Advertisement
MIRROR FOCUS

#RuralDevelopment | ತೆಂಗಿನ ಗೆರಟೆಯ ಮೌಲ್ಯವರ್ಧನೆ | ಮಹಿಳೆಯರಿಂದ ಆರ್ಥಿಕ ಸ್ವಾವಲಂಬನೆಯ ಹೆಜ್ಜೆ |

Share

ತೆಂಗಿನಕಾಯಿಯ ಮೌಲ್ಯವರ್ಧನೆಯ ಕಡೆಗೆ ಮಹಿಳೆಯರು ಮನಸ್ಸು ಮಾಡಿದ್ದಾರೆ. ಗ್ರಾಮೀಣ ಅಭಿವೃದ್ಧಿ ಹಾಗೂ ಗ್ರಾಮೀಣ ಆರ್ಥಿಕಕತೆಯನ್ನು ಹೆಚ್ಚಿಸುವ, ಬಲಪಡಿಸುವ ಉದ್ದೇಶದಿಂದ ಮಹತ್ವ ಯೋಜನೆಗಳು ಸಿದ್ಧವಾಗುತ್ತಿದೆ. ಈ  ಯೋಜನೆಯ ಮೂಲಕ ಸಂಜೀವಿನಿ ಒಕ್ಕೂಟದ ಮಹಿಳೆಯರು ಸ್ವಾವಲಂಬನೆಯ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇಲ್ಲಿ ತೆಂಗಿನ ಕಾಯಿಯ ಗೆರಟೆ ಉಪಯೋಗಿಸಿ ಹಲವು ವಸ್ತುಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯರು ಈಗ ತೆಂಗಿನಕಾಯಿಯ ಚಿಪ್ಪಿಯ ಮೂಲಕ ಕಲಾಕೃತಿ ರಚನೆಯ ಮೂಲಕ ಸುದ್ದಿ ಮಾಡುತ್ತಿದ್ದಾರೆ. ತೆಂಗಿನ ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಹೀಗೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ವಿವಿಧ ಬಗೆಯ ತರಬೇತಿ ನಡೆದಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೂಲಕ ಆರ್ಥಿಕ ಸ್ವಾವಲಂಬನೆಯ ಹಾದಿಯ ಕಡೆಗೆ ದಾರಿ ತೋರಿಸಲಾಗುತ್ತಿದೆ.

Advertisement

ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ,  ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗಿದೆ. ತೆಂಗಿನ ಗೆರಟೆಯ ಮೂಲಕ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಪುತ್ತೂರಿನ ಕೋಡಿಂಬಾಡಿ, ವಿಟ್ಲದ ಪಡ್ನೂರು, ಮೂಡಬಿದರೆಯ ಅಳಿಯೂರು ತರಬೇತಿ ನೀಡಲಾಗಿದೆ. ಇದರ ಜೊತೆಗೆ ಪೊಳಲಿ ರಾಮಕೃಷ್ಣ ತಪೋವನದ ಆಶ್ರಯದಲ್ಲಿವಿಜಯಾ ಗ್ರಾಮೀಣ ಬ್ಯಾಂಕ್‌  ಸಹಯೋಗದೊಂದಿಗೆ ಕೂಡಾ ಪೊಳಲಿಯಲ್ಲಿ ತರಬೇತಿ ನೀಡಲಾಗಿದೆ. ವಿಶೇಷವಾಗಿ ತೆಂಗಿನ ಗೆರಟೆಯ ಮೌಲ್ಯವರ್ಧನೆಯ ಕಡೆಗೆ ಗಮನಹರಿಸಲಾಗಿತ್ತು. ತರಬೇತಿ ಪಡೆದ ಎಲ್ಲಾ ಸಂಘದ ಮಹಿಳಾ ಸದಸ್ಯರು ಕೆಲಸ ಆರಂಭಿಸುತ್ತಿದ್ದಾರೆ. ಅದರಲ್ಲೂ ಆರಂಭದಲ್ಲಿ ತರಬೇತಿ ಪಡೆದ ಕೋಡಿಂಬಾಡಿ ತಂಡವು ತನ್ನ ಕೆಲಸವನ್ನು ವಿಸ್ತರಿಸಿದೆ.

Advertisement

ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು  ಫೆಬ್ರವರಿ ತಿಂಗಳಲ್ಲಿ ತರಬೇತಿ ಪಡೆದಿದ್ದು, ಒಟ್ಟು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಮೂರೂ ತಂಡಗಳಿಗೆ ಪಾಲಿಶ್ ಮತ್ತು ಕಟಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಪರಿಣತಿ ಇದೆ.ಈಗ ಗಟ್ಟಿಮುಟ್ಟಾದ ಕೀಚೈನ್‌, ಅಡುಗೆ ಮನೆಗೆ ಬೇಕಾದ ಪಾತ್ರೆಗಳು, ಕಪ್‌, ಸ್ಮರಣಿಕೆ ಇತ್ಯಾದಿ ಮಾಡಿದ್ದಾರೆ. ಈ ಬಾರಿ ತ್ರಿವರ್ಣದ ಬ್ಯಾಡ್‌ ಕೂಡ ತಯಾರಿಸಿದ್ದಾರೆ. ಮಹಿಳಾ ತಂಡದ ಕೆಲಸಗಳು ಹೆಚ್ಚು ಗಮನ ಸೆಳೆದಿದೆ.

ಈ ತಂಡದಲ್ಲಿ 30 ಮಂದಿ ಮಹಿಳೆಯರು 3 ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆ. ಜನನಿ, ಅಕ್ಷಯ ಹಾಗೂ ಜ್ಞಾನ ಸಂಜೀವಿನಿ ಘಟಕಗಳಾಗಿ ಕೆಲಸ ಆರಂಭಿಸಿದ್ದಾರೆ. ಕೆಲವರು ಮನೆಗಳಲ್ಲಿ ಹಾಗೂ ಕೋಡಿಂಬಾಡಿ ಗ್ರಾಪಂ ನೀಡಿರುವ ಕಟ್ಟದಲ್ಲಿ ಕೆಲಸ ಮಾಡುತ್ತಾರೆ. ಕಳೆದ 3 ತಿಂಗಳಿನಿಂದ ಕೆಲಸ ಮಾಡುತ್ತಿರುವ ಮಹಿಳೆಯರು ಪ್ಲಾಸ್ಟಿಕ್‌ ಬಳಸದೆಯೇ ಹಲವು ಉತ್ಪನ್ನಗಳನ್ನು ತಯಾರು ಮಾಡುವಷ್ಟು ಕುಶಲತೆಯನ್ನು ಈಗ ಪಡೆದಿದ್ದಾರೆ. ಸದ್ಯ ಸಂಜೀವಿನಿ ಒಕ್ಕೂಟವು ಸದಸ್ಯರು ತಯಾರಿಸಿರುವ ಉತ್ಪನ್ನಗಳ ಮಾರಾಟವನ್ನೂ ಮಾಡುತ್ತಿದ್ದಾರೆ.

Advertisement
ಗೆರಟೆಯ ಉತ್ಪನ್ನಗಳು
ಗೆರಟೆಯ ಕುಶಲ ಕೆಲಸ
ಗೆರಟೆಯ ಉತ್ಪನ್ನಗಳು
ತಯಾರಿಸಿದ ಉತ್ಪನ್ನಗಳು
ಗೆರಟೆಯ ಉತ್ಪನ್ನಗಳು
ಗೆರಟೆಯ ಉತ್ಪನ್ನಗಳು
ಸಂಜೀವಿನಿ ಒಕ್ಕೂಟದ ಸದಸ್ಯರು ಆಸಕ್ತಿಯಿಂದ ತೆಂಗಿನ ಗೆರಟೆಯ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಇನ್ನಷ್ಟು ಯೋಚನೆ ಹಾಗೂ ಯೋಜನೆಗಳು ಸದಸ್ಯರಲ್ಲಿದೆ ಎಂದು ಹೇಳುತ್ತಾರೆ ಸಂಜೀವಿನಿ ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಾದ ಸಂಧ್ಯಾ ರಾಮಚಂದ್ರ.

ಇವರಂತೆಯೇ ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ,  ಸಂಜೀವಿನಿ ಒಕ್ಕೂಟ ಹಾಗೂ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ವತಿಯಿಂದ ವಿಟ್ಲದಲ್ಲಿ , ಮೂಡಬಿದರೆಯಲ್ಲಿ ಕೂಡಾ ತರಬೇತಿ ನೀಡಲಾಗಿದೆ. ಇಲ್ಲೂ ಕೂಡಾ ಮಹಿಳಾ ತಂಡಗಳು ಕೆಲಸ ಆರಂಭಿಸಿದೆ.

ತಂಡಗಳಿಗೆ ತರಬೇತಿ ನೀಡಿರುವ ದ ಕ ಜಿಲ್ಲಾ ತೆಂಗು ರೈತ ಉತ್ಪಾದಕ ಸಂಸ್ಥೆಯ ದಿನೇಶ್‌ ಅವರು ಹೇಳುವಂತೆ, ಮಹಿಳಾ ತಂಡಗಳು ತರಬೇತು ಪಡೆದ ಬಳಿಕ ಇದೀಗ ಕ್ರಿಯೇಟಿವ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುತ್ತಾರೆ. ಮುಂದೆ ತೆಂಗು ರೈತ ಉತ್ಪಾದಕ ಕಂಪನಿಯ ಮೂಲಕ ತೆಂಗಿನ ಗೆರಟೆಯ ಅಲಂಕಾರಿಕ ವಸ್ತುಗಳನ್ನು ಮಾರುಕಟ್ಟೆಗೂ ವ್ಯವಸ್ಥೆ ಮಾಡಲು ಎಂದು ಸಂಸ್ಥೆಯ ಅಧ್ಯಕ್ಷರು ಆಸಕ್ತಿ ವಹಿಸಿದ್ದಾರೆ ಎನ್ನುತ್ತಾರೆ.

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ  ಜೀವನ್‌ ಅವರು ಕಾರ್ಯಕ್ರಮ ವ್ಯವಸ್ಥಾಪಕರಾಗಿ ನಬಾರ್ಡ್‌ ಮೂಲಕ ನೆರವನ್ನು ಸಂಜೀವಿನಿ ಘಟಕ ಹಾಗೂ ಕಾರ್ಯಕ್ರಮ ಆಯೋಜನೆಗೆ ನೆರವು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಆರ್ಥಿಕ ಸುಧಾರಣೆ ಹಾಗೂ ಸ್ವಾವಲಂಬನೆಯೇ ಮುಖ್ಯ ಉದ್ದೇಶವಾಗಿದೆ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

11 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

17 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

18 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

18 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

18 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

1 day ago