ಅನೂಚಾನ ವಿದ್ಯಾ ಪ್ರತಿಷ್ಟಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಪರಿಷತ್ತು ಆಶ್ರಯದಲ್ಲಿ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಗಾಯಂತ್ರಿ ಯಜ್ಞದ ಪ್ರಾರಂಭ ಹಾಗೂ ವಸಂತ ವೇದ ಶಿಬಿರ ಉದ್ಘಾಟನೆಗೊಂಡಿತು. ವೇ.ಮೂ ಕರುವಜೆ ಕೇಶವ ಜೋಯಿಸರು ವೇದ ಶಿಬಿರ ಉದ್ಘಾಟಿಸಿದರು.
ವೇದ ಶಿಬಿರ ಉದ್ಘಾಟಿಸಿದ ವೇ.ಮೂ ಕರುವಜೆ ಕೇಶವ ಜೋಯಿಸರು, ವೇದಾಧ್ಯಯನದ ಮೂಲಕ ಮಕ್ಕಳು ಅರಿವನ್ನು ಹೆಚ್ಚು ಮಾಡಿಕೊಳ್ಳಬೇಕು. ಸಂಸ್ಕಾರ ಎಂದರೆ ಜೀವನ ಪಾಠವಾಗಿದೆ. ಪ್ರತೀ ವಿದ್ಯಾರ್ಥಿಗಳೂ ಸಂಸ್ಕಾರದ ಕಡೆಗೂ ಗಮನಹರಿಸಬೇಕು ಎಂದರು.
ಅನೂಚಾನ ವಿದ್ಯಾ ಪ್ರತಿಷ್ಟಾನದ ಅಧ್ಯಕ್ಷ ಶ್ರೀಕೃಷ್ಣ ಭಟ್ ಗುಂಡಿಮಜಲು ಅಧ್ಯಕ್ಷತೆ ವಹಿಸಿದ್ದರು. ವೇದ ಶಿಬಿರದ ಮುಖ್ಯಗುರುಗಳಾದ ಮಹಾಬಲೇಶ್ವರ ಭಟ್ ಪಿ ವಿ ಉಪಸ್ಥಿತರಿದ್ದರು. ಅನೂಚಾನ ವಿದ್ಯಾ ಪ್ರತಿಷ್ಟಾನದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಜೀರ್ಮುಕಿ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…