ಮರದಿಂದ ನೀರು ಚಿಮ್ಮುತ್ತದೆ ಏಕೆ.. ? | ಅದರ ಹಿಂದಿನ ವಿಜ್ಞಾನ ಏನು ?

Advertisement

ಮರದಿಂದ ನೀರು ಚಿಮ್ಮುತ್ತಿದೆ. ಪ್ರಕೃತಿಯ ಈ ಅಚ್ಚರಿ ಅಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಜ್ಞಾನದ ಮೂಲಕ ಈ ಅಚ್ಚರಿಗೆ ಉತ್ತರವೂ ಸಿಕ್ಕಿದೆ. ಈ ಘಟನೆ ನಡೆದದ್ದು ಯುರೋಪಿನ ಮಾಂಟೆನೆಗ್ರೊದಲ್ಲಿ.  ಹಿಪ್ಪುನೇರಳೆ ಮರದಲ್ಲಿ  ಈ ಕೌತುಕ ಕಂಡಿತ್ತು. 

Advertisement

ಆಗ್ನೇಯ ಯುರೋಪಿನ ಮಾಂಟೆನೆಗ್ರೊದಲ್ಲಿರುವ ಹಿಪ್ಪುನೇರಳೆ ಮರವು ಅದರ ಕಾಂಡದೊಳಗೆ ಧಾರಾಕಾರವಾಗಿ ನೀರನ್ನು ಹೊರಹಾಕುವುದನ್ನು ಕಾಣುತ್ತಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಯಿತು. ಮರದಿಂದ ಈ ರೀತಿ ನೀರು ಚಿಮ್ಮಲು ಸಾಧ್ಯವೇ ಎಂದು ಚರ್ಚೆಯಾಗಿತ್ತು. ಅದರಲ್ಲಿ  ಏನೋ ಕೌತುಕವಿದೆ ಎಂದೂ ಚರ್ಚೆಯಾಯಿತು. ಆದರೆ ಪ್ರಪಂಚದಾದ್ಯಂತ ಇದೇ ಮಾದರಿಯಲ್ಲಿ  ವಿವಿಧ ಮರಗಳಲ್ಲಿ  ನೀರು ಹೊರಬರುತ್ತದೆ, ಕೆಲವು ಮರಗಳಲ್ಲಿ ನೀರು ಚಿಮ್ಮುತ್ತದೆ ಕೂಡಾ. ಕೆಲವು ಮರಗಳಲ್ಲಿ  ಗೆಲ್ಲು, ಟೊಂಗೆ ಕಡಿದಾಗ ನೀರು ಹರಿದರೆ ಇನ್ನೂ ಕೆಲವು ಮರಗಳಲ್ಲಿ ಪ್ರಕೃತಿ ಸಹಜವಾಗಿಯೇ ವರ್ಷಕ್ಕೊಮ್ಮೆ ನೀರು ಹರಿಯುತ್ತದೆ.  ಕೆಲವು ಮರಗಳು ಪ್ರತಿ ವರ್ಷ, ಒಂದು ಅಥವಾ ಎರಡು ದಿನಗಳವರೆಗೆ, ಮರಗಳ ತೊಗಟೆಗಳು ಅವುಗಳ ಮೂಲಕ ನೀರನ್ನು ಹರಿಯುವಂತೆ ಮಾಡುತ್ತವೆ.

Advertisement
Advertisement
Advertisement

ಮಾಂಟೆನೆಗ್ರೊದ ರಾಜಧಾನಿಯಾದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲೂ ಅದೇ ಮಾದರಿಯಲ್ಲಿ ಮರದಿಂದ ನೀರು ಹರಿದಿದೆ. ಮರದ ಟೊಳ್ಳುಗಳು ಉಕ್ಕಿ ಹರಿಯುವಿಕೆಯನ್ನು ಸಮತೋಲನಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಮರಗಳು ಈ ರೀತಿಯಲ್ಲಿ  ನೀರನ್ನು ಹೊರಹಾಕುತ್ತವೆ. ಮಳೆ ಕಳೆದು ಬೇಸಗೆಯ ಸಮಯದಲ್ಲಿ  ಮರಗಳು ಸಮತೋಲನ ಕಾಣಲು ಈ ರೀತಿ ಮಾಡುತ್ತವೆ ಎಂದು ವೈಜ್ಞಾನಿಕ ಕಾರಣವನ್ನು ಕೊಡಲಾಗಿದೆ.

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮರದಿಂದ ನೀರು ಚಿಮ್ಮುತ್ತದೆ ಏಕೆ.. ? | ಅದರ ಹಿಂದಿನ ವಿಜ್ಞಾನ ಏನು ?"

Leave a comment

Your email address will not be published.


*