಬೆಳವಣಿಗೆಗೆ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತಿದೆ. ಹಾಗಿದ್ದರೂ ದೇಶದಲ್ಲಿ ಕೃಷಿಯಲ್ಲಿ ಭಾರೀ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಇದ್ದರೂ, ತಾಂತ್ರಿಕ ಐಡಿಯಾ ಹೊಂದಿದ ಹಾಗೂ ಉತ್ಸಾಹದ ಯುವ ಕೃಷಿಕರು ಮಣ್ಣಿನ ಆರಾಧನೆಗೆ ಇಳಿಯದೇ ಇರುವುದೂ ಒಂದು ಕಾರಣ. ಹಾಗಿದ್ದರೂ ಈಗಾಗಲೇ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ಕೆಲವು ಯುವ ಕೃಷಿಕರು ಉನ್ನತ ವ್ಯಾಸಾಂಗ ಮಾಡಿ ಹೊಸ ಹೊಸ ವಿಧಾನದ ಮೂಲಕ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಬೆಳವಣಿಗೆಗೂ ಕಾರಣವಾಗುತ್ತಿದ್ದಾರೆ.

ಇದೀಗ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಣ್ಣಿಕೃಷ್ಣನ್‌ ಎಂಬ ಯುವಕ ಅವರ ಕೃಷಿ ಭೂಮಿಯಲ್ಲಿ  ವಿವಿಧ ರೀತಿಯಲ್ಲಿ  ತಾಂತ್ರಿಕ ವಿಧಾನವನ್ನು  ಅಳವಡಿಸಿಕೊಂಡಿದ್ದಾರೆ. ಅಡಿಕೆ ಹಾಗೂ ರಬ್ಬರ್‌ ಬೆಳೆಯುವ ಇವರು  ರಬ್ಬರ್‌ ಕೃಷಿಯಲ್ಲೂ ತಾಂತ್ರಿಕ ವಿಧಾನ ಬಳಕೆ ಮಾಡಿದರೆ, ಅಡಿಕೆ ಕೃಷಿಯಲ್ಲೂ ತಾಂತ್ರಿಕವಾಗಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಬ್ರೆಶ್‌ ಕಟ್ಟರ್‌ ಮೂಲಕ ಕೆರೆಯಿಂದ ನೀರೆಳೆಯುವ ಪ್ರಯತ್ನ ಮಾಡಿದ್ದಾರೆ. ಒಂದೇ ಯಂತ್ರದ ಮೂಲಕ ವಿವಿಧ ಕೆಲಸಗಳು ಆಗಬೇಕು ಎನ್ನುವ ಯೋಚನೆಯಿಂದ ಪ್ರಯತ್ನ ಮಾಡುತ್ತಿರುವ ಉಣ್ಣಿಕೃಷ್ಣನ್‌, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆಯ ಸಂದರ್ಭ ನೀರು ಅಗತ್ಯವಾಗಿದೆ, ಇದಕ್ಕೆ ಆನ್‌ ಲೈನ್‌ ಮೂಲಕ ಯಂತ್ರವನ್ನು  ಹುಡುಕಿ ಅದನ್ನು ತರಿಸಿ  ಬ್ರೆಶ್‌ ಕಟ್ಟರ್‌ ಗೆ ಅಳವಡಿಕೆ ಮಾಡಿದ್ದಾರೆ. ಈ ಮೂಲಕ ಹೊಸದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ಎರಡು ನಿಮಿಷದ ಒಳಗೆ 200 ಲೀಟರ್‌ ನೀರನ್ನು  ತುಂಬಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಉಣ್ಣಿಕೃಷ್ಣನ್.‌ ಯುವಕರ ಇಂತಹ ವಿನೂತನ ಯೋಚನೆಗಳು ಕೃಷಿಕರಿಂದಲೂ ಬೆಂಬಲ ದೊರೆಯುತ್ತಿರುವುದು  ಆಶಾದಾಯಕ ಬೆಳವಣಿಗೆ.

 

Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror