#ViralNews | ಕರಡಿ ವೇಷ ತೊಟ್ಟು ಹೊಲದಲ್ಲಿ ಕೂತ ರೈತ | ಯಾಕಿರಬಹುದು..? ಫೋಟೋ ವೈರಲ್​​​

June 27, 2023
1:45 PM

ರೈತರ ಪಾಡು ಒಂದಾ ಎರಡಾ..? ವರ್ಷವಿಡೀ ಒಂದಲ್ಲ ಒಂದು ತಾಪತ್ರಯ. ಅವನು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ಪ್ರಾಣ ಕೈಗೆ ಬಂದಿರುತ್ತೆ. ಸಾಕಪ್ಪ ಸಾಕು ಈ ಕೃಷಿ #Agriculture ಅನ್ನಿಸಿ ಬಿಟ್ಟಿರುತ್ತೆ. ಆದರೂ ರೈತ #Farmer ತಾನು ನಂಬಿದ ಭೂಮಿ ತಾಯನ್ನು ಎಂದೂ ಮರೆಯಲಾರ. ತನ್ನ ಕಾಯಕ ತಾನು ಮಾಡಿಯೇ ತೀರುತ್ತಾನೆ. ಬೆಳೆ ತೆಗೆದೇ ತೆಗೆಯುತ್ತಾನೆ.

ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿ ಬೆಳೆದ ಬೆಳೆಗೆ ಪ್ರತೀ ದಿನ ಮಂಗಗಳ ಕಾಟ. ಒಂದಲ್ಲ ಎರಡಲ್ಲ ಬರೋಬ್ಬರಿ 40 ರಿಂದ 45 ಮಂಗಗಳು  ಈತನ ಜಮೀನಿಗೆ ಬಂದು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಹಲಬು ಬಾರಿ ಮನವಿ ಮಾಡಿದರೂ ಯಾರೂ ಗಮನಹರಿಸಿಲ್ಲ ಎಂದು ರೈತ ಗಜೇಂದ್ರ ತಿಳಿಸಿದ್ದಾರೆ.

Advertisement
Advertisement

ಉತ್ತರ ಪ್ರದೇಶದ ಈ ರೈತ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಯಾರನ್ನು ನಂಬಿ ಪ್ರಯೋಜನ ಇಲ್ಲ ಅಂತ ತಿಳಿದು ತಾನೇ ಹೊಸ ಪ್ಲಾನ್​​​ ಒಂದನ್ನು ಮಾಡಿದ್ದಾರೆ.  ಇವರ ಪ್ಲಾನ್ ಈಗ​​ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಗಜೇಂದ್ರ ಸಿಂಗ್​​​​​ ಹೊಲದಲ್ಲಿ ಕರಡಿ ವೇಷ ತೊಟ್ಟು ಕೂತಿದ್ದಾರೆ. ಈ ಮೂಲಕ ಈ ರೈತ ಪ್ರತೀ ದಿನ ತಮ್ಮ ಜಮೀನಿಗೆ ದಾಳಿ ಇಡುವ ಸುಮಾರು 40-45 ಕಪಿ ಸೈನ್ಯದಿಂದ ಬೆಳೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ.

Advertisement

 

ಮಂಗಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯಲು 4,000 ರೂ.ಗಳಿಗೆ ಈ ವೇಷಭೂಷಣವನ್ನು ಖರೀದಿಸಿದ್ದಾರಂತೆ. ಇದೀಗಾ ರೈತ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ.  ಇದು ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಡಿ ಎಫ್​​ಒ ಸಂಜಯ್​​​ ಬಿಸ್ವಾಲ್​​​​​​ ಮಂಗಗಳು ಬೆಳೆ ಹಾನಿ ಮಾಡದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಡ್ರೋನ್‌ ಬಳಕೆ | 1 ವರ್ಷಕ್ಕೆ ಅನುಮೋದನೆಯನ್ನು ವಿಸ್ತರಿಸಿದ ಸರ್ಕಾರ
May 9, 2024
8:27 PM
by: ದ ರೂರಲ್ ಮಿರರ್.ಕಾಂ
Karnataka Weather | 09-05-2024 | ಅಲ್ಲಲ್ಲಿ ಗುಡುಗು ಸಹಿತ ಮಳೆ | ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ |
May 9, 2024
12:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ
May 8, 2024
9:54 PM
by: The Rural Mirror ಸುದ್ದಿಜಾಲ
ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |
May 8, 2024
1:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror