ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದ ಆರೋಪಿಯ ಮನೆಯನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಕೆಡವಿ ಹಾಕುವ ಕಾರ್ಯ ನಡೆಸಲಾಗಿದೆ. ಆರೋಪಿಯು 5 ದಿನಗಳ ಹಿಂದೆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.
ಉತ್ತರ ಪ್ರದೇಶದ ಫತೇಪುರದಲ್ಲಿ ಮಹಮ್ಮದ್ ಸಿಕಂದರ್ ಖಾನ್ ಎಂಬಾತ 19 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ನಂತರ ಆಕೆಯ ತಲೆಯನ್ನು ಇಟ್ಟಿಗೆಯಿಂದ ಪುಡಿಮಾಡಿ ಕೊಂದಿದ್ದ. ಈ ಬಗ್ಗೆ ಯುವತಿಯ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿದ್ದರು.
ತಕ್ಷಣವೇ ಎಚ್ಚೆತ್ತ ಉತ್ತರ ಪ್ರದೇಶದ ಆಡಳಿತವು ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿತ್ತು. ಆರೋಪಿಯ ಬಂಧನದ ಬಳಿಕ ಇದೀಗ ಪೊಲೀಸ್ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಆರೋಪಿಯ ಮನೆ ಕೆಡವಿ ಹಾಕುವ ಕಾರ್ಯ ನಡೆಯುತ್ತಿದೆ.
(Source : ANI )
ಹಿಂದೂ ಮಹಿಳೆಯೊಬ್ಬರು ಸಿಕಂದರ್ ಖಾನ್ ಅಲಿಯಾಸ್ ಸೋನು ಜೊತೆ ದೂರದ ಸಂಬಂಧ ಹೊಂದಿದ್ದರು. ಜೂನ್ 22 ರಂದು, ಅವರು ಮದುವೆ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಫತೇಪುರಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಭೇಟಿಯಾಗಲು ನಿರ್ಧರಿಸಿದರು. ರಾತ್ರಿ 9 ಗಂಟೆ ಸುಮಾರಿಗೆ, ಆ ಯುವತಿ ಮದುವೆ ಹಾಲ್‌ನಿಂದ ಹೊರಹೋಗಿ ಸಿಕಂದರ್ ನನ್ನು ಭೇಟಿಯಾಗಿದ್ದರು. ಮರುದಿನ ಬೆಳಿಗ್ಗೆ, ಆಕೆ ಗಂಭೀರ ಗಾಯದೊಂದಿಗೆ ಪತ್ತೆಯಾಗಿದ್ದರು. ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ತನ್ನೊಂದಿಗೆ ಆಕೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಾಳೆ, ಇದಕ್ಕಾಗಿ ಹತ್ಯೆ ಮಾಡಲಾಗಿದೆ ಸಿಕಂದರ್ ಪೊಲೀಸರಿಗೆ ತಿಳಿಸಿದ್ದ.
ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್ಗೆ…