ವಿದುಷಿ ಶಂಕರಿ ಮೂರ್ತಿ ಅವರಿಗೆ ಶ್ರೀ ಕಲಾಜ್ಯೋತಿ ಪ್ರಶಸ್ತಿ

November 8, 2024
6:55 AM

ಬೆಂಗಳೂರು ಗಾಯನ ಸಮಾಜ ನೀಡುವ ‘ಶ್ರೀ ಕಲಾಜ್ಯೋತಿ ಪ್ರಶಸ್ತಿ’ಗೆ ವಿದುಷಿ ಶಂಕರಿಮೂರ್ತಿ , ಬಾಳಿಲ ಆಯ್ಕೆಯಾಗಿದ್ದಾರೆ. ಕೆ. ಆರ್ ರಸ್ತೆಯ ಗಾಯನ ಸಮಾಜ ಸಭಾಂಗಣದಲ್ಲಿ ನವೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸುವರು.

Advertisement

ಇದೇ ಸಂದರ್ಭದಲ್ಲಿ ವೀಣಾವಾದಕ ವಿದ್ವಾನ್ ಆರ್. ಕೆ‌ ಶಂಕರ್, ಮೃದಂಗ ವಾದಕ ವಿದ್ವಾನ್ ಎನ್. ವಾಸುದೇವ, ಪಿಟೀಲು ವಾದಕ ವಿದ್ವಾನ್ ಕೊಳ್ಳೇಗಾಲ ಗೋಪಾಲಕೃಷ್ಣ ಅವರಿಗೂ ಶ್ರೀಕಲಾ ಜ್ಯೋತಿ ಪ್ರಶಸ್ತಿ ನೀಡಲಾಗುವುದು. 54ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ವಿದ್ವಾನ್ ಡಾ ಎಸ್ . ಸಿ. ಶರ್ಮ ಅವರಿಗೆ ‘ಸಂಗೀತ ಕಲಾರತ್ನ’ ಪ್ರಶಸ್ತಿ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರಿಗೆ ‘ಕರ್ನಾಟಕ ಕಲಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡುವರು.

ಇದೇ ಸಂದರ್ಭದಲ್ಲಿ ಎಂ. ಎ . ಮೀರಾ ಅವರಿಗೆ ‘ಸ್ವರ ಭೂಷಿಣಿ’ ಪ್ರಶಸ್ತಿ, ಶ್ರೀಮತಿ ಗೀತಾ ಸೀತಾರಾಮ ಅವರಿಗೆ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಂದಿನಿ ಹಾಲು, ಮೊಸರು ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ | ಏಪ್ರಿಲ್ 1 ರಿಂದ ಹೊಸ ದರ ಅನ್ವಯ
March 27, 2025
10:58 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 27-03-2025 | ಕೆಲವು ಕಡೆ ಗುಡುಗು ಸಹಿತ ಮಳೆ | ಎ.3 ರಿಂದ ಮತ್ತೆ ಮಳೆ ಸಾಧ್ಯತೆ |
March 27, 2025
2:20 PM
by: ಸಾಯಿಶೇಖರ್ ಕರಿಕಳ
ಗೇರು ಹಣ್ಣು ಸೇವನೆಯಿಂದ ಪೌಷ್ಠಿಕಾಂಶದ ಕೊರತೆ ನಿವಾರಣೆ
March 27, 2025
10:57 AM
by: ದ ರೂರಲ್ ಮಿರರ್.ಕಾಂ
ಆಹಾರ ಕಲಬೆರಕೆ ವಿರುದ್ಧ ಕಠಿಣ ಕ್ರಮ | ಸಚಿವ ಪ್ರಲ್ಹಾದ್  ಜೋಷಿ ಸ್ಪಷ್ಟನೆ
March 27, 2025
10:43 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group