ಸುಳ್ಯದಲ್ಲಿ ಕಾಂಗ್ರೆಸ್ ಮುಖಂಡೆ ಸರಸ್ವತಿ ಕಾಮತ್ ಮೇಲಿನ ಹಲ್ಲೆ ಪ್ರಕರಣದ ಸಂಬಂಧವಾಗಿ ನ್ಯಾಯಾಲಯದ ತೀರ್ಪು ಪ್ರಕಟವಾದ ಬಳಿಕ ಬಿಜೆಪಿ ಮಂಡಲ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ಮೂಲಕ ಒತ್ತಾಯಿಸಿದ್ದರು. ಅದಾದ ಬಳಿಕ ಬಿಜೆಪಿ ಮುಖಂಡರು ಪ್ರಕರಣವನ್ನು ಸಮರ್ಥನೆ ಮಾಡಿ ಸುದ್ದಿಗೋಷ್ಟಿ ಮಾಡಿದ್ದರು, ಮಾತ್ರವಲ್ಲ ಮಂಡಲ ಅಧ್ಯಕ್ಷರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಸಭೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಮಾಡಿರುವ ಭಾಷಣದಲ್ಲಿ, ” ರಾವಣ ರಾಜ್ಯದಲ್ಲಿ ಸೀತೆಯ ಅಪಹರಣವೂ ಸಮರ್ಥನೆ ಇದೆ, ಹೀಗೇ ಇಲ್ಲೂ ಕೂಡಾ ಸಮರ್ಥನೆಯೇ ಕಾಣುತ್ತದೆ, ದೌರ್ಜನ್ಯ ನಡೆಸಿರುವುದು ಸರಿ ಎಂಬ ವಾದವನ್ನು ಖಂಡಿಸಿರುವ ಈ ಭಾಷಣ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋ ಇಲ್ಲಿದೆ…..
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel