ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು

June 9, 2025
10:05 AM
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್, ಇದನ್ನೇ ಗಣನೆಗೆ ತೆಗೆದುಕೊಂಡಾಗ ದಿನ ಒಂದರ 4384 ಟನ್ ಬಳಕೆ ಆಗುತ್ತದೆ.ಇದರೊಂದಿಗೆ ಆಮದು ಸುಮಾರು ಎರಡು ಲಕ್ಷ ಟನ್ ಆಗಬಹುದು ಎಂದು ಅಂದಾಜಿಸಿದ್ದಲ್ಲಿ ಈ ಪ್ರಮಾಣ ಸುಮಾರು 4931.5 ಟನ್ ಆಗುವುದು.ಇದರೊಂದಿಗೆ ವೀಳ್ಯದ ಎಲೆ, ಸುಣ್ಣ, ತಂಬಾಕು,ಸಂಬಾರ ಪದಾರ್ಥಗಳು ಇತ್ಯಾದಿಗಳೂ ಸೇರಿದಾಗ ಅವುಗಳ ಮಾರುಕಟ್ಟೆ ಕೂಡ ವೃದ್ಧಿಸುತ್ತಿದೆ ಎನ್ನಬಹುದು.

ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಾನಾ ರೀತಿಯಲ್ಲಿ ದೊರಕುತ್ತದೆ.ಇಲ್ಲಿ ವಿವಿಧ ಹೆಸರಿನ ಪಾನ್ ಮಸಾಲ, ಗುಟ್ಕಾ,ಸಿಹಿ ಸುಪಾರಿ ಇತ್ಯಾದಿಗಳು ಲಭ್ಯವಿದೆ.

Advertisement
Advertisement

ಪಾನ್ ಮಸಾಲ ಮತ್ತು ಗುಟ್ಕಾ : ಇದನ್ನು ಹೆಚ್ಚಾಗಿ ಕೆಂಪು ಅಡಿಕೆಯಿಂದ ತಯಾರಿಸಲಾಗುತ್ತದೆ.ಇದರೊಂದಿಗೆ ಚಾಲಿ ಅಡಿಕೆಯ ಬಳಕೆ ಇದ್ದರೂ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ. ಚಾಲಿಯಲ್ಲಿ ದೊರಕುವ ಕೆಳ ದರ್ಜೆಯ ಅಡಿಕೆ ಇಲ್ಲಿ ಉಪಯೋಗಿಸುವುದೂ ಇದೆ. ಪಾನ್ ಮಸಾಲ ತಯಾರಿಸಲು ಕತ್ತ,ಸುಣ್ಣ,ಕೇಸರಿ,ಸುಗಂಧ ದ್ರವ್ಯಗಳು ಇತ್ಯಾದಿ ಬಳಸಿ ಉತ್ಪಾದಿಸಲಾಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ವಸ್ತುಗಳೊಂದಿಗೆ ತಂಬಾಕು ಮತ್ತು ಕೆಲವು ರಾಸಾಯನಿಕಗಳು ಸೇರಿದ ಉತ್ಪನ್ನವೇ ಗುಟ್ಕಾ ಆಗಿದೆ.ಈ ರೀತಿಯ ಪಾನ್ ಮಸಾಲ ಮತ್ತು ಗುಟ್ಕಾಗಳನ್ನು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವರ್ಗದ ಜನರೂ ಬಳಸುತ್ತಾರೆ. ಇಂತಹ ಉತ್ಪನ್ನಗಳಿಗೆ ಗುಜರಾತ್,ಮಹಾರಾಷ್ಟ್ರ,ಬಿಹಾರ,ಒಡಿಶಾ,ಮದ್ಯ ಪ್ರದೇಶ, ಉತ್ತರ ಪ್ರದೇಶ, ಈಶಾನ್ಯ ಭಾರತದ ರಾಜ್ಯಗಳು ಇಲ್ಲೆಲ್ಲಾ ಅಧಿಕ ಬೇಡಿಕೆ ಇದ್ದರೆ ಅಲ್ಲಿಗೆ ಹೋಲಿಸಿದಾಗ ದಕ್ಷಿಣ ಭಾರತದಲ್ಲಿ ಇವಕ್ಕೆ ಬೇಡಿಕೆ ಕಡಿಮೆ.

ಬೀಡಾದ ಸೇವನೆಯಿಂದ ಹಲ್ಲು ಕೆಂಪು ಆಗುವುದರಿಂದ ಗ್ರಾಹಕರು ಗುಟ್ಕಾ, ಪಾನ್ ಮಸಾಲಗಳಿಗೆ ಶರಣಾಗುತ್ತಿದ್ದು ಇವುಗಳ ಸೇವನೆಯಿಂದ ಕೆಲಸದ ಒತ್ತಡ ನಿವಾರಣೆ, ಏಕಾಂತದಿಂದ ದೂರವಿರಲು ಸಹಕಾರಿ ಆಗುತ್ತದೆ ಎಂಬ ನಂಬಿಕೆ ಇದರ ಗ್ರಾಹಕರದ್ದಾಗಿದೆ.

ಪಾನ್ ಮಸಾಲ ಮತ್ತು ಗುಟ್ಕಾಗಳಲ್ಲಿ ವಿವಿಧ ವರ್ಗ ಮತ್ತು ನಮೂನೆಗಳು ಇವೆ.ಉದಾಹರಣೆಗೆ ರಜನಿ ಗಂದ,ವಿಮಲ್,ಖಾಲೇಜ,ರೆಬೆಲ್,ಮಾಣಿಕ್ ಚಂದ್, ಪಾನ್ ಪರಾಗ್, ಮಾರುತಿ ಇತ್ಯಾದಿ. ಇವುಗಳಲ್ಲಿ ಪ್ರೀಮಿಯಂ, ಸಿಲ್ವರ್ ಕೌಟೆಡ್,ಇತ್ಯಾದಿ ವರ್ಗಗಳಿವೆ.ಗ್ರಾಹಕರ ರುಚಿಗೆ ಅನುಗುಣವಾಗಿ ಇವು ಮಾರಾಟ ಆಗುತ್ತದೆ. ದೇಶದಾದ್ಯಂತ ಇವುಗಳಿಗೆ ಹಳ್ಳಿ, ಪಟ್ಟಣ ಎಂಬ ವ್ಯತ್ಯಾಸ ಇಲ್ಲದೆ ಇವು ಮಾರಾಟ ಆಗುತ್ತಿದೆ.

Advertisement

ಒಂದು ಮಾರುಕಟ್ಟೆ ಸಮೀಕ್ಷಾ ವರದಿ ಪ್ರಕಾರ ಭಾರತದಲ್ಲಿ ಸುಮಾರು 45 ಸಾವಿರ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವ್ಯವಹಾರ ಈ ಉತ್ಪನ್ನಗಳಿಂದ ಆಗುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 12.1 ರಷ್ಟು ಜನ ಇದರ ಸೇವನೆ ಮಾಡುತ್ತಿದ್ದಾರೆ ಎನ್ನುತ್ತಿದೆ ಈ ವರದಿ.ಇದರ ಪ್ರಕಾರ ಗುಜರಾತಿನ ಶೇಕಡಾ 69.16 ಇವುಗಳನ್ನು ಬಳಸಿದರೆ ಅತೀ ಕಡಿಮೆ ಅಂದರೆ ಉತ್ತರ ಪ್ರದೇಶದಲ್ಲಿ ಈ ಪ್ರಮಾಣ ಶೇಕಡಾ 24.25 ಆಗಿದೆ. ಈ ಎಲ್ಲಾ ಉತ್ಪನ್ನಗಳನ್ನು ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳೂ ಪಾಕಿಸ್ತಾನ,ಬಾಂಗ್ಲಾ ದೇಶ,ಶ್ರೀಲಂಕಾ,ಇಂಗ್ಲೆಂಡ್,ಅಮೆರಿಕ ಮುಂತಾದ ರಾಷ್ಟ್ರಗಳಿಗೆ ಭಾರತದಿಂದ ರಫ್ತು ಆಗುತ್ತದೆ.

ಸಿಹಿ ಸುಪಾರಿ :  ದೇಶದ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸಿಹಿ ಸುಪಾರಿಗಳು ಲಭ್ಯವಿದ್ದು ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ.ಇವು ಪ್ಯಾಕೆಟ್ ಮತ್ತು ಡಬ್ಬಗಳಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ.ಇವುಗಳಲ್ಲಿ ಫ್ಲೇವರ್ಡ್, ಸೆನ್ಟೆಡ್, ಸಿಲ್ವರ್ ಕೋಟಡ್,ಕೇಸರ್,ಮಿಲ್ಕ್ ಕೋಟೆಡ್, ಏಲಕ್ಕಿ, ಗುಲಾಬಿ ಪೈನಾಪಲ್, ಸನ್ನಿ ರಾಯಲ್ ಮುಂತಾದವುಗಳ ಪರಿಮಲಗಳಲ್ಲಿವೆ.

ಮಾರುಕಟ್ಟೆಯಲ್ಲಿ ಲಭ್ಯ ಇರುವ ಬ್ರಾಂಡಗಳಲ್ಲಿ ಮುಖ್ಯ ಆದವುಗಳೆಂದರೆ ಕ್ಯಾಂಪ್ಕೊ ಕಾಜು ಸುಪಾರಿ, ಶಿರಸಿಯ ತೋಟಗಾರ್ಸ್ ಸಹಕಾರಿಯ ಟಿ ಎಸ್‌ ಎಸ್ ಟೈಗಾರ್, ಅರ್ಜುನ್,ಗೋಲ್ಡ್,‌ ಟ್ರೈನ್,ಸ್ಪೂರ್ತಿ.ಇನ್ನು ರಾಷ್ಟ ಮಟ್ಟದ ರಾಜಾಜಿ ಆನ್ಲೈನ್,ಮಿಲನ್, ನೇಚರಲ್ಸ್ ಬೈಟ್, ದೆಲೈಟ್, ಚಾರ್ಮಿನ್, ಭಾವೆ ಬುಲಿಯನ್ ಇತ್ಯಾದಿಗಳು. ಈ ಎಲ್ಲಾ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ ಇದ್ದು,ಇವನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮಲ್ಲಿಂದ ರಫ್ತು ಮಾಡಲಾಗುತ್ತಿದೆ.
ಗಮನಿಸಬೇಕಾದ ಅಂಶಗಳು..

  1. ಹಣ್ಣು ಅಡಿಕೆ, ಚಾಲಿ ಅಡಿಕೆ ಮತ್ತು ಕೆಂಪು ಅಡಿಕೆ ಇವುಗಳ ಬಳಕೆ ಒಂದೇ ಉತ್ಪನ್ನ ಆಗಿ ಅತ್ಯಲ್ಪ. ಬದಲಾಗಿ ಇವುಗಳನ್ನು ಇತರ ಉತ್ಪನ್ನಗಳಾದ ಬೀಡಾ,ಸುಗಂಧ ಸುಪಾರಿ,ಪಾನ್ ಮಸಾಲ,ಗುಟ್ಕಾ ಇತ್ಯಾದಿಗಳಲ್ಲಿ ಒಂದು ಉಪ ಉತ್ಪನ್ನವಾಗಿ ಬಳಸಿ ಅಡಿಕೆಯ ಮೌಲ್ಯ ವರ್ಧನೆ ಆಗುತ್ತಿದೆ.ಆದ್ದರಿಂದ ಅಡಿಕೆ ಒಂದೇ ಆಗಿ ಇದರ ಬಳಕೆ ಕಡಿಮೆ.
  2. ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಬಹುಪಾಲು ಮೌಲ್ಯ ವರ್ಧನೆಗೆ ಒಳಪಟ್ಟು ಬೇಡಿಕೆಯ ಹೆಚ್ಚಳಕೆ ದಾರಿ ಮಾಡಿ ಕೊಡುತ್ತಿದೆ.
  3. ಅಡಿಕೆಯ ವ್ಯವಹಾರ ಬಳಕೆದಾರ ಪ್ರದೇಶದಲ್ಲಿ ಸಾಮಾನ್ಯವಾಗಿ ಸಾಲದ ರೂಪದಲ್ಲಿ ಆಗುತ್ತಿದ್ದು,ಇದು ಮಾರುಕಟ್ಟೆಯಲ್ಲಿ ಧಾರಣೆಯ ಏರು ಪೇರಿಗೆ ದಾರಿ ಮಾಡಿಕೊಡಬಹುದು.ಅಲ್ಲದೆ ಉತ್ಪಾದನಾ ಪ್ರದೇಶದಲ್ಲಿರುವ ಬಳಕೆ ಪ್ರದೇಶದ ಪ್ರತಿನಿಧಿಗಳು,ಸ್ಥಳೀಯ ವ್ಯಾಪಾರಸ್ಥರು ಇದರಿಂದಾಗಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿ ಸೋತು ಬೆಳೆಗಾರರಿಗೆ ಪಾವತಿ ಮಾಡದೇ ಇರುವುದು ಸ್ವಾಭಾವಿಕ.
  4. ಚಾಲಿ ಮತ್ತು ಕೆಂಪು ಅಡಿಕೆಯಿಂದ ಉತ್ಪಾದಿಸಲ್ಪಡುವ ಉತ್ಪನ್ನಗಳ ಮಾರುಕಟ್ಟೆಯ ಪ್ರಮಾಣ ದೇಶದಲ್ಲಿ ಇಂದು ಸುಮಾರು ಎಪ್ಪತ್ತ ಐದು ಸಾವಿರ ಕೋಟಿ ರೂಪಾಯಿಗಳಷ್ಟು ವಾರ್ಷಿಕವಾಗಿ ಆಗಿರಬಹುದಾಗಿದೆ.ಇದರಲ್ಲಿ ಬೀಡಾ,ಗುಟ್ಕಾ, ಪಾನ್ ಮಸಾಲ,ಸಿಹಿ ಸುಪಾರಿ ಇತ್ಯಾದಿಗಳು ಸೇರುತ್ತವೆ.
  5. ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್, ಇದನ್ನೇ ಗಣನೆಗೆ ತೆಗೆದುಕೊಂಡಾಗ ದಿನ ಒಂದರ 4384 ಟನ್ ಬಳಕೆ ಆಗುತ್ತದೆ.ಇದರೊಂದಿಗೆ ಆಮದು ಸುಮಾರು ಎರಡು ಲಕ್ಷ ಟನ್ ಆಗಬಹುದು ಎಂದು ಅಂದಾಜಿಸಿದ್ದಲ್ಲಿ ಈ ಪ್ರಮಾಣ ಸುಮಾರು 4931.5 ಟನ್ ಆಗುವುದು.ಇದರೊಂದಿಗೆ ವೀಳ್ಯದ ಎಲೆ, ಸುಣ್ಣ, ತಂಬಾಕು,ಸಂಬಾರ ಪದಾರ್ಥಗಳು ಇತ್ಯಾದಿಗಳೂ ಸೇರಿದಾಗ ಅವುಗಳ ಮಾರುಕಟ್ಟೆ ಕೂಡ ವೃದ್ಧಿಸುತ್ತಿದೆ ಎನ್ನಬಹುದು.

ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಯಿಂದಾಗಿ ನಾನಾ ರೀತಿಯ ಉಪ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಅವುಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಇದರೊಂದಿಗೆ ಉದ್ಯೋಗ ಅವಕಾಶ,ಆದಾಯ ಇವೆಲ್ಲಾ ಹೆಚ್ಚು ಆಗಲು ಅವಕಾಶ ಆಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ಜಾನುವಾರು ಮೇಯಿಸಲು ಅವಕಾಶ
July 24, 2025
11:13 PM
by: The Rural Mirror ಸುದ್ದಿಜಾಲ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ
ಬಸ್ಸು ಚಾಲಕನಿಗೆ ಹಲಸಿನ ಊಟ ತಂದ ಸಂಕಷ್ಟ…!
July 24, 2025
7:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group