ಮನುಷ್ಯನಿಗೆ ಅದೇನೇನೋ ಹುಚ್ಚುತನಗಳು ಇರುತ್ತವೆ. ಕೆಲವೊಮ್ಮೆ ಈ ಹುಚ್ಚುತನಗಳು ಹವ್ಯಾಸವಾಗಿ ಬೆಳೆದರೆ, ಇನ್ನು ಕೆಲವು ಅವರ ಜೀವನಕ್ಕೇ ಕುತ್ತು ತರುತ್ತವೆ. ಅಂಥವರ ಸಾಲಿಗೆ ಸೇರಿದ್ದಾಳೆ ಇಲ್ಲೊಬ್ಬ ಮಹಿಳೆ. ಈಕೆ ಮಹಾನ್ ಟ್ಯಾಟೋ ಲವರ್ #TattooLover. ತನ್ನ ಮೈಮೇಲೆ ಈಗಾಗಲೇ 800 ಹಚ್ಚೆ ಹಾಕಿಸಿಕೊಂಡಿದ್ದಾಳೆ. ಈಕೆಗೆ ಹಚ್ಚೆ ಹಾಕಿಸಿಕೊಳ್ಳುವುದು ಒಂದು ವ್ಯಸನ. ಕೆಲಸವನ್ನು ಹುಡುಕುತ್ತಲೇ ವಾರಕ್ಕೆ ಮೂರು ಹೊಸ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಳೆ ಇರುತ್ತಾಳೆ.
ಮನುಷ್ಯನಿಗೆ ಹುಚ್ಚು ಇರಬೇಕು, ಆದರೆ ಬದುಕನ್ನೇ ತೊಡಕು ಮಾಡಿಕೊಳ್ಳುವಷ್ಟು ಅಲ್ಲ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ನಲ್ಲಿರುವ ಮಹಿಳೆಯನ್ನು ಗಮನಿಸಿ. ಹಚ್ಚೆಪ್ರಿಯಳಾದ ಈಕೆ ಈ ತನಕ ಒಂದಲ್ಲ ಹತ್ತಲ್ಲ ಬರೋಬ್ಬರಿ 800 ಹಚ್ಚೆಗಳನ್ನು ತನ್ನ ಮೈಮುಖದ ಮೇಲೆ ಹಾಕಿಸಿಕೊಂಡಿದ್ದಾಳೆ. ಆದರೆ ಈ ‘ಹಚ್ಚೆಯ ಚಟ’ ದಿಂದಾಗಿಯೇ ಆಕೆ ನಿರುದ್ಯೋಗವನ್ನು ಅನುಭವಿಸುವಂತಾಗಿದೆ. ಕೆಲಸ ಕೇಳಿಕೊಂಡು ಹೋದಲ್ಲೆಲ್ಲ ಆಕೆಯ ಹಚ್ಚೆಗಳ ಬಗ್ಗೆಯೇ ಟೀಕಿಸುತ್ತಾರೆ ವಿನಾ ಯಾರೊಬ್ಬರೂ ಈಕೆಗೆ ಕೆಲಸ ಕೊಡುತ್ತಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಈಕೆಯ ಪರಿಸ್ಥಿತಿ.

ನ್ಯೂಯಾರ್ಕ್ ಪೋಸ್ಟ್ನ ವರದಿಯಂತೆ, ಲಂಡನ್ನ ವೇಲ್ಸ್ನಲ್ಲಿ 46 ವರ್ಷದ ಈ ಮೆಲಿಸ್ಸಾ ಸ್ಲೋನ್ ನೆಲೆಸಿದ್ದಾಳೆ. ಈಕೆಗೆ ಎರಡು ಹೆಣ್ಣುಮಕ್ಕಳೂ ಇವೆ. ಆದರೆ ಕೆಲಸವಿಲ್ಲದೆ ಇದೀಗ ಒದ್ಧಾಡುತ್ತಿದ್ದಾಳೆ. “ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ರು, ಹಚ್ಚೆಗಳನ್ನು ನೋಡಿಯೇ ಈಕೆಗೆ ಕೆಲಸ ಕೊಡಲಿಲ್ಲ” ಎನ್ನುವುದು ಈಕೆಯ ಅಳಲು.
20ನೇ ವಯಸ್ಸಿಗೆ ಶುರುವಾದ ಈಕೆಯ ಹಚ್ಚೆಯ ಹುಚ್ಚು 46ರಲ್ಲಿಯೂ ಮುಂದುವರೆದಿದೆ. ಕೆಲಸ ಹುಡುಕುವುದು ಅದರ ಪಾಡಿಗೆ ಅದು ನಡೆದಿರುತ್ತದೆ. ಜೊತಗೆ ವಾರಕ್ಕೆ 3 ಹೊಸ ಹಚ್ಚೆಗಳನ್ನು ಈಕೆ ಹಾಕಿಸಿಕೊಳ್ಳುತ್ತಿರುತ್ತಾಳೆ. ಮೂರು ಪದರಗಳ ಹಚ್ಚೆಗಳು ಆಕೆಯ ಮುಖದ ಮೇಲಿವೆ. ”ಈಗಾಗಲೇ ನಾನು ನೀಲಿಬಣ್ಣದಿಂದ ಆವೃತಗೊಂಡಿದ್ದೇನೆ. ನನ್ನ ಮುಖ ಸ್ಮರ್ಫ್ (Smurf) ನಂತೆ ಕಾಣುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಹಚ್ಚೆ ಹಾಕಿಸಿಕೊಂಡ ಮಹಿಳೆ ನಾನು. ಈ ಹುಚ್ಚನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಉತ್ಸಾಹದಿಂದ ಹೇಳುತ್ತಾಳೆ ಮೆಲಿಸ್ಸಾ.
( ಕೃಪೆ : ಅಂತರ್ಜಾಲ )
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel