ಸುದ್ದಿಗಳು

ನುಗ್ಗೆ ಸೊಪ್ಪು ಕಬ್ಬಿಣಾಂಶದ ಆಗರ | ಇದರ ಔಷಧಿಯ ಉಪಯೋಗಗಳನ್ನು ಕೇಳಿದರೆ ಅಚ್ಚರಿ ಖಂಡಿತ | ನಿಮ್ಮ ಊಟದಲ್ಲಿರಲಿ ನುಗ್ಗೆ ಸೊಪ್ಪಿನ ಪಲ್ಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೊರೋನಾ ಅನ್ನೋ ಮಹಾಮಾರಿ ಎಂದು ಬಿರುಗಾಳಿ ಎಬ್ಬಿಸಿತೋ ಅಂದಿನಿಂದ ಜನ ಸ್ವಲ್ಪ ಆರೋಗ್ಯಯದ ಕಡೆಗೆ ಹೆಚ್ಚೇ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಸೊಪ್ಪು, ಕಾಳು, ಸಾವಯವ ತರಕಾರಿಗಳು, ನೈಸರ್ಗಿಕ ಆಹಾರ ಪದಾರ್ಥಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.  ಹಾಗೆ ಇತ್ತೀಚಿನ ದಿನಗಳಲ್ಲಿ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ.

Advertisement
Advertisement

ಸ್ವಾಭಾವಿಕವಾಗಿ ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಬೇಕಾದ್ರೆ ನೀವು ನೊಗ್ಗೆಸೂಪ್ಪುನ್ನು ಹೆಚ್ಚು ಸೇವಿಸೋದನ್ನು ಅಭ್ಯಾಸ ಮಾಡಬೇಕು. ಹಾಗಾಗಿ ನಾವು ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ನುಗ್ಗೆ ಸೊಪ್ಪು ಸಕ್ಕರೆ ಅಂಶ ಇಲ್ಲದಿರುವುದು ತುಂಬಾ ಉಪಯುಕ್ತ.

ಅಧಿಕ ರಕ್ತದೊತ್ತಡ (  High BP ) ಇದು ಹೃದಯಾಘಾತಕ್ಕೆ ಮೂಲ ಕಾರಣವಾಗಿದೆ. ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ.

ಈಗೀನ ಕಾಲದಲ್ಲಿ ಸ್ಥೂಲ ಕಾಯ ಹೊಂದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಜಂಕ್ ಫುಡ್ ಗಳ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಅಂಶ ಹೆಚ್ಚಾಗಿ, ಇದು ಅನೇಕ ರೋಗಗಳಿಗೆ ಅಹ್ವಾನ ನೀಡುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನುಗ್ಗೆ ಸೊಪ್ಪನ್ನು ನಾವು ಸಾಂಬಾರ್, ಸೂಪ್, ಪಲ್ಯ ಅಥವಾ ಜ್ಯೂಸು ಮಾಡಿಕೊಂಡು ಸೇವಿಸಬಹುದು.

ನುಗ್ಗೆ ಸೊಪ್ಪಿನ  ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.  ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ 6 ರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ, ರಾತ್ರೆ ಮಲಗುವ ಮೊದಲು ಕುಡಿಯುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ.

Advertisement

ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ. ಈ ಸೊಪ್ಪು ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ರಕ್ತ ನಾಳವು ಬ್ಲಾಕ್ ಆಗುವುದನ್ನು ಇದು ತಡೆಯುತ್ತದೆ. ಆದ್ದರಿಂದ ನಾವು ನುಗ್ಗೆ ಗಿಡದ ಹೂವನ್ನು ಅಥವಾ ಎಲೆಯನ್ನು ವಾರಕ್ಕೊಮ್ಮೆಯಾದರೂ ಪಲ್ಯ, ಸಾಂಬಾರ್ ಅಥವಾ ಇನ್ನಿತರ ಯಾವುದೇ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ಹೃದಯ ರೋಗದ ಸಮಸ್ಯೆಯಿಂದ ದೂರವಿರಬಹುದು.

ನುಗ್ಗೆ ಸೊಪ್ಪು ಹಾಲಿಗಿಂತ 4 ರಷ್ಟು ಅಧಿಕ ಕ್ಯಾಲ್ಸಿಯಂ ನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ನುಗ್ಗೆ ಸೊಪ್ಪಿನ ರಸ ತೆಗೆದು, ಅದಕ್ಕೆ ಹಾಲು ಸೇರಿಸಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. (ಒಂದು ಲೋಟ ಹಾಲಿಗೆ ೧ ರಿಂದ ೨ ಚಮಚ ರಸ ಸಾಕಾಗುತ್ತದೆ).

ನುಗ್ಗೆ ಸೊಪ್ಪನ್ನು ನುಣುಪಾಗಿ ಅರೆದು, ಅದಕ್ಕೆ ಜೇನುತುಪ್ಪ ಮತ್ತು ಕಾಯಿ ಹಾಲು ಸೇರಿಸಿ 2 – 3 ಸಲ ಕುಡಿಯುವುದರಿಂದ ಭೇದಿ ಹತೋಟಿಗೆ ಬರುತ್ತದೆ. ಗಮನಿಸಿ ಇದನ್ನು ಹೆಚ್ಚು ಕುಡಿಯಬೇಡಿ.

ಊತ ನಿವಾರಣೆಗೆ ನುಗ್ಗೆ ಸೊಪ್ಪಿನ ಎಣ್ಣೆಯನ್ನು ತಯಾರಿಸಿಕೊಂಡು, ಊತದ ಭಾಗಕ್ಕೆ ಇಳಿಮುಖವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ಊತ ಇಳಿಯುತ್ತದೆ. ಹಾಗು ಒಂದು ಬಟ್ಟೆಯಲ್ಲಿ ನುಗ್ಗೆ ಸೊಪ್ಪನ್ನು ಹಾಕಿ ಗಂಟು ಕಟ್ಟಿಕೊಂಡು ಊತವಿರುವ ಜಾಗಕ್ಕೆ ಇದರಿಂದ ಬಿಸಿ ಶಾಖ ಕೊಡುವುದರಿಂದಲೂ ಕೂಡ ಊತ ಕಡಿಮ್ಯಾಗುತ್ತದೆ. ನುಗ್ಗೆ ಸೊಪ್ಪು ಮತ್ತು ಅದರ ಹೂವುಗಳನ್ನು ಸೇರಿಸಿ ತಲೆಗೆ ಹಾಕಿ ಉಜ್ಜುವುದರಿಂದ ಮತ್ತು, ನುಗ್ಗೆ ಸೊಪ್ಪಿನ ರಸದಲ್ಲಿ ಕಾಳು ಮೆಣಸನ್ನು ಅರೆದು, ತಲೆಗೆ ತೆಳ್ಳಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

Advertisement

ಮನುಷ್ಯನಲ್ಲಿ ಮುಖ್ಯವಾದ ಅಂಗಗಳಲ್ಲಿ ಕಣ್ಣೂ ಒಂದು ಭಾಗ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಹಿಂದಿನ ಕಾಲದಲ್ಲಿ ವಯಸ್ಸಾದವರು ಮಾತ್ರ ದ್ರಷ್ಟಿ ದೋಷದಿಂದ ಬಳಲುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ದ್ರಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅನೇಕ ಪೋಷಕಾಂಶಗಳ ಕೊರತೆ ಅಥವಾ ಇನ್ನಿತರ ಕಾರಣಗಳಿರಬಹುದು. ಕಣ್ಣಿನ ಆರೋಗ್ಯಕ್ಕೆ “A” ಜೀವಸತ್ವ ಮುಖ್ಯವಾಗಿದೆ. ನುಗ್ಗೆಸೊಪ್ಪು ಕ್ಯಾರೆಟಿಗಿಂತಲೂ 4 ರಷ್ಟು ಅಧಿಕ “A” ಜೀವಸತ್ವವನ್ನು ಹೊಂದಿದೆ. ಆದ್ದರಿಂದ ಮನೆಯಲ್ಲಿ ನುಗ್ಗೆಸೊಪ್ಪಿನ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೊಟ್ಟೆ ಹುಳುಗಳ ನಿವಾರಣೆಗೆ ನಾವು ಆರು ತಿಂಗಳಿಗೊಮ್ಮೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅದರ ಬದಲು ನುಗ್ಗೆ ಕಾಯಿಯನ್ನು ನಿಯಮಿತವಾಗಿ ಊಟದಲ್ಲಿ ಬಳಸುವುದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ನಿಯಂತ್ರಿಸಬಹುದು. ಮೊಡವೆಗಳ ನಿವಾರಣೆಗೆ ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ. ಆಯುರ್ವೇದದ ಪ್ರಕಾರ ನುಗ್ಗೆಸೊಪ್ಪು ಮತ್ತು ನುಗ್ಗೆಕಾಯಿ ಉಷ್ಣಕಾರಕವಾಗಿದ್ದು, ವಾತ ಮತ್ತು ಕಫ ನಿವಾರಕ.

ವಿಶೇಷ ಸೂಚನೆ :-  ಗರ್ಭಿಣಿಯರು ಮತ್ತು ಥೈರಾಯ್ಡ್ ಸಮಸ್ಯೆ ಇರುವವರು ನುಗ್ಗೆಸೊಪ್ಪು ಸೇವನೆಗೆ ಮೊದಲು ನಿಮ್ಮ ಡಾಕ್ಟರ್ ಬಳಿ ಸಲಹೆ ಪಡೆದುಕೊಳ್ಳಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

5 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

5 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

7 hours ago

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…

7 hours ago

ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ

ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…

7 hours ago

2025ರ ನಾಗರಪಂಚಮಿಯಲ್ಲಿ ಈ ರಾಶಿಗಳಿಗೆ ಅದೃಷ್ಟ! :ನಾಗದೇವರ ಕೃಪೆಗಾಗಿ ಹೀಗೆ ಮಾಡಿ…

ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…

12 hours ago