ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮದ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೌಶಲ್ಯ ಅಭಿವೃದ್ಧಿ ಘಟಕ, ತೋಟಗಾರಿಕೆ ಇಲಾಖೆ, ಸಹಯೋಗದೊಂದಿಗೆ ತರಕಾರಿ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರು ಜಿಕೆವಿಕೆ ಕೌಶಲ್ಯಾಭಿವೃದ್ಧಿ ಘಟಕ ನಿರ್ದೇಶಕಿ ಹಾಗೂ ಪ್ರಾಧ್ಯಾಪಕಿ ಡಾ. ಟಿ.ಕೆ ನಾಗರತ್ನ ಮಾತನಾಡಿ, ತರಕಾರಿ ಬೆಳೆಗಳಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಸಸಿಗಳ ಉತ್ಪಾದನೆ ಅಗತ್ಯವಾಗಿರುತ್ತದೆ. ಹಸಿರು ಮನೆ ಪ್ಲಾಸ್ಟಿಕ್ ಟ್ರೇ, ಕೋಕೋ ಪೀಟ್ ಇಲ್ಲವಾದಲ್ಲಿ ಹೊಲದಲ್ಲಿ ಸೂಕ್ತವಾದ ಸ್ಥಳವನ್ನು ಆರಿಸುವ ಮೂಲಕ ಸಸಿ ಮಡಿಯನ್ನು ತಯಾರಿಸಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗಲಿದೆ ಎಂದು ತಿಳಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel