ಸುಳ್ಯದಲ್ಲಿ ವಿಕ್ರಮ ಫೌಂಡೇಶನ್ ವತಿಯಿಂದ “ಸುಧಾಮ” ಯೋಜನೆಗೆ ಭೂಮಿಪೂಜೆ | ಮಂಡೆಕೋಲಿನಲ್ಲಿ ಬಡ ಹಿಂದೂ ಕುಟುಂಬಗಳಿಗೆ ಸೂರು ಕಟ್ಟುವ ಕಾಯಕ ಆರಂಭ|

August 25, 2021
9:39 PM

ಬಹುದೊಡ್ಡ ಕೆಲಸವೊಂದು ಇಲ್ಲಿ  ನಡೆಯುತ್ತಿದೆ. ಇಡೀ ಸಮಾಜವೇ ಈ ಕಡೆ ನೋಡಲೇಬೇಕಾದ ಸಂಗತಿ ಇದು. ಸಾಮಾಜಿಕ ಕಾರ್ಯಕರ್ತ ಮಹೇಶ್‌ ವಿಕ್ರಂ ಹೆಗಡೆ ನೇತೃತ್ವದ  ವಿಕ್ರಂ ಫೌಂಡೇಶನ್‌ ವತಿಯಿಂದ ಮಂಡೆಕೋಲು ಗ್ರಾ ಪಂ ವ್ಯಾಪ್ತಿಯಲ್ಲಿ ಬಡ ಹಿಂದೂಗಳಿಗೆ ಮನೆ ನಿರ್ಮಾಣ ಮಾಡಿ ಕೊಡುವ ಕೆಲಸ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆ ಈ ಕಾರ್ಯದಲ್ಲಿ ಕೈ ಜೋಡಿಸುತ್ತಿದೆ. 

Advertisement

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಸುಮಾರು 6 ಬಡಕುಟುಂಬಗಳಿಗೆ ಮನೆ ಇರಲಿಲ್ಲ. ಕಾರಣ ಸ್ವಂತ ನಿವೇಶನ ಇಲ್ಲದೇ ಇರುವುದು. ಈ ಬಗ್ಗೆ ಹಲವು ಪ್ರಯತ್ನ ನಡೆದಿದೆ. ಆದರೂ ವಿವಿಧ ಕಾರಣಗಳಿಂದ ಪಂಚಾಯತ್‌ ಹಾಗೂ ಆಡಳಿತಕ್ಕೆ ನಿವೇಶನ ಒದಗಿಲು ಪ್ರಯತ್ನಿಸಿಯೂ ಆಗಲಿಲ್ಲ. ಇದನ್ನು ಜಾಲತಾಣದ ಮೂಲಕ ಗಮನಿಸಿದ ಸಾಮಾಜಿಕ ಕಾರ್ಯಕರ್ತ ಮಹೇಶ್‌ ವಿಕ್ರಂ ಹೆಗಡೆ ಅವರು  ಹಿಂದೂ ಜಾಗರಣ ವೇದಿಕೆ ಸಹಾಯದಿಂದ ಮಂಡೆಕೋಲಿನ ಈ ಬಡು ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಸಾರ್ವಜನಿಕರಿಂದಲೂ ಧನ ಸಂಗ್ರಹ ಮಾಡಿ ವಿಕ್ರಂ ಪೌಂಡೇಶನ್‌ ತನ್ನ ಸಂಕಲ್ಪದ ಮೊದಲ ಹೆಜ್ಜೆ ಇಟ್ಟಿದೆ.ಈಗಾಗಲೇ ಸಾಕಷ್ಟು ಮಂದಿ ಸಹಾಯ ನೀಡಿದ್ದಾರೆ. ಇದೀಗ ಮನೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಯಿತು.‌

ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ಸುಳ್ಯದ ಹಿಂದೂ ಜಾಗರಣ ವೇದಿಕೆಯ ಮಹೇಶ್ ಉಗ್ರಾಣಿಮನೆ ಎಂಬುವವರು ಮಂಡೆಕೋಲಿನ ಈ ಬಡ ಕುಟುಂಬಗಳ ಬಗ್ಗೆ ಹೇಳಿದಾಗ, ಮಹೇಶ್‌ ವಿಕ್ರಂ ಹೆಗಡೆ ಮಾಹಿತಿ ಪಡೆದರು. ಆ ಬಳಿಕ ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಎಂದು ಸುಧಾಮ ಅಭಿಯಾನವನ್ನು ಶುರುಮಾಡಿದರು.  ಹಿಂದೂ ಜಾಗರಣ ವೇದಿಕೆ ಸೇರಿ ಒಂದು ಮನೆ ಕಟ್ಟಿಸಿ ಕೊಡುತ್ತಿದ್ದು ಉಳಿದ ಮನೆಗಳನ್ನು ವಿಕ್ರಂ ಫೌಂಡೇಶನ್‌ ನಿರ್ಮಿಸಿ ಕೊಡುತ್ತಿದೆ. ಈ ಸಮಾಜ ನಮಗೆ ಸಾಕಷ್ಟು ಕೊಟ್ಟಿದೆ. ಹಾಗಾಗಿ  ಜವಾಬ್ದಾರಿಯುತ ನಾಗರೀಕರಾಗಿ  ನಮ್ಮ ಕರ್ತವ್ಯವನ್ನು ಮಾಡಬೇಕಿದೆ ಎನ್ನುತ್ತಾರೆ ಮಹೇಶ್.

Advertisement

ಮಂಡೆಕೋಲಿನ ಈ ಕುಟುಂಬಗಳು ಕಡು ಬಡತನವಿದ್ದರೂ ಮಿಷನರಿಗಳ ಆಮಿಷಕ್ಕೆ ಒಳಗಾಗದೆ, ಮತಾಂತರವಾಗುವುದಿಲ್ಲವೆಂಬ ಗಟ್ಟಿ ನಿಲುವಿನೊಂದಿಗೆ ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವ ಅವರನ್ನು ಕಂಡು ಹೆಮ್ಮೆಯೆನಿಸಿತು ಎಂದು ಮಹೇಶ್‌ ವಿಕ್ರಂ ಹೆಗಡೆ ಹೇಳುತ್ತಾರೆ. ಹೀಗಾಗಿ ಈ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯೂ ಹೌದು ಎನ್ನುತ್ತಾರೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎರಡು ಹಂತಗಳಲ್ಲಿ ಹಾಲಿನ ದರ ಏರಿಕೆ | ಒಟ್ಟು ರೂ.7 ಹೆಚ್ಚಳ | ನೇರ ನಗದು ಮೂಲಕ ರೈತರಿಗೆ ಪಾವತಿ
August 18, 2025
10:19 PM
by: The Rural Mirror ಸುದ್ದಿಜಾಲ
ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ | ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ | ಮತ್ತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
August 18, 2025
9:25 PM
by: The Rural Mirror ಸುದ್ದಿಜಾಲ
ಬಗರ್ ಹುಕುಂ ಸಾಗುವಳಿ | ಸಕ್ರಮಕ್ಕಾಗಿ 42289 ರೈತರಿಂದ ಅರ್ಜಿ
August 18, 2025
9:00 PM
by: The Rural Mirror ಸುದ್ದಿಜಾಲ
ಶುದ್ಧ ಕನ್ನಡ ಪದ ಮತ್ತೆ ವಿಜೃಂಭಿಸಲಿ – ರಾಘವೇಶ್ವರ ಶ್ರೀ
August 18, 2025
8:37 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group