ಕಾರಿಗೆ ಬೆಂಕಿ ಆಕಸ್ಮಿಕ | ಬೇಸಗೆಯಲ್ಲಿ ಬೇಕಿದೆ ಎಚ್ಚರಿಕೆ ..! |

March 13, 2022
2:26 PM

ವಿಟ್ಲದ ಕೋಡಪದವು ಬಳಿಯ ಸರವು ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಶಬ್ದ ಕೇಳಿತೆಂದು ನಿಲ್ಲಿಸಿ ನೋಡಿದಾಗ ಬೆಂಕಿ ಹತ್ತಿಕೊಂಡ ಬಗ್ಗೆ ಅರಿವಿಗೆ ಬಂದಿದೆ. ಕೆಲಿಂಜದ ನಿವಾಸಿ ಸಿಟ್ರಿನ್‌ ಪಾಯಸ್‌ ಎಂಬವರಿಗೆ ಸೇರಿದ ಕಾರು ಇದಾಗಿದೆ. ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದ್ದಾರೆ. ಅದಾಗಲೇ ಕಾರು ಭಸ್ಮವಾಗಿದೆ.

ಶನಿವಾರ ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನಗೊಂಡಿದ್ದರು. ದೆಹಲಿ, ಹೈದರಾಬಾದ್‌ ನಲ್ಲೂ ಎರಡು ದಿನಗಳ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ವಿಶ್ವದ ಎಲ್ಲೆಡೆಯೂ ಬೇಸಗೆಯ ಕಾಲದಲ್ಲಿ ಅದರಲ್ಲೂ ವಾತಾವರಣದ ಉಷ್ಣತೆ 40 ಡಿಗ್ರಿಗಿಂತ ಹೆಚ್ಚಾದ ಸಮಯದಲ್ಲಿ  ಕಾರುಗಳಿಗೆ ಬೇಗನೆ ಬೆಂಕಿ ತಗಲುತ್ತದೆ. ಅಂತರಾಷ್ಟ್ರೀಯ ಸಮೀಕ್ಷೆ ಪ್ರಕಾರ ವರ್ಷಕ್ಕೆ ಸುಮಾರು 229,500 ವಾಹನಗಳ ಬೆಂಕಿಗೆ ಆಹುತಿಯಾಗುತ್ತದೆ. ಹೀಗೆ ಬೆಂಕಿಯ ಅವಘಡದಿಂದಲೇ ಅಂತರಾಷ್ಟ್ರೀಯವಾಗಿ  ವರ್ಷಕ್ಕೆ ಸರಾಸರಿ 328 ಸಾವುಗಳು, 1,426 ಗಾಯಗಳಾದ ಬಗ್ಗೆ ವರದಿಗಳು ಇವೆ. ಬೆಂಕಿಯ ಅವಘಡಕ್ಕೆ ಕೆಲವೊಮ್ಮೆ ವಾಹನದ  ಕಳಪೆ ನಿರ್ವಹಣೆ ಕೂಡಾ ಕಾರಣವಾಗಿರುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷಗಳು ಇರುತ್ತವೆ. ಇತರ ಋತುಗಳಿಗೆ ಹೋಲಿಸಿದರೆ  ಬೇಸಗೆಯಲ್ಲಿ ಸುಮಾರು 20% ರಿಂದ 30% ರಷ್ಟು ಹೆಚ್ಚು ವಾಹನ ಬೆಂಕಿಗೆ ಕಾರಣವಾಗಿದೆ.

ಬಹುಮುಖ್ಯವಾಗಿ ಬೇಸಗೆಯ ಕಾಲದಲ್ಲಿ  ಎಲ್ಲರೂ ಎಸಿ ಬಳಕೆ ಮಾಡುತ್ತಾರೆ. ಹೀಗಾಗಿ ವಾಹನದ ಸಾಮರ್ಥ್ಯ ಹೆಚ್ಚು ಬಳಕೆಯಾಗುತ್ತದೆ. ಈ ಸಮಯದಲ್ಲಿ ಎಂಜಿನ್‌ ಕೂಡಾ ಹೆಚ್ಚು ಬಿಸಿಯಾಗುತ್ತದೆ. ವಾತಾವರಣದ ಉಷ್ಣತೆಯೂ 40 ಡಿಗ್ರಿಗಿಂತ ಹೆಚ್ಚಿರುವ ಕಾಲದಲ್ಲಿ ವಾಹನದ ಕೂಲೆಂಟ್‌ ಅಥವಾ ಆಯಿಲ್‌ ಆಗಾಗ ಪರಿಶೀಲನೆ ಮಾಡಲೇಬೇಕಾಗುತ್ತದೆ. ಇಂದಿನ ಪೈಪೋಟಿ ಯುಗದಲ್ಲಿ ಕಾರುಗಳಲ್ಲಿ ಹೊಸ ಪೀಚರ್‌ ನೀಡಲಾಗುತ್ತದೆ. ಆದರೆ ಸಣ್ಣ ಸಣ್ಣ ಸಂಗತಿಗಳೂ ಕೂಡಾ ಇಂದು ಅಪಾಯವನ್ನು ತರುತ್ತದೆ.  ರೇಡಿಯೇಟರ್‌ನಲ್ಲಿ ಕೂಲಂಟ್  ಕೊರತೆಯಿಂದಾಗಿ ಸಮಸ್ಯೆ ಬಂದರೆ, ಇಂಧನ ಸೋರಿಕೆ ಅಥವಾ ಇಂಜಿನ್ ಅತಿಯಾಗಿ ಬಿಸಿಯಾಗುವುದರಿಂದ ಕಾರು ಚಾಲನೆಯಲ್ಲಿರುವಾಗಲೇ ಬೆಂಕಿ ತಗುಲಬಹುದು. ಅಥವಾ ಅತಿಯಾದ ಬಿಸಿಲಿನಲ್ಲಿ ನಿಲುಗಡೆ ಮಾಡುವಾಗಲೂ ದೋಷಗಳ ಕಾರಣದಿಂದ ಬೆಂಕಿ ಹಿಡಿಯುವ ಘಟನೆಗಳು ನಡೆದಿವೆ. ಈ ಕಾರಣಗಳಿಂದಾಗಿ ಬೇಸಗೆಯಲ್ಲಿ ಕಾರಿನ ನಿರ್ವಹಣೆ ಅತೀ ಎಚ್ಚರಿಕೆಯಿಂದ ನಡೆಯಬೇಕಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ
August 16, 2026
12:00 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ
ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror