ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಕ್ಯಾಬ್ ಚಾಲಕರ ಮಕ್ಕಳ, ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ‘ವಿದ್ಯಾನಿಧಿ’ ಯೋಜನೆಯ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಯುಕ್ತ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಚಾಲಕರು/ ಪೋಷಕರ ಚಾಲನಾ ಅನುಜ್ಞಾ ಪತ್ರ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು, ಮತ್ತು ಇತರೇ ಅಗತ್ಯ ದಾಖಲೆಗಳನ್ನು ನೀಡಿ, ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಪದವಿ ಪೂರ್ವ, ಪಿಯುಸಿ, ಐಟಿಐ, ಡಿಪ್ಲೋಮ ಹುಡುಗರಿಗೆ 2,500 ಸಾವಿರ ರೂ., ಹುಡುಗಿಯರಿಗೆ 3 ಸಾವಿರ ರೂ. ಪದವಿಯಲ್ಲಿ ಓದುತ್ತಿರುವ ಹುಡುಗರಿಗೆ 5 ಸಾವಿರ ರೂ., ಹುಡುಗಿಯರಿಗೆ 5,500 ರೂ. ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಓದುತ್ತಿರುವ ಹುಡುಗರಿಗೆ 7,500 ಸಾವಿರ ರೂ., ಹುಡುಗಿಯರಿಗೆ 8 ಸಾವಿರ ರೂ.ಎಂಬಿಬಿಎಸ್, ಬಿಇ, ಬಿಟೆಕ್ ಓದುತ್ತಿರುವ ಹುಡುಗರಿಗೆ 10 ಸಾವಿರ ರೂ., ಹುಡುಗಿಯರಿಗೆ 11 ಸಾವಿರ ರೂಗಳನ್ನು ವಿದ್ಯಾನಿಧಿ ಯೋಜನೆಯಡಿಯಲ್ಲಿ ನೀಡಲಾಗುತ್ತದೆ..