ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನಲ್ಲೂ ಉತ್ತಮ ಮಳೆಯಾಗುತ್ತಿದೆ. ಮಳೆಗೆ ಗೊಳೆ, ನದಿಗಳು ತುಂಬಿ ಹರಿಯುತ್ತದೆ. ಆದರೆ ರಸ್ತೆಯಲ್ಲೂ ನೀರು ಹರಿಯುವುದು ಕೂಡಾ ಈ ಬಾರಿ ಕಂಡಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಬಹುತೇಕ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಆದರೆ ಇಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಯಲ್ಲಿ ನೀರು ಹರಿಯುತ್ತದೆ. ಇದನ್ನೇ ಇರಿಸಿಕೊಂಡು ಟ್ರೋಲ್ ಮಾಡಿದ್ದಾರೆ ಗ್ರಾಮೀಣ ಜನರು.
ವೈರಲ್ ಆಗಿರುವ ವಿಡಿಯೋ:
ಇದು ಸುಳ್ಯ-ಸುಬ್ರಹ್ಮಣ್ಯ ರಸ್ತೆ. ಹೇಳುವುದಕ್ಕೆ ರಾಜ್ಯ ಹೆದ್ದಾರಿ. ರಾಷ್ಟ್ರೀಯ ಹೆದ್ದಾರಿಯ ಸ್ಥಾನದಲ್ಲಿದೆ. ಈ ರಸ್ತೆಯಲ್ಲಿ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ವಿಪರೀತ ಮಳೆಯಾದರೆ ರಸ್ತೆಯಲ್ಲಿ ಹೋಗುವುದೇ ಸಾಹಸದ ಕೆಲಸ. ವಾಹನ ಚಾಲಕರು ಪರದಾಟ ನಡೆಸುತ್ತಾರೆ. ಇದೀಗ ಎರಡು ದಿನದ ಮಳೆಗೆ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಈ ಸಮಸ್ಯೆ ಬಗ್ಗೆ ಹಲವು ಬಾರಿ ಇಲ್ಲಿನ ಆಡಳಿತದ ಗಮನಕ್ಕೆ ತಂದರೂ ಸರಿಯಾಗದ ಕಾರಣ ಈ ಬಾರಿ ಟ್ರೋಲ್ ಮಾಡಿದ್ದಾರೆ ಸಂಕಷ್ಟಕ್ಕೆ ಒಳಗಾದ ವಾಹನ ಚಾಲಕರು. ಇಲಾಖೆಗಳಿಗೆ ಇದು ತಲುಪಿದರೆ ದುರಸ್ತಿಗೆ ಒತ್ತಾಯಿಸಿದ್ದಾರೆ.
ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ ಇದೆ. ಈಗಿನಂತೆ ಎಪ್ರಿಲ್ 2ರಿಂದ…
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…