ಮದ್ಯಪಾನವು ನಂಬಿಕೆ, ಪ್ರೀತಿ-ವಿಶ್ವಾಸವನ್ನುಕೆಡಿಸುವುದಲ್ಲದೆ ವ್ಯಕ್ತಿತ್ವದ ನಾಶ ಮಾಡುತ್ತದೆ. ಹೀಗಾಗಿ ವ್ಯಸನ ಮುಕ್ತ ಬದುಕು ಹೊಸ ಬದುಕನ್ನು ಕಟ್ಟಿಕೊಡುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮದ್ಯ ವ್ಯಸನ ಮುಕ್ತರಾಗಿ ನೂರು ದಿನ ಪೂರೈಸಿದವರು ಧರ್ಮಸ್ಥಳಕ್ಕೆ ಬಂದು ಪರಿಶುದ್ದ್ಧ ಮನದಿಂದದೇವರದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿರುವುದರಿಂದ ಪುನೀತರಾಗಿ ಪವಿತ್ರಾತ್ಮರಾಗಿದ್ದೀರಿ. ದೇವರು ಪೂರ್ಣರಿತಿಯಲ್ಲಿ ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ ಎಂದು ಹೇಳಿದರು.ಈ ವರೆಗೆ ವ್ಯಸನ ಮುಕ್ತರಾದವರೆಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಹೊಸ ಮನೆ ಕಟ್ಟಿಸಿ, ಹೊಸ ವಾಹನ ಖರೀದಿಸಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಆರು ವಿಶೇಷ ಸಾಧಕರಿಗೆ“ಜಾಗೃತಿಅಣ್ಣ” ಮತ್ತು “ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆಯವರು, ರಾವಣ, ದುರ್ಯೋಧನನಂತಹವರು ಕೂಡಾ ಹೆಣ್ಣು, ಮಣ್ಣಿನ ವ್ಯಾಮೋಹದಿಂದ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡು ಪರಿತಪಿಸುವಂತಾಯಿತು.ಇಂತಹ ಸಾಕಷ್ಟು ಪುರಾವೆಗಳು ನಮಗೆ ಪುರಾಣ ಕಥೆಗಳಲ್ಲಿ ಸಿಗುತ್ತವೆ. ಆದುದರಿಂದ ಸಣ್ಣ ಪುಟ್ಟ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಧೈರ್ಯ, ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪವನ್ನುಎಲ್ಲರೂ ಬೆಳೆಸಿಕೊಳ್ಳಬೇಕು.ಮದ್ಯವ್ಯಸನದಂತಹ ದುಶ್ಚಟದಿಂದಾಗಿ ವ್ಯಕ್ತಿತ್ವದ ಸರ್ವನಾಶವಾಗುವುದಲ್ಲದೆ ಸಂಸಾರದಜೀವನ ಸಂಸಾರವಾಗುತ್ತದೆ.ಕುಟುಂಬದ ಸದಸ್ಯರ ಬಾಳೆಲ್ಲ ಗೋಳಾಗುತ್ತದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರಾತಾಪಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಕಾರ್ಯಕ್ಕೆಆರಂಭದಲ್ಲಿ ವಿರೋಧ, ಟೀಕೆ, ಅಪಹಾಸ್ಯ ವ್ಯಕ್ತವಾದರೂ ಈಗ ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿದೆ ಎಂದು ಹೇಳಿ ನವಜೀವನ ಸಮಿತಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.
ಉಡುಪಿಯಖ್ಯಾತ ಮನೋವೈದ್ಯಡಾ. ಪಿ.ವಿ. ಭಂಡಾರಿ ಮಾತನಾಡಿ, ಸರ್ವರೋಗಕ್ಕೆ ಸಾರಾಯಿ ಒಳ್ಳೆದು, ಮದ್ಯಪಾನದಿಂದಆರೋಗ್ಯರಕ್ಷಣೆಆಗುತ್ತದೆ, ಬಿಯರ್‍ಕುಡಿದರೆಚಂದಆಗುತ್ತಾರೆ, ಬಿಳಿ ಆಗುತ್ತಾರೆ ಇತ್ಯಾದಿ ತಪ್ಪು ನಂಬಿಕೆ, ಹೇಳಿಕೆಗಳಿಂದ ಕೆಲವರು ಮದ್ಯಪಾನಕ್ಕೆ ಬಲಿಯಾಗುತ್ತಾರೆ.ಇಂತಹ ಅನಧಿಕೃತ ತಪ್ಪು ಹೇಳಿಕೆಗಳಿಗೆ ಯಾರೂ ಬಲಿಯಾಗಬಾರದು ಎಂದು ಅವರು ಹೇಳಿದರು.ಮದ್ಯವ್ಯಸನಿಗಳಿಗೆ ಮನೋವೈದ್ಯರ ಶುಶ್ರೂಷೆ ಅಗತ್ಯವಾಗಿದೆ ಎಂದು ಹೇಳಿದರು. ಯಾರೂ ಕುಡಿದ ಮೇಳೆ ತನಗೆ ಫೋನ್ ಮಾಡಬೇಡಿ. ಕುಡಿಯುವ ಮೊದಲೆ ಫೋನ್ ಮಾಡಿ ಎಂದು ಅವರು ಸಲಹೆ ನೀಡಿದರು.ಜನಜಾಗೃತಿ ವೇದಿಕೆಯ ಸೇವೆಯನ್ನು ಅವರು ಶ್ಲಾಘಿಸಿದರು.ಮಂಗಳೂರಿನ ಫಾದರ್ ಮುಲ್ಲರ್ಸ್‍ಕಾಲೇಜಿನ ಡಾ.ಶಿಜಿ, ಪಿ.ಜೆ.ಬರೆದ ಸಂಶೋಧನಾ ಪ್ರಬಂಧವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸಮಾವೇಶದಲ್ಲಿ 1520 ಮಂದಿ ನವಜೀವನ ಸಮಿತಿ ಸದಸ್ಯರು ಭಾಗವಹಿಸಿದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಡಾ.ಶ್ರೀನಿವಾಸ ಭಟ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ಸ್ವಾಗತಿಸಿದರು. ವೇದಿಕೆಯ ರಾಜ್ಯಾದ್ಯಕ್ಷ ರಾಮಸ್ವಾಮಿ ವಂದಿಸಿದರು.