Advertisement
The Rural Mirror ವಾರದ ವಿಶೇಷ

ಕಿಂಡಿ ಅಣೆಕಟ್ಟಿನಿಂದ ಗ್ರಾಮೀಣ ಜನರಿಗೆ ಸಂಕಷ್ಟ …! | ಜಾರಿಯಾಗದ ಜಿಲ್ಲಾಧಿಕಾರಿಗಳ ಆದೇಶ |

Share

ಬಳಕೆಯಲ್ಲಿರದ ಕಿಂಡಿ ಆಣೆಕಟ್ಟುಗಳಲ್ಲಿ ಮಳೆಗಾಲದಲ್ಲಿ ಮರದ ತುಂಡು, ಕಸ ತುಂಬಿ ಎರಡು ಬದಿಯ ಹೊಳೆಯ ಮಧ್ಯೆ ಇರುವ ರಸ್ತೆ ಕಡಿತಕ್ಕೆ ಕಾರಣವಾಗುತ್ತಿರುವುದರಿಂದ  ತಕ್ಷಣ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿಯವರು ಮಾಡಿದ ಆದೇಶವನ್ನು ಸ್ಥಳೀಯಾಡಳಿತ ಜಾರಿಗೊಳಿಸದೇ ಇರುವುದರಿಂದ ಅಪಾಯದ ಸ್ಥಿತಿ ಮುಂದುವರಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರಿನಲ್ಲಿ  ನಡೆಯುತ್ತಿದೆ.

ಬಡಗನ್ನೂರು ಗ್ರಾಮದ ಪಟ್ಟೆಯಿಂದ ಮುಂಡೋಳೆ, ಅಂಬಟೆಮೂಳೆ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕಿಸುವ ಬಹುಮುಖ್ಯ ರಸ್ತೆಯ ಪಟ್ಟೆಯಿಂದ 200 ಮೀ. ದೂರದಲ್ಲಿ ದಶಕಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಕಿಂಡಿ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೆಲವು ಸಮಯ ಹಲಗೆ ಆಳವಡಿಸಿ ಪ್ರಯೋಜನಕಾರಿಯಾಗಿದ್ದ ಈ ಕಿಂಡಿ ಆಣೆಕಟ್ಟು ಈ ಸಮಸ್ಯೆಗೆ ಕಾರಣವಾಗುತ್ತಿದೆ.

ಏನು ಸಮಸ್ಯೆ ? : ಇಲ್ಲಿ ಯು ಮಾದರಿಯಲ್ಲಿ ಸೀರೆ ಹೊಳೆ ಹರಿಯುತ್ತದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ. ತಗ್ಗಿನಲ್ಲಿರುವ ಕಿಂಡಿ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ತೇಲಿ ಬರುವ ಮರದ ತುಂಡು, ಕಸ ಕಡ್ಡಿಗಳು ನಿಂತು ಸರಾಗ ನೀರು ಹರಿಯಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಇದರ ಪರಿಣಾಮ ಪಕ್ಷದಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಸುಮಾರು ಅರ್ಧ ಎಕ್ರೆಯಷ್ಟು ಕೃಷಿ ತೋಟ ಕೊರೆದು ಹೋಗಿದೆ. ಜತೆಗೆ ಮಳೆಗಾಲದಲ್ಲಿ ಇಕ್ಕೆಲಗಳ ತೋಡಿನ ನೀರು ಸಂಗಮಗೊಂಡು ರಸ್ತೆಯಲ್ಲಿ ಹರಿದು ರಸ್ತೆ ಕಡಿತಗೊಳ್ಳುತ್ತಾ ಹೋಗುತ್ತಿದೆ. ರಕ್ಷಣಾ ಕ್ರಮಗಳು ಪ್ರಯೋಜನಕ್ಕೆ ಬರುತ್ತಿಲ್ಲ.
ಬೆಟ್ಟಂಪಾಡಿ, ಪೆರಿಗೇರಿ, ಪಾಣಾಜೆ ಸೇರಿದಂತೆ ವಿವಿಧ ಕಡೆಗಳಿಂದ ಈಶ್ವರಮಂಗಲ ತೆರಳುವವರಿಗೆ ಇದು ಸುಲಭ ದಾರಿ. ಈ ರಸ್ತೆಯಲ್ಲಿ ಪಟ್ಟೆ ಸೇರಿದಂತೆ ನಗರಕ್ಕೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ತೆರಳುತ್ತಾರೆ. ಮಳೆಗಾಲದಲ್ಲಿ ಹಲವು ಬಾರಿ ರಸ್ತೆ ಮುಳುಗಡೆಯಾಗುತ್ತಿದ್ದು, ಜನರು ಸಂಕಷ್ಟಪಡುತ್ತಿದ್ದಾರೆ. ಸಣ್ಣ ಮಕ್ಕಳ ಸಂಚಾರಕ್ಕಂತೂ ಅಪಾಯಕಾರಿಯಾಗಿದೆ.
ಜಿಲ್ಲಾಧಿಕಾರಿಗೆ ದೂರು: ಕಿಂಡಿ ಆಣೆಕಟ್ಟಿನ ಕಾರಣದಿಂದ ಉಂಟಾಗಿರುವ ಸಮಸ್ಯೆಯ ಕುರಿತು ಹಾಗೂ ತೆರವಿಗೆ ಕ್ರಮ ಕೈಗೊಳ್ಳುವಂತೆ ನೂರಾರು ಮಂದಿ ಸಾರ್ವಜನಿಕರ ಸಹಿಗಳುಳ್ಳ ಮನವಿಯನ್ನು ಬಡಗನ್ನೂರು ಗ್ರಾ.ಪಂ.ನ ಸುಳ್ಯಪದವಿನಲ್ಲಿ ಎ.17 ರಂದು ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನೀಡಲಾಗಿತ್ತು. ಪರಿಸ್ಥಿತಿಯ ಅರಿವು ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಣೆಕಟ್ಟಿನ ತೆರವಿಗೆ ಸ್ಥಳದಲ್ಲೇ ಆದೇಶ ನೀಡಿದ್ದರು. ಆದರೆ ಸಂಬಂಧಪಟ್ಟವರು ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಈ ಜವಾಬ್ದಾರಿ ನೀಡಲಾಗಿದೆ. ಗ್ರಾ.ಪಂ. ಆಡಳಿತ ಹಾಗೂ ಇಲಾಖೆಯ ಮಧ್ಯೆ ಸಮನ್ವಯದಲ್ಲಿ ಕೊರತೆ ಉಂಟಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

20 hours ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

21 hours ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

2 days ago

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

2 days ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

2 days ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

2 days ago