ವಿಕಸಿತ ಕೃಷಿ ಸಂಕಲ್ಪ ಅಭಿಯಾನ | ರೈತರ ಬಳಿಗೆ ಕೃಷಿ ವಿಜ್ಞಾನಿಗಳು‌ | ಹೊಸ ಯೋಜನೆ ರೈತರ ಬಳಿಗೆ |

May 19, 2025
10:15 AM
ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ 1,500 ರಿಂದ 2000 ತಂಡಗಳ ಮೂಲಕ ದೇಶದ 700 ಜಿಲ್ಲೆಗಳಲ್ಲಿನ ಸುಮಾರು 1.5 ರಿಂದ 2 ಕೋಟಿ ರೈತರೊಂದಿಗೆ ನೇರ ಸಂವಾದ ನಡೆಯಲಿದೆ.

ಈ ಮುಂಗಾರು ಹಂಗಾಮಿನಲ್ಲಿ ಒಂದು ವಿನೂತನ ಕಾರ್ಯಕ್ರಮವು ಕೃಷಿಕರಿಗೆ ಲಭ್ಯವಾಗಲಿದೆ.  ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಅದರ ವಿವಿಧ ಸಂಸ್ಥೆಗಳು ದೇಶದ ಕೃಷಿ ವಿಜ್ಞಾನ ಕೇಂದ್ರಗಳು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಇಲಾಖೆಯ ಸಹಯೋಗದಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ನಡೆಯಲಿದ್ದು ರೈತರ ಮನೆಬಾಗಿಲಿಗೆ ವಿಜ್ಞಾನಿಗಳು ಬರಲಿದ್ದಾರೆ.

Advertisement

ದೇಶದ ಎಲ್ಲ ಗಾಮಗಳನ್ನು ಈ ಯೋಜನೆ ಅಡಿಯಲ್ಲಿ ಸಂಪರ್ಕಿಸಿ ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ  ಕಾರ್ಯಕ್ರಮ ನಡೆಯಲಿದೆ. ಇಲ್ಲಿ ರೈತರನ್ನು ಕರೆಸಿ ಹೊಸ ಹೊಸ ತಂತ್ರಜ್ಞಾನಗಳು, ಹೊಸ ಬೀಜಗಳು, ನಿಖರವಾದ ಹವಾಮಾನದ ಮಾಹಿತಿ ಮತ್ತು ಸರಕಾರದ ನಾನಾ ಲಾಭದಾಯಕ ಯೋಜನೆಗಳು, ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕೃಷಿ ವಿಜ್ಞಾನಿಗಳು ಮತ್ತು ಸರಕಾರವು ನೇರವಾಗಿ  ಗ್ರಾಮದಡೆ ಬರುವರು, ಕೃಷಿ ಕ್ಷೇತ್ರಕ್ಕೆ ಹೊಸ ಹೊಸ ತಂತ್ರಜ್ಞಾನಗಳು, ಹೊಸ ಬೀಜಗಳು, ನಿಖರವಾದ ಹವಾಮಾನದ ಮಾಹಿತಿ ಮತ್ತು ಸರ್ಕಾರದ ವಿವಿಧ ಲಾಭದಾಯಕ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಈ ರಾಷ್ಟ್ರೀಯ ಜನ ಜಾಗೃತಿ ಅಭಿಯಾನದಲ್ಲಿ 1,500 ರಿಂದ 2000 ತಂಡಗಳ ಮೂಲಕ ದೇಶದ 700 ಜಿಲ್ಲೆಗಳಲ್ಲಿನ ಸುಮಾರು 1.5 ರಿಂದ 2 ಕೋಟಿ ರೈತರೊಂದಿಗೆ ನೇರ ಸಂವಾದ ನಡೆಯಲಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಹೊಸ ಬೀಜಗಳ ಮಾಹಿತಿಯನ್ನು ಒಟ್ಟು ಮೂರು ಕೋಟಿ ರೈತರಿಗೆ ತಲುಪಿಸಲಾಗುತ್ತದೆ, ಜೊತೆಗೆ ರೈತರಿಗೆ ಸರಕಾರದ ಯೋಜನೆಗಳ ಕುರಿತು ಕೂಡ ಮಾಹಿತಿ ನೀಡಲಾಗುತ್ತದೆ. ಅವರು ನೀಡುವ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲ್ಪಟ್ಟು ಅವರ ಹೊಸ ಆವಿಷ್ಕಾರಗಳನ್ನು ಸಂಶೋಧನೆ ಮತ್ತು ಪ್ರಸಾರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ.

ಬೆಳೆ,  ಮಣ್ಣು ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ತಜ್ಞರಿಂದ ಸಲಹೆಗಳನ್ನು ನೀಡಲಾಗುತ್ತದೆ. ಜೊತೆಗೆ, ಸರ್ಕಾರಿ ಯೋಜನೆಗಳ ಲಾಭ ಪಡೆಯುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಆಯಾ ಗ್ರಾಮ ಪಂಚಾಯತ್ ಮೂಲಕ ಅಲ್ಲಿನ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ವಿಕಸಿತ ಸಂಕಲ್ಪ ಅಭಿಯಾನ ನಿಮ್ಮ ಗ್ರಾಮಕ್ಕೆ ಬಂದಾಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಲಾಭವನ್ನು ಪಡೆಯಿರಿ ನಿಮ್ಮ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಿ ಎಂದು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಟಡಾ. ಟಿ.ಜೆ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror