#Nature| ಇಲ್ಲಿ ಪರಿಸರ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ | ಫುಟ್‌ಬಾಲ್‌ ತಾರೆ ನೇಮರ್‌ಗೆ ಬಿತ್ತು 27 ಕೋಟಿ ರೂ. ದಂಡ…! |

July 4, 2023
11:14 AM
ಎಷ್ಟೇ ಜಾಗೃತಿ ಮಾಡಿದರೂ ಜನರಿಗೆ ಅರಿವು ಬಾರದೇ ಇದ್ದಾಗ ದಂಡ ವಿಧಿಸುವುದು ಅನಿವಾರ್ಯ ಸ್ಥಿತಿ ಆಡಳಿತಕ್ಕೆ. ನಮ್ಮಲ್ಲಿ ಸ್ವಚ್ಛತೆಯೂ ಅದೇ ಕತೆಯಾಗಿದೆ. ಸಣ್ಣ ದಂಡ ವಿಧಿಸಿದಾಗಲೇ ಎಚ್ಚರವಾಗುತ್ತದೆ. ಇಲ್ಲೂ ಹಾಗೇ ಆಗಿದೆ, ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ನಮ್ಮ ದೇಶದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ. ಬಡವರಿಗೊಂದು ನ್ಯಾಯ. ಇದು ಅನೇಕ ಸಂದರ್ಭಗಳಲ್ಲಿ ನಮ್ಮ ಕಣ್ಣ ಮುಂದೆಯೇ ಸಾಬೀತಾಗಿದೆ ಕೂಡ. ಅದರಲ್ಲೂ ಪರಿಸರ ವಿಚಾರಕ್ಕೆ ಬಂದರೆ ಬಡವ ತನ್ನ ಮನೆ, ಅಥವಾ ಕಟ್ಟಿಗಾಗಿ ಒಂದು ಮರ ಕಡಿದರೆ ಕೇಸ್ ಬಿದ್ದಾಯ್ತು. ಅದೇ ಶ್ರೀ ಮಂತರು ಇಡೀ ಅರಣ್ಯವನ್ನೇ ನುಂಗಿ ನೀರು ಕುಡಿದರು ಅವರ ಮೇಲೆ ಯಾವ ಕೇಸ್ ಇಲ್ಲಾ, ಕಾನೂನು ಇಲ್ಲ…!. ಆದರೆ ಇಲ್ಲಿ ಹಾಗಲ್ಲ ಬರೋಬ್ಬರಿ ದಂಡ ವಿಧಿಸಿ ಸುದ್ದಿಯಾಗಿದೆ ಈ ದೇಶ.

ಉದ್ಯಮ ವಿಸ್ತರಣೆ, ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡಗಳು, ಹೋಮ್ ಸ್ಟೇಗಳು ಹೀಗೆ ನಮ್ಮ ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಕಾರಣಗಳು ಸಾವಿರಾರು. ಆದರೆ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇರೋದಿಲ್ಲ. ಅಷ್ಟೆ ಯಾಕೆ ಮುಂದಿನ ಪೀಳಿಗೆ ಉಳಿಯಬೇಕಂದ್ರೆ ನಮ್ಮ ಪಶ್ಚಿಮ ಘಟ್ಟ ಅತ್ಯಗತ್ಯ. ಅಂತ ಪಶ್ಚಿಮ ಘಟ್ಟವನ್ನೇ ನಾಶ ಮಾಡಿ ತಮ್ಮ ಸ್ವಇಚ್ಛೆ ಮೆರೆಯುತ್ತಿದ್ದಾರೆ. ಆದರೆ ಇದಕ್ಕೆ ಹೊಣೆ ಯಾರು ಇಲ್ಲ.

ಆದರೆ ವಿದೇಶಗಳ ಕಾನೂನು ಹಾಗಿಲ್ಲ. ಅವನು ಯಾರೇ ಆಗಿರಲಿ ಪರಿಸರ ನಾಶಕ್ಕೆ ತಕ್ಕ ಶಾಸ್ತಿ ಅನುಭವಿಸಲೇ ಬೇಕು. ಇಲ್ನೋಡಿ ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್‌ ತಾರೆ #Brazilian football star ನೇಮರ್‌ಗೆ #Neymar ಗೆ  ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್‌ ಅಮೆರಿಕನ್‌ ಡಾಲರ್)‌ ದಂಡ ವಿಧಿಸಲಾಗಿದೆ.

ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್‌ ಅಧಿಕಾರಿಗಳು, ನೇಮರ್‌ ಅವರು ದಕ್ಷಿಣ ಬ್ರೆಜಿಲ್‌ನ ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್‌ ದೂರಿನಲ್ಲಿ ತಿಳಿಸಿದೆ. ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್‌ ಮೇಲೆ ಹೊರಿಸಲಾಗಿದೆ. ಬ್ರೆಜಿಲ್ ಫುಟ್‌ಬಾಲ್‌ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.

ನಮ್ಮ ದೇಶದಲ್ಲಿ ಇಂಥ ಕೇಸ್ ಹಾಕಿ ಎಲ್ಲಿಯಾದರೂ ಯಾರನ್ನಾದರೂ ದಂಡಿಸಿದ್ದು ಕೇಳಿದ್ದು ಇದೆಯಾ..? ನಮ್ಮ ದೇಶದಲ್ಲೂ ಇಂತಹ ಕಾನೂನು ಬಂದರೆ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಲು ಸಾಧ್ಯ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ
ರೈತರಿಗೆ ಕೃಷಿ ಚಟುವಟಿಕೆ ಜೊತೆಗೆ ಜಾನುವಾರು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ
March 16, 2025
7:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror