ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?

June 17, 2026
7:50 PM
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ದಾಖಲೆಯ ಮಟ್ಟದಿಂದ ಭಾರೀ ಕುಸಿತ ಕಂಡಿದ್ದು, ಚೀನಾದ ಖರೀದಿ ಇಳಿಕೆಯೇ ಪ್ರಮುಖ ಕಾರಣವಾಗಿದೆ. ಕೆಲ ಪ್ರದೇಶಗಳಲ್ಲಿ ಅಡಿಕೆ ಬೆಲೆ 80,000-90,000 ಡಾಂಗ್‌ನಿಂದ 12,000-25,000 ಡಾಂಗ್ ಮಟ್ಟಕ್ಕೆ ಇಳಿದಿದೆ. ಭಾರತದ ಅಡಿಕೆ ಮಾರುಕಟ್ಟೆಗೆ ಸದ್ಯ ಯಾವುದೇ ಪರಿಣಾಮವಿಲ್ಲ. ಆದರೆ ಎಚ್ಚರಿಕೆ ಅಗತ್ಯವಿದೆ.

ಒಂದು ಕಾಲದಲ್ಲಿ ದಾಖಲೆಯ ಮಟ್ಟಕ್ಕೆ ಏರಿದ್ದ ವಿಯೆಟ್ನಾಂನ ಅಡಿಕೆ ಬೆಲೆ ಈಗ ತೀವ್ರ ಕುಸಿತ ಕಂಡಿದೆ. ಚೀನಾದಿಂದ ಬಂದಿದ್ದ ಭಾರೀ ಬೇಡಿಕೆಯ ಕಾರಣ 2024 ರಲ್ಲಿ ಕೆ.ಜಿ.ಗೆ 80,000-90,000 ವಿಯೆಟ್ನಾಮೀಸ್ ಡಾಂಗ್‌ವರೆಗೆ ಏರಿದ್ದ ಅಡಿಕೆ ಬೆಲೆ ಇದೀಗ ಕೆಲ ಪ್ರದೇಶಗಳಲ್ಲಿ 12,000-25,000 ಡಾಂಗ್ ಮಟ್ಟಕ್ಕೆ ಇಳಿದಿದೆ.

ವಿಯೆಟ್ನಾಂನ ಕ್ವಾಂಗ್ ನ್ಗಾಯಿ ಮತ್ತು ಕ್ವಾಂಗ್ ನಾಮ್ ಪ್ರದೇಶಗಳಲ್ಲಿ ಚೀನಾದ ವ್ಯಾಪಾರಿಗಳು ಅಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದರಿಂದ ಬೆಲೆಗಳು ಗಗನಕ್ಕೇರಿದ್ದವು. ಆದರೆ ಚೀನಾದ ಖರೀದಿ ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಆರಂಭವಾಗಿದೆ. ಕೆಲ ಖರೀದಿ ಕೇಂದ್ರಗಳು ಖರೀದಿಯನ್ನೇ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.

ಅಡಿಕೆ ಒಣಗಿಸುವ ಘಟಕಗಳು ಹಾಗೂ ವ್ಯಾಪಾರಿಗಳು ಚೀನಾದಿಂದ ಆದೇಶಗಳು ಕಡಿಮೆಯಾಗಿರುವುದನ್ನು ಬೆಲೆ ಕುಸಿತದ ಪ್ರಮುಖ ಕಾರಣವೆಂದು ಹೇಳಿದ್ದಾರೆ. ಚೀನಾದ ಬೇಡಿಕೆಯ ಮೇಲೆ ಅತಿಯಾದ ಅವಲಂಬನೆಯಿರುವ ಮಾರುಕಟ್ಟೆಗಳಲ್ಲಿ ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಈ ಹಿಂದೆ ಚೀನಾದಲ್ಲಿ ಹಳದಿ ಎಲೆ ರೋಗದಿಂದ ಅಡಿಕೆ ಉತ್ಪಾದನೆ ಕುಸಿದ ಪರಿಣಾಮ ವಿಯೆಟ್ನಾಂ ಅಡಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಈಗ ಖರೀದಿ ಕಡಿಮೆಯಾಗಿರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿಯೆಟ್ನಾಂ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಕುಸಿತ – ಭಾರತಕ್ಕೆ ಏನು ಪರಿಣಾಮ? :  ಭಾರತದಲ್ಲಿ ಉತ್ಪಾದನೆಯಾಗುವ ಅಡಿಕೆಯ ಬಹುಪಾಲು ದೇಶೀಯ ಬಳಕೆಗೆ ಹೋಗುತ್ತದೆ. ಹೀಗಾಗಿ ವಿಯೆಟ್ನಾಂ ಅಡಿಕೆ ದರ ಕುಸಿತವು ಭಾರತದ ಅಡಿಕೆ ಮಾರುಕಟ್ಟೆಗ ಸಮಸ್ಯೆ ಇಲ್ಲ.  ಕರ್ನಾಟಕ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ಮಾರುಕಟ್ಟೆ ಚೀನಾ ಬೇಡಿಕೆಯ ಮೇಲೆ ನೇರವಾಗಿ ಅವಲಂಬಿತವಾಗಿಲ್ಲ. ಆದ್ದರಿಂದ ವಿಯೆಟ್ನಾಂನಲ್ಲಿ ಬೆಲೆ ಕುಸಿದ ಕಾರಣಕ್ಕೆ ಭಾರತೀಯ ಮಾರುಕಟ್ಟೆ ತಕ್ಷಣ ಕುಸಿಯುವ ಸಾಧ್ಯತೆ ಕಡಿಮೆ.‌ ಆದರೆ ವಿಯೆಟ್ನಾಂನಲ್ಲಿ ಬೆಲೆ ಕುಸಿದರೆ ಅಲ್ಲಿನ ಅಡಿಕೆ ಇನ್ನಷ್ಟು ಅಗ್ಗವಾಗಬಹುದು. ಆಗ ಕೆಲವು ವ್ಯಾಪಾರಿಗಳು ಮ್ಯಾನ್ಮಾರ್, ಬಾಂಗ್ಲಾದೇಶ ಅಥವಾ ಈಶಾನ್ಯ ರಾಜ್ಯಗಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಅಡಿಕೆ ತರಲು ಪ್ರಯತ್ನಿಸಬಹುದು. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಅಗತ್ಯ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Vietnam’s arecanut market has witnessed a sharp price crash after a period of record-high prices driven by Chinese demand. Prices that once touched 80,000-90,000 VND per kg have fallen drastically in some regions, highlighting the risks of dependence on a single export market

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ
July 28, 2026
7:45 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ
July 27, 2026
11:36 AM
by: ದ ರೂರಲ್ ಮಿರರ್.ಕಾಂ
200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ
July 27, 2026
11:27 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ
July 27, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror