ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಸಿಮೆಂಟ್ ಬೆಲೆಯನ್ನು ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದೀಗ ಕಟ್ಟಡ ನಿರ್ಮಾಣದ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಕಬ್ಬಿಣ್ಣ ದರ ಕೆಜಿಗೆ 90 ರೂ. ದಾಟಿದ್ದು, ಸಿಮೆಂಟ್ ದರ 50 ಕೆಜಿ ಪ್ಯಾಕ್ ಗೆ ಬರೋಬ್ಬರಿ 430 ರೂ. ತಲುಪಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ ಹೇಳಿದೆ. ಸಿಮೆಂಟ್ ದರದಲ್ಲಿ ಸಾಗಣೆ ವೆಚ್ಚವೇ ಶೇ. 50 ರಷ್ಟು ಇರುವ ಕಾರಣ ಡೀಸೆಲ್ ದರ ಏರಿಕೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಹೀಗಾಗಿ ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ ಹೆಚ್ಚಳ ಮಾಡಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ. ಈಗಾಗಲೇ ಪ್ರತಿ ಚೀಲ ಸಿಮೆಂಟ್ ಬೆಲೆ 430 ರೂ.ವರೆಗೆ ತಲುಪಿದ್ದು, ಶೀಘ್ರವೇ 450 ರೂ. ಗಡಿ ದಾಟುವ ಸಾಧ್ಯತೆ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel