ದಿನದಿಂದ ದಿನಕ್ಕೆ ವಂದೇ ಭಾರತ್ ರೈಲು ದೇಶದಾದ್ಯಂತ ತಮ್ಮ ಸಂಪರ್ಕವನ್ನು ವಿಸ್ತರಿಸುತ್ತಿದೆ. ಅದರಲ್ಲೂ ರಾಜ್ಯದಲ್ಲಿ ದಿನೇ ದಿನೇ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದೀಗ ಮಂಗಳೂರು ಮತ್ತು ಗೋವಾವನ್ನು ಸಂಪರ್ಕಿಸುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಪ್ರಾರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಲಾಗಿದೆ.
ಕರಾವಳಿಯ ನಾಗರಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕರಾವಳಿಯ ಎರಡು ಪ್ರಮುಖ ನಗರಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭದ ಕುರಿತು ನಿರೀಕ್ಷೆ ಹೆಚ್ಚಿದೆ. ಮತ್ತೊಂದು ಗಮನಾರ್ಹ ಬೆಳವಣಿಗೆಯಲ್ಲಿ, ರೈಲ್ವೆ ಇಲಾಖೆಯು ಬೆಂಗಳೂರು-ಮೈಸೂರು-ಮಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸುವ ಮೂಲಕ ಪ್ರಯಾಣಿಕರ ಮನವಿಗೆ ಸ್ಪಂದಿಸಿದೆ. ಇತ್ತೀಚಿಗಷ್ಟೇ ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ಕಾಚಿಗುಡ-ಯಶವಂತಪುರ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಈ ಎರಡು ನಗರಗಳ ನಡುವೆ ಕಡಿಮೆ ಪ್ರಯಾಣದ ಸಮಯವನ್ನು ಹೊಂದಿರುವ ಅತ್ಯಂತ ವೇಗದ ರೈಲು ಇದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತದಲ್ಲಿ ಸಂಪರ್ಕ ಕ್ರಾಂತಿಯನ್ನೇ ತರುವ ನಿಟ್ಟಿನಲ್ಲಿ ಪ್ರಮುಖ ನಗರಗಳ ನಡುವೆ ಸೇವೆ ನೀಡುತ್ತಿದೆ.
ಹೀಗಾಗಿ ಗೋವಾ ಮತ್ತು ಮಂಗಳೂರು ನಡುವೆ ಸಂಚಾರ ಇನ್ನಷ್ಟು ಸುಲಭವಾಗುವ ನಿರೀಕ್ಷೆಯಿದೆ. ದೇಶದಲ್ಲಿ ವಂದೇ ಭಾರತ್ ರೈಲು ಕ್ರಾಂತಿಯನ್ನೇ ಮಾಡುತ್ತಿದೆ. ಕೊಂಚ ದುಬಾರಿಯಾದರೂ ಈ ಸೆಮಿ ಹೈಸ್ಪೀಡ್ ರೈಲು ಎಕ್ಸ್‌ಪ್ರೆಸ್ ಅನ್ನು ಪ್ರಯಾಣಿಕರು ತುಂಬಾ ಇಷ್ಟಪಡುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಎಲ್ಲಾ ರಾಜ್ಯಗಳಿಂದಲೂ ಈ ರೈಲಿಗೆ ಬೇಡಿಕೆ ಬರುತ್ತಿದೆ. ಈ ಕಾರಣಕ್ಕಾಗಿಯೇ ರೈಲ್ವೆ ಸಚಿವಾಲಯವು ಈ ರೈಲುಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ.
- ಅಂತರ್ಜಾಲ ಮಾಹಿತಿ