ಸ್ವಚ್ಛ ಗ್ರಾಮಕ್ಕಾಗಿ ಕಳೆದ 11 ವಾರಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಿರಂತರವಾಗಿ ಅಭಿಯಾನ ನಡೆಯುತ್ತಿದೆ. ಇದಕ್ಕಾಗಿಯೇ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿತ್ತು. ಈ ತಂಡದ ಮೂಲಕ ಪ್ರತೀ ಗುರುವಾರ ನಡೆಯುವ ಜಾಗೃತಿ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅವರು ಕೂಡಾ ಭಾಗಿಯಾಗಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯಕ್ಕೆ ಬೆಂಬಲ ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಕಳೆದ 11 ವಾರಗಳಿಂದ ಸ್ವಚ್ಛ ಗುತ್ತಿಗಾರು ಎಂಬ ಸಂದೇಶದಡಿಯಲ್ಲಿ ಪ್ರತೀ ವಾರ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯುತ್ತಿತ್ತು. ಸ್ವಚ್ಛತಾ ಅರಿವು ಮೂಡಿಸಲು ಗ್ರಾಪಂ ಸಹಕಾರದೊಂದಿಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಈ ಮೂಲಕ ಪ್ರತೀ ಗುರುವಾರದಂದು ಗುತ್ತಿಗಾರು ಪೇಟೆಯಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಛತಾ ಕಾರ್ಯವನ್ನು ನಡೆಸುವ ಕೆಲಸ ಮಾಡಲಾಗುತ್ತಿದೆ. ಸ್ವಚ್ಛತೆಯ ಬಗ್ಗೆ ಗ್ರಾಮಮಟ್ಟದಲ್ಲಿ ಅರಿವು ಮೂಡಬೇಕು ಎನ್ನುವುದು ಈ ಟಾಸ್ಕ್ ಫೋರ್ಸ್ ಉದ್ದೇಶವಾಗಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಹಾಗೂ ಪೇಟೆ, ಸ್ವಚ್ಛ ಗ್ರಾಮಕ್ಕಾಗಿ ಕಳೆದ ವಾರಗಳಿಂದ ನಿರಂತರ ಕೆಲಸ ನಡೆಯುತ್ತಿದೆ.