ಬಹುದೊಡ್ಡ ಕೆಲಸವೊಂದು ಇಲ್ಲಿ ನಡೆಯುತ್ತಿದೆ. ಇಡೀ ಸಮಾಜವೇ ಈ ಕಡೆ ನೋಡಲೇಬೇಕಾದ ಸಂಗತಿ ಇದು. ಸಾಮಾಜಿಕ ಕಾರ್ಯಕರ್ತ ಮಹೇಶ್ ವಿಕ್ರಂ ಹೆಗಡೆ ನೇತೃತ್ವದ ವಿಕ್ರಂ ಫೌಂಡೇಶನ್ ವತಿಯಿಂದ ಮಂಡೆಕೋಲು ಗ್ರಾ ಪಂ ವ್ಯಾಪ್ತಿಯಲ್ಲಿ ಬಡ ಹಿಂದೂಗಳಿಗೆ ಮನೆ ನಿರ್ಮಾಣ ಮಾಡಿ ಕೊಡುವ ಕೆಲಸ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆ ಈ ಕಾರ್ಯದಲ್ಲಿ ಕೈ ಜೋಡಿಸುತ್ತಿದೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಸುಮಾರು 6 ಬಡಕುಟುಂಬಗಳಿಗೆ ಮನೆ ಇರಲಿಲ್ಲ. ಕಾರಣ ಸ್ವಂತ ನಿವೇಶನ ಇಲ್ಲದೇ ಇರುವುದು. ಈ ಬಗ್ಗೆ ಹಲವು ಪ್ರಯತ್ನ ನಡೆದಿದೆ. ಆದರೂ ವಿವಿಧ ಕಾರಣಗಳಿಂದ ಪಂಚಾಯತ್ ಹಾಗೂ ಆಡಳಿತಕ್ಕೆ ನಿವೇಶನ ಒದಗಿಲು ಪ್ರಯತ್ನಿಸಿಯೂ ಆಗಲಿಲ್ಲ. ಇದನ್ನು ಜಾಲತಾಣದ ಮೂಲಕ ಗಮನಿಸಿದ ಸಾಮಾಜಿಕ ಕಾರ್ಯಕರ್ತ ಮಹೇಶ್ ವಿಕ್ರಂ ಹೆಗಡೆ ಅವರು ಹಿಂದೂ ಜಾಗರಣ ವೇದಿಕೆ ಸಹಾಯದಿಂದ ಮಂಡೆಕೋಲಿನ ಈ ಬಡು ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಸಾರ್ವಜನಿಕರಿಂದಲೂ ಧನ ಸಂಗ್ರಹ ಮಾಡಿ ವಿಕ್ರಂ ಪೌಂಡೇಶನ್ ತನ್ನ ಸಂಕಲ್ಪದ ಮೊದಲ ಹೆಜ್ಜೆ ಇಟ್ಟಿದೆ.ಈಗಾಗಲೇ ಸಾಕಷ್ಟು ಮಂದಿ ಸಹಾಯ ನೀಡಿದ್ದಾರೆ. ಇದೀಗ ಮನೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಯಿತು.
ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ಸುಳ್ಯದ ಹಿಂದೂ ಜಾಗರಣ ವೇದಿಕೆಯ ಮಹೇಶ್ ಉಗ್ರಾಣಿಮನೆ ಎಂಬುವವರು ಮಂಡೆಕೋಲಿನ ಈ ಬಡ ಕುಟುಂಬಗಳ ಬಗ್ಗೆ ಹೇಳಿದಾಗ, ಮಹೇಶ್ ವಿಕ್ರಂ ಹೆಗಡೆ ಮಾಹಿತಿ ಪಡೆದರು. ಆ ಬಳಿಕ ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಎಂದು ಸುಧಾಮ ಅಭಿಯಾನವನ್ನು ಶುರುಮಾಡಿದರು. ಹಿಂದೂ ಜಾಗರಣ ವೇದಿಕೆ ಸೇರಿ ಒಂದು ಮನೆ ಕಟ್ಟಿಸಿ ಕೊಡುತ್ತಿದ್ದು ಉಳಿದ ಮನೆಗಳನ್ನು ವಿಕ್ರಂ ಫೌಂಡೇಶನ್ ನಿರ್ಮಿಸಿ ಕೊಡುತ್ತಿದೆ. ಈ ಸಮಾಜ ನಮಗೆ ಸಾಕಷ್ಟು ಕೊಟ್ಟಿದೆ. ಹಾಗಾಗಿ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಕರ್ತವ್ಯವನ್ನು ಮಾಡಬೇಕಿದೆ ಎನ್ನುತ್ತಾರೆ ಮಹೇಶ್.
ಮಂಡೆಕೋಲಿನ ಈ ಕುಟುಂಬಗಳು ಕಡು ಬಡತನವಿದ್ದರೂ ಮಿಷನರಿಗಳ ಆಮಿಷಕ್ಕೆ ಒಳಗಾಗದೆ, ಮತಾಂತರವಾಗುವುದಿಲ್ಲವೆಂಬ ಗಟ್ಟಿ ನಿಲುವಿನೊಂದಿಗೆ ಸ್ವಾಭಿಮಾನದ ಬದುಕನ್ನು ನಡೆಸುತ್ತಿರುವ ಅವರನ್ನು ಕಂಡು ಹೆಮ್ಮೆಯೆನಿಸಿತು ಎಂದು ಮಹೇಶ್ ವಿಕ್ರಂ ಹೆಗಡೆ ಹೇಳುತ್ತಾರೆ. ಹೀಗಾಗಿ ಈ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯೂ ಹೌದು ಎನ್ನುತ್ತಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…