ಚಂದ್ರಯಾನ- 3 #Chandrayaan-3 ಲ್ಯಾಂಡರ್ ಮಾಡ್ಯೂಲ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ#ISRO ಉಡಾವಣೆಗೊಳಿಸಿತ್ತು. ಮೂರನೇ ಆಗಸ್ಟ್ 18 ರಂದು, ISRO ತನ್ನ ಕಕ್ಷೆಯನ್ನು 113 ಕಿಮೀ x 157 ಕಿಮೀಗೆ ಹತ್ತಿರವಾಗುವ ಮೂಲಕ ಮೊದಲ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.
ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ಲ್ಯಾಂಡರ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ಮರುದಿನ ಇದನ್ನು ನಡೆಸಲಾಯಿತು. ಆಗಸ್ಟ್ 20 ರಂದು, ವಿಕ್ರಂ ಲ್ಯಾಂಡರ್ ಮಾಡ್ಯೂಲ್‌ನ ಎರಡನೇ ಮತ್ತು ಅಂತಿಮ ಡೀಬೂಸ್ಟ್ ಪ್ರಕ್ರಿಯೆ ನಡೆದಿದ್ದು ಇದು ಮಾಡ್ಯೂಲ್ ಆರ್ಬಿಟರ್ ನ್ನು 25 ಕಿಮೀ x 134 ಕಿಮೀಗೆ ಇಳಿಸಿತು. ಲ್ಯಾಂಡರ್ ನಲ್ಲಿರುವ ರೋವರ್, 25 ಕಿಮೀ x 134 ಕಿಮೀ ಕಕ್ಷೆಯಲ್ಲಿದೆ. ಇದು ಆಗಸ್ಟ್ 23 ರಂದು ಸಂಜೆ ಚಂದ್ರನ ಅಂಗಳಕ್ಕೆ ಇಳಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 17 ರಂದು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಮೇಲ್ಮೈಯ ದೂರದ ಭಾಗದ ಚಿತ್ರಗಳನ್ನು ತೆಗೆಯುತ್ತಿದೆ.
ಇದು ಭಾರತದ ಸಾಧನೆ : ಮಿಷನ್ ಯಶಸ್ವಿಯಾಗುವ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಮೊದಲ ದೇಶವಾಗಿದೆ ಭಾರತ. ಕೆಲವು ದಿನಗಳ ಹಿಂದೆ, ರಷ್ಯಾದ ಲೂನಾ -25 ಅದೇ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುವಾಗ ಚಂದ್ರನ ಮೇಲ್ಮೈಗೆ ಅಪ್ಪಳಿಸಿತು. ಕೇವಲ ಮೂರು ಇತರ ದೇಶಗಳು (ರಷ್ಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್) ಯಶಸ್ವಿಯಾಗಿ ಚಂದ್ರನ ಮೇಲೆ ರೋವರ್ ಅನ್ನು ಇಳಿಸಿವೆ. ವಿಕ್ರಮ್ ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಹೆಸರಿಡಲಾಗಿದೆ. ಸುಮಾರು 3,900 ಕೆಜಿ ತೂಕದ ಚಂದ್ರಯಾನ-3 ರಾಕೆಟ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಉಡಾವಣೆ ಮಾಡಲು 615 ಕೋಟಿ ರೂ. ಖರ್ಚಾಗಿದೆ.