ಸುಳ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಮತ್ತು ಖಾಸಗಿ ಉದ್ಯೋಗ ಸಂದರ್ಶನಗಳ ಮಾಹಿತಿ | ಉಚಿತ ತರಬೇತಿ ಕಾರ್ಯಗಾರಕ್ಕೆ ನೋಂದಣಿ ಪ್ರಾರಂಭ

October 8, 2023
11:02 AM
ಪಿಯುಸಿ/ ಡಿಗ್ರಿ/ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಮುಂದೇನು ಎನ್ನುವುದಕ್ಕೆ ಇಲ್ಲಿದೆ ಉತ್ತರ.....

ವಿದ್ಯಾಭ್ಯಾಸದ ನಂತರ ನಾವೇನು ಮಾಡಬೇಕು? ಎಂಬುದಕ್ಕೆ ಉತ್ತರವಾಗಿ ಇದೇ ಬರುವ ದಿನಾಂಕ 15/10/2೦23 ಭಾನುವಾರದಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 3:30ರ ವರೆಗೆ ಐಎಎಸ್/ ಕೆಎಎಸ್/ ಬ್ಯಾಂಕಿಂಗ್/ ಎಸ್.ಡಿ .ಎ ಮತ್ತು ಎಫ್.ಡಿ.ಎ ಇತ್ಯಾದಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ನೇಮಕಾತಿಗಳ ವಿವರ , ಪ್ರಶ್ನೆಪತ್ರಿಕೆಗಳ ಸ್ವರೂಪ – ಪರೀಕ್ಷೆಗಳು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ತನ್ನ ಸುಳ್ಯ ಶಾಖೆಯಲ್ಲಿ ಉಚಿತ ಮಾಹಿತಿ ಕಾರ್ಯಗಾರದ ಮೂಲಕ ನೀಡಲಿದೆ.

Advertisement

ಅಲ್ಲದೇ ಖಾಸಗಿ ಉದ್ಯೋಗಗಳಿಗೆ ಪ್ರಯತ್ನಿಸುವವರಿಗಾಗಿ ಕಂಪನಿಗಳ ನೇರ ಸಂದರ್ಶನವನ್ನು ಎದುರಿಸುವ ಬಗ್ಗೆ ಉದ್ಯೋಗ ಕೌಶಲ್ಯತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು.

ವಿದ್ಯಾಮಾತಾ ಅಕಾಡೆಮಿಯು ಸುಳ್ಯದಲ್ಲಿ ನೂತನವಾಗಿ ಶಾಖೆಯನ್ನು ಪ್ರಾರಂಭಿಸಿದ್ದು ಬ್ಯಾಂಕಿಂಗ್, ಪೊಲೀಸ್, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ನೂರಾರು ಅಭ್ಯರ್ಥಿಗಳು ತರಬೇತಿಯನ್ನು ಪಡೆದು ಸೇರಿರುವುದನ್ನು ಸ್ಮರಿಸಿಕೊಳ್ಳಬಹುದು. ಇದೀಗ ಸುಳ್ಯ, ಕೊಡಗು, ಕಾಸರಗೋಡು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಖಾಸಗಿ ಉದ್ಯೋಗಗಳಿಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕೆಂಬ ಯೋಜನೆಯೊಂದಿಗೆ ಉಚಿತ ಕಾರ್ಯಗಾರವನ್ನು ಆಯೋಜಿಸಲಾಗಿದೆ. ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು 12/10/2023 ರ ಒಳಗಾಗಿ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ (ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದಕ್ಷಿಣ ಕನ್ನಡ) ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.ಇಲ್ಲವೇ , 9448527606 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 01-04-2025 | ಎ.2 ರಿಂದ ಮುಂದಿನ 10 ದಿನಗಳವರೆಗೂ ಮಳೆ ಮುನ್ಸೂಚನೆ |
April 1, 2025
3:42 PM
by: ಸಾಯಿಶೇಖರ್ ಕರಿಕಳ
ಹಾಲು ಮೊಸರು, ವಿದ್ಯುತ್ ದರ ದುಬಾರಿ | ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ | ರೈತರಿಗೆ ಪ್ರೋತ್ಸಾಹಧನಕ್ಕೆ ನಿರ್ಧಾರ |
April 1, 2025
8:00 AM
by: The Rural Mirror ಸುದ್ದಿಜಾಲ
ವೃಶ್ಚಿಕ ರಾಶಿ ಯುಗಾದಿ ಸಂವತ್ಸರದ ಫಲಗಳು | ಹೇಗಿದೆ ಈ ವರ್ಷ..?
April 1, 2025
7:32 AM
by: ದ ರೂರಲ್ ಮಿರರ್.ಕಾಂ
ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |
April 1, 2025
7:23 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group