Advertisement
MIRROR FOCUS

ಉತ್ತರಾಖಂಡದಲ್ಲಿ ಮತ್ತೆ ಮತ್ತೆ ಪ್ರವಾಹ | ಮಲೆನಾಡಿಗೂ ಮುನ್ನಚ್ಚರಿಕೆ ಯಾಕಲ್ಲ… ?

Share
Advertisement
Advertisement

ಉತ್ತರಾಖಂಡದಲ್ಲಿ  ಪ್ರತೀ ವರ್ಷ ಎಂಬಂತೆ ಪ್ರವಾಹ ಕಂಡುಬರುತ್ತಿದೆ. ಸಾಕಷ್ಟು ಹಾನಿಗಳು ಸಂಭವಿಸುತ್ತಿದೆ. ಗುಡ್ಡಗಳ ಕುಸಿತ,  ನೀರು, ಸಂಕಷ್ಟಗಳು ಕಾಣುತ್ತಿದೆ. ಮೇಲ್ನೋಟಕ್ಕೆ ಹವಾಮಾನ ಬದಲಾವಣೆ, ಪರಿಸರದ ಅಸಮತೋಲನ ಇತ್ಯಾದಿಗಳನ್ನು ಹೇಳಿದರೂ ಮೂಲ ಕಾರಣ ಏನು ಏಂಬ ಪ್ರಶ್ನೆ ಕಾಡುತ್ತದೆ. ಇದೇ ಮಾದರಿಯ ಸಣ್ಣ ಬದಲಾವಣೆ ಮಲೆನಾಡು ಭಾಗದಲ್ಲೂ ಆಗುತ್ತಿದೆ ಗಮನಿಸಿದ್ದೀರಾ ?

Advertisement

ಉತ್ತರಾಖಂಡದಲ್ಲಿ ಈ ಬಾರಿಯೂ ಭಾರೀ ಮಳೆ ಹಾಗೂ ಹಾನಿಗಳಾಗಿವೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ ಎಂದು ತಕ್ಷಣದ ಉತ್ತರ ಲಭ್ಯವಾಗುತ್ತಿದೆ. ಭೌಗೋಳಿಕ ಬದಲಾವಣೆಯೂ ಕಾರಣ ಏಕಲ್ಲ ? ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಕೆಲವು ಅಧ್ಯಯನಗಳು ಪ್ರಾಕೃತಿಕ, ಪರಿಸರದ ಬದಲಾವಣೆಗಳಿಗಿಂತಲೂ ಮಾನವ ಹಸ್ತಕ್ಷೇಪದ ಬದಲಾವಣೆಗಳೇ ಮೊದಲ ಕಾರಣ ಎಂದು ಹೇಳಿವೆ. ಈ ಬಾರಿಯೂ ಮತ್ತೆ ಪ್ರವಾಹ ವಿಪರೀತ ಉಂಟಾದಾಗ ಮತ್ತೆ ಅದೇ ಪ್ರಶ್ನೆಗಳು ಕಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಭೌಗೋಳಿಕತೆಯು  ಹರಿದು ಹೋಳಾಗಲು ಕಾರಣ ಏನು ?.

Advertisement

ಈ ಬಾರಿ ಉತ್ತರಾಖಂಡದಲ್ಲಿನ ಮಳೆ ಗಮನಿಸಿದರೆ ಅ.19 ರವರೆಗೆ ವಾಡಿಕೆ ಮಳೆಗಿಂತ ಶೇ.60  ರಷ್ಟು ಮಳೆ ಹೆಚ್ಚು ಬಿದ್ದಿತ್ತು ಎನ್ನುವುದು ದಾಖಲೆ ಹೇಳುತ್ತದೆ. 2013 ರಲ್ಲಿ  ಕಂಡುಬಂದ ಕೇದಾರನಾಥ ದುರಂತ ಹಾಗೂ ಆ ನಂತರದ ಎಲ್ಲಾ ದುರಂತಗಳೂ ವಾಡಿಕೆ ಮಳೆಗಿಂತ ಹೆಚ್ಚುವರಿಯಾದ ಎಲ್ಲಾ ಸಮಯದಲ್ಲೂ ಅಪಾಯಗಳು ಸಂಭವಿಸಿದೆ.

ಈ ಬಾರಿ ಚಂಪಾವತ್, ನೈನಿತಾಲ್ ಮತ್ತು ಉಧಮ್ ಸಿಂಗ್ ಮೊದಲಾದ ಕಡೆಗಳಲ್ಲಿ 24 ಗಂಟೆಗಳಲ್ಲಿ 403  ಮಿಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಇದನ್ನು ಮೇಘಸ್ಫೋಟ ಎನ್ನುತ್ತಾರೆ. ಉಳಿದಂತೆ ಹಲವು ಕಡೆಗಳಲ್ಲಿ  300 ಮಿಮೀಗಿಂತ ಹೆಚ್ಚು ಮಳೆಯಾಗಿದೆ.  ಒಮ್ಮೆಲೇ ಇಷ್ಟು ಮಳೆ ಸುರಿಯುವ ಕಾರಣದಿಂದ ಸಡಿಲಗೊಂಡ ಮಣ್ಣಿನ ಕಾರಣದಿಂದ ಭೂಕುಸಿತ ಹಾಗೂ ಪ್ರವಾಹಗಳು ಹೆಚ್ಚು ಕಾಣುತ್ತವೆ.

Advertisement

ಉತ್ತರಾಖಂಡವು ಅನೇಕ  ವರ್ಷಗಳಿಂದ ದೇವಭೂಮಿಯಾಗಿದೆ. ಆಧ್ಯಾತ್ಮ ಶಕ್ತಿಯ ಕೇಂದ್ರವೂ ಹೌದು. ಈಚೆಗೆ ಪ್ರವಾಸೋದ್ಯಮ ಹೆಚ್ಚಾಗುತ್ತಿದ್ದಂತೆಯೇ ನಗರೀಕರಣವಾದವು. ನದಿ, ಹೊಳೆಗಳ ವಿಸ್ತಾರ ಕಡಿಮೆಯಾದವು, ಕೃತಕ ಬದಲಾವಣೆಗಳು ಹೆಚ್ಚಾದವು. ಈ ಹಿಂದೆ ಕೇದಾರನಾಥದಲ್ಲಿ ಪ್ರವಾಹ ಎದುರಿಸಿದ ಸಂಕಷ್ಟಗಳು ಈಗ ಅಲ್ಲಲ್ಲಿ  ಮುಂದುವರಿಯುತ್ತಿದೆ.

ಇಂತಹ ಪ್ರಾಕೃತಿಕ ದುರಂತಗಳು ಈಚೆಗೆ ಕೆಲವು ಸಮಯಗಳಿಂದ ಮಲೆನಾಡಿನಲ್ಲೂ ಸಂಭವಿಸುತ್ತಿವೆ. ಕೇರಳದಲ್ಲೂ ನಡೆಯುತ್ತಿವೆ. ಎರಡು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಸಂಭವಿಸಿದೆ. ಚಾರ್ಮಾಡಿ, ಶಿರಾಡಿ ಕಡೆಗಳಲ್ಲೂ ಆಗಾಗ ಸಣ್ಣ ಪುಟ್ಟ ಪ್ರಮಾಣದಲ್ಲಿ ಕಾಣುತ್ತಿದೆ. ಇದಕ್ಕೆ ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪ ಎಂದು ಹಣೆಪಟ್ಟಿ ಕಟ್ಟಬಹುದು. ಆದರೆ ನಮ್ಮಲ್ಲೇ ಎಲ್ಲೋ ಆಗುವ ಘಟನೆಗಳೂ ಎಲ್ಲದಕ್ಕೂ ಕಾರಣವಾಗುತ್ತದೆ. ಎತ್ತಿನಹೊಳೆಯ ಕಡೆಗೆ ತೆರಳಿದರೆ ಅಪಾಯ ಪ್ರಮಾಣದ ಪ್ರಾಕೃತಿಕ ಬದಲಾವಣೆ ಕಂಡರೆ, ಶಿರಾಡಿ, ಚಾರ್ಮಾಡಿ, ಮಡಿಕೇರಿ ಕಡೆಯಲ್ಲೂ ಕಾಣುತ್ತದೆ. ಈ ಬದಲಾವಣೆಗೆ ಒಂದು ಮಿತಿ ಇಲ್ಲದೇ ಇದ್ದರೆ ಮುಂದೆ ಮಲೆನಾಡಲ್ಲೂ ಉತ್ತರಾಖಂಡ ಮಾದರಿಯ ಪ್ರಾಕೃತಿಕ, ಹವಾಮಾನ ಬದಲಾವಣೆ ಎದುರಿಸುವ ದಿನಗಳ ಬಂದೀತು.

Advertisement

(ವಿಡಿಯೋ ಕೃಪೆ : ನೆಟ್ವರ್ಕ್ )

 

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

1 hour ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

1 day ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

1 day ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

1 day ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

1 day ago