ಹಾಸನ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟಿಯ ಮೂಲಕ ಸಂಚಾರವನ್ನು ಗುರುವಾರ ರಾತ್ರಿಯಿಂದಲೇ ನಿಷೇಧಿಸಿತ್ತು. ಹಾಸನದಿಂದ ಮಾರನಹಳ್ಳಿ ವರೆಗಿನ ಸಂಚಾರ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ. ಶುಕ್ರವಾರ ಬೆಳಗ್ಗೆ 10:30 ರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಗುರುವಾರ ರಾತ್ರಿಯಿಂದಲೇ ಗುಂಡ್ಯ ಹಾಗೂ ಅಡ್ಡ ಹೊಳೆ ಪರಿಸರದಲ್ಲಿ 2 ಸಾಲಿನಲ್ಲಿ ಟ್ಯಾಂಕರ್, ಟ್ರೈಲರ್ ಸಹಿತ ಘನವಾಹನಗಳು ರಸ್ತೆಯ ಮಧ್ಯದಲ್ಲಿಯೇ ನಿಂತು ಸ್ಥಳೀಯರಿಗೂ, ಸಂಚರಿಸಲು ಅಸಾಧ್ಯವಾಗಿತ್ತು. ಶಿರಾಡಿ ಗಡಿಯ ಚೌಡೇಶ್ವರಿ ದೇವಸ್ಥಾನದ ಮೇಲಿನ ಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ ಪರಿಣಾಮ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮರತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. ಗುರುವಾರ ರಾತ್ರಿಯಿಂದಲೂ ಶಿರಾಡಿ ಹಾಗೂ ಮಾರನಹಳ್ಳಿ ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು ಶುಕ್ರವಾರವೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಾರನ ಹಳ್ಳಿಯ ದೊಡ್ಡ ತಪ್ಪಲ್ಲಲ್ಲಿ ಗುಡ್ಡ ಕುಸಿತ ಸಣ್ಣ ಪ್ರಮಾಣದಲ್ಲಿ ಮುಂದುವರೆದಿದೆ. ಇಂದು ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
Vehicular traffic has been permitted at Shiradi Ghati starting at 10:30 am on Friday. However, there have been reports of collapses in the Ghati region. As a result, there is a possibility that traffic may be halted at night for safety reasons.
ಶುಕ್ರವಾರ ಬೆಳಗ್ಗೆ 10:30 ರಿಂದ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಘಾಟಿ ಪ್ರದೇಶದ ಅಲ್ಲಲ್ಲಿ ಕುಸಿತ ಸಂಭವಿಸುತ್ತಿದೆ. ಹೀಗಾಗಿ ರಾತ್ರಿ ವೇಳೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.#shiradighat #rainalert pic.twitter.com/oZw7paQdz6
— theruralmirror (@ruralmirror) July 19, 2024
Advertisement