ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಅಂತಿಮ ಘಟ್ಟ ತಲುಪಿದ್ದು, ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ಆರಂಭಗೊಂಡಿದೆ.
ಸಿಲ್ಕ್ಯಾರಾ ಸುರಂಗ ಕುಸಿತದಿಂದ ಕಳೆದ 17 ದಿನಗಳಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯ ಆರಂಭಗೊಂಡಿದೆ. ರಕ್ಷಣೆಗೆ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಸುರಂಗ ಕುಸಿದ ಬಳಿಕ ರಕ್ಷಣೆಗಾಗಿ ಕಳೆದ 17 ದಿನಗಳಿಂದ ವಿವಿಧ ಪ್ರಯತ್ನ ಮಾಡಲಾಗಿತ್ತು. ರಕ್ಷಣೆಗೆ ಸುಮಾರು 60 ಮೀಟರ್ ಸುರಂಗ ಕೊರೆದು ಈಗ ಸ್ಟ್ರೆಚರ್‌ನಲ್ಲಿ ಮೂಲಕ ಕಾರ್ಮಿಕರನ್ನು ಹೊರತರುವ ಕೆಲಸ ನಡೆಸಲಾಗುತ್ತಿದೆ. ಕಾರ್ಮಿಕರನ್ನು ತಲುಪಿದ ನಂತರ, ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರನ್ನು ಹೊರತರಲು 3-4 ಗಂಟೆಗಳು ಬೇಕಾಗುತ್ತದೆ. ಪೈಪ್ ಮೂಲಕ ಚಕ್ರದ ಸ್ಟ್ರೆಚರ್‌ನಲ್ಲಿ ಪ್ರತಿ ಕಾರ್ಮಿಕನನ್ನು ಹೊರತೆಗೆ ಕರೆತರಲು ಸುಮಾರು 3-5 ನಿಮಿಷ ತೆಗೆದುಕೊಳ್ಳುತ್ತದೆ.