ಬೆಂಗಳೂರು ಗಾಯನ ಸಮಾಜ ನೀಡುವ ‘ಶ್ರೀ ಕಲಾಜ್ಯೋತಿ ಪ್ರಶಸ್ತಿ’ಗೆ ವಿದುಷಿ ಶಂಕರಿಮೂರ್ತಿ , ಬಾಳಿಲ ಆಯ್ಕೆಯಾಗಿದ್ದಾರೆ. ಕೆ. ಆರ್ ರಸ್ತೆಯ ಗಾಯನ ಸಮಾಜ ಸಭಾಂಗಣದಲ್ಲಿ ನವೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸುವರು.
ಇದೇ ಸಂದರ್ಭದಲ್ಲಿ ವೀಣಾವಾದಕ ವಿದ್ವಾನ್ ಆರ್. ಕೆ ಶಂಕರ್, ಮೃದಂಗ ವಾದಕ ವಿದ್ವಾನ್ ಎನ್. ವಾಸುದೇವ, ಪಿಟೀಲು ವಾದಕ ವಿದ್ವಾನ್ ಕೊಳ್ಳೇಗಾಲ ಗೋಪಾಲಕೃಷ್ಣ ಅವರಿಗೂ ಶ್ರೀಕಲಾ ಜ್ಯೋತಿ ಪ್ರಶಸ್ತಿ ನೀಡಲಾಗುವುದು. 54ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ವಿದ್ವಾನ್ ಡಾ ಎಸ್ . ಸಿ. ಶರ್ಮ ಅವರಿಗೆ ‘ಸಂಗೀತ ಕಲಾರತ್ನ’ ಪ್ರಶಸ್ತಿ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರಿಗೆ ‘ಕರ್ನಾಟಕ ಕಲಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡುವರು.
ಇದೇ ಸಂದರ್ಭದಲ್ಲಿ ಎಂ. ಎ . ಮೀರಾ ಅವರಿಗೆ ‘ಸ್ವರ ಭೂಷಿಣಿ’ ಪ್ರಶಸ್ತಿ, ಶ್ರೀಮತಿ ಗೀತಾ ಸೀತಾರಾಮ ಅವರಿಗೆ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು.
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…
ಪರಿಸರದ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮವನ್ನು ತಗ್ಗಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಂಶೋಧನೆಗಳು ಹೇಳುತ್ತವೆ.…
ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಸುಮಾರು 130 ಹೆಕ್ಟೇರ್‌ಗಳಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿರುವ ಬಗ್ಗೆ…
ಕಳೆದ 8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು…
ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನ ಮೈಮುಲ್ ಅಧ್ಯಕ್ಷ…