ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು ಕಡಿತಗೊಳಿಸಲು ಈಗಲೇ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕಾಗಿ ವಿಯೆಟ್ನಾಂ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ.
2025 ರಿಂದ 2030 ರವರೆಗಿನ ಈ ಯೋಜನೆಯು, ಬೆಳೆ ಉತ್ಪಾದನೆಯನ್ನು ಪರಿವರ್ತಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ವಿಶೇಷವಾಗಿ ಭತ್ತದ ಕೃಷಿಯಲ್ಲಿ ಹಾಗೂ ಈ ವಲಯದಲ್ಲಿ ಪ್ರಮುಖವಾಗಿ ಮಿಥೇನ್ ಹೊರಸೂಸುವಿಕೆ ಇದೆ. ದೇಶದ ಒಟ್ಟು ಅನಿಲ ಹೊರಸೂಸುವಿಕೆಯಲ್ಲಿ ಕೃಷಿಯು ಸುಮಾರು 20% ರಷ್ಟಿದೆ. ಜಾಗತಿಕ ಹವಾಮಾನ ಬದ್ಧತೆಗಳಿಗೆ ಅನುಗುಣವಾಗಿ ಕೃಷಿಯಿಂದ ಮೀಥೇನ್ ಹೊರಸೂಸುವಿಕೆಯನ್ನು 30% ರಷ್ಟು ಕಡಿತಗೊಳಿಸುವ ಗುರಿಯನ್ನು ವಿಯೆಟ್ನಾಂ ಸರ್ಕಾರ ಹೊಂದಿದೆ. ಪರಿಸರ ಗುರಿಗಳನ್ನು ರೈತರ ಕಲ್ಯಾಣದೊಂದಿಗೆ ಸಂಯೋಜಿಸುವ, ಸುಸ್ಥಿರ ಮತ್ತು ಲಾಭದಾಯಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಯೋಜನೆಯನ್ನು ತಜ್ಞರು ಶ್ಲಾಘಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

