ದೇಶದಲ್ಲಿ ಪ್ರಯಾಣಿಕರ ಸುರಕ್ಷತೆಯ ಮೇರೆಗೆ ಮೋಟಾರು ವಾಹನ ನಿಯಮಗಳಲ್ಲಿ ಹಲವು ತಿದ್ದುಪಡಿ ಮಾಡಲಾಗಿದೆ. ಇದೀಗ ಭಾರತದಲ್ಲಿ ಕಾರುಗಳಲ್ಲಿ ಎರಡು ಏರ್‌ಬ್ಯಾಗ್, ರೇರ್ ಕ್ಯಾಮಾರ, ಎಬಿಎಸ್ ಬ್ರೇಕ್ ಸೇರಿದಂತೆ ಹಲವು ಸುರಕ್ಷಾ ಫೀಚರ್ಸ್ ಈಗಾಗಲೇ ಕಡ್ಡಾಯ ಮಾಡಲಾಗಿದೆ.
ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತನ್ ಗಡ್ಕರಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ರಸ್ತೆ ಅಪಘಾತ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿಲ್ಲ. ಹೀಗಾಗಿ ಹೈವೆ ರಸ್ತೆಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.
6 ಏರ್‌ಬ್ಯಾಗ್ ಅಂದರೆ ಸದ್ಯ 2 ಇರುವ ಏರ್‌ಬ್ಯಾಗ್‌ಗಳಿಗೆ ಹೆಚ್ಚುವರಿಯಾಗಿ 4 ಏರ್‌ಬ್ಯಾಗ್ ಸೇರಿಸಲು 8,000 ರಿಂದ 1೦,೦೦೦ ರೂಪಾಯಿ ಆಗಲಿದೆ. ಇದರಿಂದ ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಇದರಿಂದ ಭಾರತದಲ್ಲಿ ಆಟೋ ಕಂಪೆನಿಗಳಿಗೆ ಮತ್ತಷ್ಟು ನಷ್ಟವಾಗಲಿದೆ ಅನ್ನೋ ಮಾತು ಸಹ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel