ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಳೆಯ ವಿಡಿಯೋ ಪೋಸ್ಟ್ ಮಾಡಿ ಕೆಟ್ಟದಾಗಿ ಕಮೆಂಟ್ ಮಾಡುತ್ತಾ ತೇಜೋವಧೆ ಮಾಡಲಾಗಿದೆ ಎಂದು ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ದೂರು ದಾಖಲಿಸಿದ್ದಾರೆ. 22 ಟ್ರೋಲ್ ಪೇಜ್ ಗಳು ಹಾಗೂ ಯೂಟ್ಯೂಬ್ ಚಾನಲ್ ಮೇಲೆ ಕೇಸ್ ದಾಖಲಿಸಿದ್ದಾರೆ.
ವಿನಯ್ ಗುರೂಜಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ, ಅದನ್ನು ಶೇರ್ ಮಾಡುವ ಮೂಲಕ ತೇಜೋವಧೆ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯಾಗುತ್ತಿದೆ. ಅಲ್ಲದೇ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಾಮಾಜಿಕ ಜಾಲತಾಣ ಬಳಸಿದವರು ವಿರುದ್ಧ , ಟೇಜೋವಧೆ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಯ್ ಗುರೂಜಿ ತಮ್ಮ ಸಹಾಯಕರ ಮೂಲಕ ದೂರು ದಾಖಲಿಸಿದ್ದಾರೆ. ವಿನಯ್ ಗುರೂಜಿ ಬಗ್ಗೆ ಕೆಟ್ಟದಾಗಿ ಸುಳ್ಯ, ಸುಬ್ರಹ್ಮಣ್ಯದಲ್ಲೂ ಸಂದೇಶವನ್ನು ವಿವಿಧ ಗೂಪುಗಳಿಗೆ ಹಾಕಲಾಗಿತ್ತು. ಈ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಳ್ಯದ ವ್ಯಕ್ತಿಗಳ ಮೇಲೂ ದೂರು ನೀಡಲಾಗಿದೆ.