ಹಸುಗಳಿಗೆ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಅಳವಡಿಸಿ ಹೆಚ್ಚು ಹಾಲು ಉತ್ಪಾದನೆಯನ್ನು ಸಂಗ್ರಹಿಸುವ ಹೊಸದಾದ ತಂತ್ರವನ್ನು ಟರ್ಕಿಯ ಹೈನುಗಾರ ರೈತ ಇಜ್ವತ್ ಕೊಕಾಕ್ ಎಂಬಾತ ತನ್ನ ಹೈನುಗಾರಿಕೆಯಲ್ಲಿ ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ.
ವರ್ಚುವಲ್ ರಿಯಾಲಿಟಿಗಳ ಮೂಲಕ ಹಸುಗಳಿಗೆ ಆಹ್ಲಾದಕರ ದೃಶ್ಯಗಳು ಮತ್ತು ಶಬ್ದಗಳು ಸಂತೋಷಪಡಿಸುತ್ತದೆ. ಇದರಿಂದ ಅವುಗಳು ಹೆಚ್ಚು ಹಾಲು ಉತ್ಪಾದಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳುತ್ತದೆ. ಕೋಕಾಕ್ ತಮ್ಮ ಹಸುಗಳಿಗೆ ವಿಆರ್ ಹೆಡ್ ಸೆಟ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಅವರ ಜಾನುವಾರುಗಳು ಪ್ರಕಾಶಮಾನವಾದ ಸೂರ್ಯನ ಬೆಳಕನ್ನು ಹೊಂದಿರುವ ಸೊಂಪಾದ ಹೊಲಗಳಲ್ಲಿ ಇವೆ ಎಂದು ಭಾವಿಸಬೇಕೆಂದು ಈ ರೀತಿ ಮಾಡಿದ್ದಾರೆ.
ಈ ಹೆಡ್‌ಸೆಟ್‌ಗಳನ್ನು ಬಳಿದ ನಂತರ ಹಸುಗಳು ದಿನಕ್ಕೆ 22 ಲೀಟರ್‌ನಿಂದ 27 ಲೀಟರ್‌ಗಳಿಗೆ ಹಾಲನ್ನು ಹೆಚ್ಚಿಸಿಕೊಂಡಿದೆ. ಆದರೆ ಹಸುಗಳಿಗೆ ಕೆಂಪು ಹಾಗೂ ಹಸಿರು ಬಣ್ಣ ಗೋಚರಿಸೋದಿಲ್ಲ. ಹೀಗಾಗಿ ತಜ್ಞರು ವಿಆರ್ ಹೆಡ್‌ಸೆಟ್‌ನಲ್ಲಿ ಬಣ್ಣಗಳನ್ನು ಬದಲಾಯಿಸಿದ್ದಾರೆ ಎಂದು ವರದಿ ಹೇಳಿದೆ.