ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ನ ವತಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಯಶಸ್ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಬಿಇಎಲ್‌ನ ನಿವೃತ್ತ ಸೀನಿಯರ್ ಡೆಪ್ಯುಟಿ ಜೆನರಲ್ ಮ್ಯಾನೇಜರ್ ಹಾಗೂ ಕರ್ನಾಟಕ ಬಾರ್ ಕೌನ್ಸಿಲ್‌ನ ವಕೀಲ ಟಿ.ಎನ್.ಸಿ ಲಕ್ಷ್ಮೀನರಸಿಂಹನ್ ಸಂವಿಧಾನದ ಅರ್ಥ, ರಚನೆ ಹಾಗೂ ಅದರ ಅನಿವಾರ್ಯತೆಯ ಕುರಿತು ತಿಳಿಸಿದರು. ಜೊತೆಗೆ ರಾಜ್ಯಪಟ್ಟಿ ರಾಷ್ಟ್ರಪಟ್ಟಿ ಹಾಗೂ ಸಮವರ್ತಿ ಪಟ್ಟಿಗಳ ನಡುವಿನ ವ್ಯತ್ಯಾಸ ಮತ್ತು ಪ್ರಜೆಗಳು, ಸರ್ಕಾರ ಹಾಗೂ ಧರ್ಮದ ನಡುವಿನ ಸಾಮ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಯಶಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡೆಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಶೇಖರ್ ಐಯ್ಯರ್, ಯಶಸ್ ಸಂಯೋಜಕ ಗೋವಿಂದರಾಜ ಶರ್ಮ, ವಿವೇಕಾನಂದ ಪದವಿ ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಈಶ್ವರ ಪ್ರಸಾದ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸುಧೀರ್ ಹಾಗೂ ಯಶಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯಶಸ್ ವಿದ್ಯಾರ್ಥಿಗಳಾದ ಸಾಯಿಕೃಪಾ ಮತ್ತು ಅಶ್ವಿನಿ ಪ್ರಾರ್ಥಿಸಿ, ವಾಸುದೇವ ತಿಲಕ್ ಸ್ವಾಗತಿಸಿದರು. ಯಶಸ್ ವಿದ್ಯಾರ್ಥಿನಿ ಈಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು.