ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮನೆಯೊಂದು ಹಾವಿನ ಗೂಡಾಗಿ ಮಾರ್ಪಟ್ಟಿತ್ತು. ಮನೆಯ ಸ್ನಾನಗೃಹದಲ್ಲಿ 60 ಹಾವುಗಳು ಹಾಗೂ ಸುಮಾರು 75 ಮೊಟ್ಟೆಗಳ ಚಿಪ್ಪುಗಳು ಪತ್ತೆಯಾಗಿವೆ.
ಮಾಹಿತಿಯ ಪ್ರಕಾರ ಈ ಮನೆಯು ಮುಜಾಫರ್‌ನಗರ ಜಿಲ್ಲೆಯ ಖತೌಲಿ ತಹಸಿಲ್‌ನಲ್ಲಿದೆ. ಬುಧವಾರದಂದು ಮನೆಯ ಬಾತ್ ರೂಂನಿಂದ ಹಾವುಗಳು ಹೊರಬರಲಾರಂಭಿಸಿದ್ದು, ನಿವಾಸಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಬಳಿಕ ಉರಗ ತಜ್ಞರನ್ನು ಕರೆಯಿಸಿ , ಬಾತ್ ರೂಂ ಪರಿಶೀಲನೆ ನಡೆಸಿ ನೆಲವನ್ನು ಒಡೆದಾಗ, 60 ಹಾವುಗಳು ಮತ್ತು ಸುಮಾರು 75 ಮೊಟ್ಟೆಯ ಚಿಪ್ಪುಗಳು ಅಲ್ಲಿ ಕಂಡುಬಂದವು. ಹಾವುಗಳನ್ನು ಹಿಡಿದು ಕಾಡಿಗೆ ಬಿಡಲಾಯಿತು.ಹಾವಿನ ಗೂಡು ಪತ್ತೆಯಾದ ಮನೆಯಲ್ಲಿ ಸಾಕಷ್ಟು ಕೊಳಕು ಇದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ಅಲ್ಲದೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಹಾವುಗಳು ಅಲ್ಲಿಂದ ಹೊರ ಬಂದಿವೆ ಎನ್ನುವುದು ಸದ್ಯದ ಮಾಹಿತಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel