#GreenFireCrackers | ಸಂಭ್ರಮ ಸಡಗರದ ಹಬ್ಬಗಳಲ್ಲಿ ಹಸಿರು ಪಟಾಕಿ ಬಳಸೋಣ | ನಮ್ಮ ಪರಿಸರವನ್ನು ಮಾಲಿನ್ಯದಿಂದ ಕಾಪಾಡೋಣ..|

October 11, 2023
1:20 PM
ಹಸಿರು ಪಟಾಕಿಗಳು ಶೆಲ್​​ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಪಟಾಕಿಗಳ ಪ್ಯಾಕ್​ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ.

ಇನ್ನೇನು ಹಬ್ಬಗಳ ಸಾಲು ಆರಂಭವಾಗುತ್ತದೆ. ದೀಪಾವಳಿಗೆ ಕೇವಲ ಒಂದೇ ಒಂದು ತಿಂಗಳು ಬಾಕಿ ಇದೆ. ಬೆಳಕಿನ ಹಬ್ಬ ಬಂತೆಂದರೆ ಎಲ್ಲರಗೂ ನೆನಪಾಗೋದು ಢಂ.. ಢಂ ಸದ್ದು ಮಾಡುವ ಪಟಾಕಿ #Firecrackers. ಆದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಪಟಾಕಿ ಪರಿಸರಕ್ಕೆ ಭಾರಿ ಮಾಲಿನ್ಯವನ್ನು ಉಂಟುಮಾಡುತ್ತಿದೆ.ದೀಪಾವಳಿ ಮಾತ್ರವಲ್ಲ ಹಲವು ಹಬ್ಬಗಳಲ್ಲೂ ಇದೇ ಪಟಾಕಿ ಸದ್ದು ಮಾಡುತ್ತದೆ. ಇದಕ್ಕಾಗಿ ಹಸಿರು ಪಟಾಕಿ #Green Firecrackers ಬಳಸುವ ಬಗ್ಗೆ ಜಾಗೃತಿ #Awareness ಮೂಡಿಸಲಾಗುತ್ತಿದೆ. ಏನಿದು ಹಸಿರು ಪಟಾಕಿ..? ಎಲ್ಲಿ ಸಿಗುತ್ತೆ..? ಅದನ್ನು ಕಂಡು ಹಿಡಿಯೋದು ಹೇಗೆ..? ಬನ್ನಿ ತಿಳಿಯೋಣ

Advertisement
Advertisement

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ದೇಶದಲ್ಲಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳಲ್ಲಿ ದೀಪ ಬೆಳಗಿ, ಪಟಾಕಿ (Firecrackers) ಸಿಡಿಸಿ ಸಂಭ್ರಮಿಸಲಾಗುತ್ತದೆ. ಪಟಾಕಿ ಸಿಡಿಸುವ ವಿಚಾರವಾಗಿ ಪರಿಸರ ಕಾಳಜಿ ಕೂಗು ಕೂಡ ಕೇಳಿ ಬರುತ್ತದೆ. ಪಟಾಕಿ ಹಾರಿಸಬೇಡಿ ಬದಲಿಗೆ ಪರಿಸರಕ್ಕೆ ಪೂರಕವಾಗುವ ಪಟಾಕಿಗಳನ್ನು ಹಾರಿಸಿ ಸಿಡಿಸುವಂತೆ ಜಾಗೃತಿ ಅಭಿಯಾನಗಳು ಆರಂಭವಾಗುತ್ತದೆ. ಅಲ್ಲದೆ ಸರ್ಕಾರ ಕೂಡ ಪ್ರತಿ ವರ್ಷ ಜಾಗೃತಿ ಮೂಡಿಸುತ್ತದೆ. 2018ರ ಸುಪ್ರೀಂ ಕೋರ್ಟ್​ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ 2020ರಲ್ಲಿ ಅಂದಿನ ಸರ್ಕಾರ ಪಟಾಕಿ ನಿಷೇಧಿಸಿತ್ತು. ಅಲ್ಲದೆ ಹಸಿರು ಪಟಾಕಿ (Green Firecrackers) ಸಿಡಿಸುವಂತೆ ಸೂಚಿಸಿತ್ತು.

ಏನಿದು ಹಸಿರು ಪಟಾಕಿ?: ಏನಿದು ಹಸಿರು ಪಟಾಕಿ? ಪತ್ತೆ ಮಾಡುವುದು ಹೇಗೆ? ಪರಿಸರಕ್ಕೆ ಪೂರಕ ಮಾಹಿತಿ ನೋಡಿ.. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಎನ್​​ಇಇಆರ್​ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿಗೆ ಇರುವ ವ್ಯತ್ಯಾಸ

  • ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಎರಡೂ ಮಾಲಿನ್ಯ ಉಂಟು ಮಾಡುತ್ತದೆ
  • ಹಸಿರು ಪಟಾಕಿ, ಸಾಮಾನ್ಯ ಪಟಾಕಿಗಿಂದ ಶೇ30 ರಷ್ಟು ಕಡಿಮೆ ವಾಯುಮಾಲಿನ್ಯ ಮಾಡುತ್ತದೆ
  • ಹಸಿರು ಪಟಾಕಿ ಕಡಿಮೆ ಹೊಗೆ ಹೊರಸೂಸುತ್ತದೆ. ಮತ್ತು ದೂಳು ಹೀರಿಕೊಳ್ಳುತ್ತದೆ
  • ಹಸಿರು ಪಟಾಕಿಯಲ್ಲಿ ಬೇರಿಯಂ ಮತ್ತು ನೈಟ್ರೇಟ್​​​ ಇರುವುದಿಲ್ಲ
  • ಹಸಿರು ಪಟಾಕಿ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ.

ಹಸಿರು ಪಟಾಕಿ ಖರೀದಿಸುವುದು ಎಲ್ಲಿ? :ಹಸಿರು ಪಟಾಕಿ ಉತ್ಪಾದನೆಗೆ ಸರ್ಕಾರ ದೇಶದ 230 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ. ಮತ್ತು ಇವುಗಳನ್ನು ಮಾರಾಟ ಮಾಡಲು ಪರವಾನಿಗೆ ಅತ್ಯಗತ್ಯ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಹಸಿರು ಪಟಾಕಿ ಗುರುತಿಸುವುದು ಹೇಗೆ? ಹಸಿರು ಪಟಾಕಿಗಳು ಶೆಲ್​​ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಪಟಾಕಿಗಳ ಪ್ಯಾಕ್​ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ. ಇದರ ಮೂಲಕ ಗುರುತಿಸಬಹುದು. ಅಲ್ಲದೆ ಕ್ಯೂಆರ್​ ಕೋಡ್​ ಸ್ಕ್ಯಾನ್​ ಕೂಡ ಇರಲಿದೆ.

ಪ್ಯಾಕ್​ ಮೇಲೆ ಈ ಲೋಗೋಗಳು, ಕ್ಯೂಆರ್​ ಕೋಡ್​ ಇದ್ರೆ ಮಾತ್ರ ಹಸಿರು ಪಟಾಕಿ: ಗ್ರಾಹಕರು ಪ್ಲೇಸ್ಟೋರ್​​ನಿಂದ CSIR, NEERI ಗ್ರೀನ್​​ ಕ್ಯೂಆರ್​ ಕೋಟ್​ ಅಪ್ಲಿಕೇಶನ್​ ಬಳಸಿ ಸ್ಕ್ಯಾನರ್​ ಅನ್ನು ಡೌನ್​ಲೋಡ್​ ಮಾಡಿ ಅದರ ಮೂಲಕ ಗ್ರಾಹಕರು ಹಸಿರು ಪಟಾಕಿಗಳನ್ನು ಗುರುತಿಸಬಹುದು. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಿಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿವೆ.

Advertisement

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group