ಪೊವಾಸನ್ ವೈರಸ್: ಟಿಕ್ ಹರಡುವ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ.

May 27, 2023
7:20 PM

ಯುಎಸ್, ಕೆನಡಾ ಮತ್ತು ರಷ್ಯಾದಲ್ಲಿ ಮಾನವರಲ್ಲಿ ಪೊವಾಸನ್ ವೈರಸ್ ವರದಿಯಾಗಿದ್ದು, ಯುಎಸ್ ನಲ್ಲಿ 1 ಸಾವು ದಾಖಲಾಗಿದೆ.

Advertisement
Advertisement
Advertisement
Advertisement

ಪೊವಾಸನ್ ವೈರಸ್ ಎಂದರೇನು? ಟಿಕ್ ಹರಡುವ ಕಾಯಿಲೆಯ ಬಗ್ಗೆ ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ.

Advertisement

ಇವು ಟಿಕ್(ಉಣ್ಣಿ)ಗಳಿಂದ ಹರಡುತ್ತವೆ. ಅಂದರೆ ಪೊವಾಸನ್ ಎಂಬುದು ಟಿಕ್ ಕಚ್ಚುವಿಕೆಯಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಅಪರೂಪದ ವೈರಸ್ ಆಗಿದ್ದು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಯುಎಸ್, ಕೆನಡಾ ಮತ್ತು ರಷ್ಯಾದ ಜನರಲ್ಲಿ ಈ ವೈರಸ್ ವರದಿಯಾಗಿದ್ದು, ಯುಎಸ್ ಸಗಡಾಹೋಕ್ ಕೌಂಟಿ ಎನ್ನುವ ನಿವಾಸಿಯೊಬ್ಬರು ಈ ಅಪರೂಪದ ವೈರಸ್ನಿಂದ ಸಾವನ್ನಪ್ಪಿದ್ದಾರೆ ಎಂದು ಮೈನೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದ್ದಾರೆ. ಹಾಗಾಗಿ ಉಣ್ಣಿಗಳಿಂದ ಹರಡುವ ಮಾರಣಾಂತಿಕ ಪೊವಾಸನ್ ವೈರಸ್ ಬಗ್ಗೆ ಆರೋಗ್ಯ ಅಧಿಕಾರಿಗಳು ಜನರನ್ನು ಎಚ್ಚರಿಸುತ್ತಿದ್ದಾರೆ. ಯುಎಸ್ನಲ್ಲಿ ಪ್ರತಿವರ್ಷ 25 ಜನರು ಸೋಂಕಿಗೆ ಒಳಗಾಗುತ್ತಾರೆ, ಈ ಸಾವು ಮೂರನೇ ಮಾರಣಾಂತಿಕ ಪ್ರಕರಣವನ್ನು ಸೂಚಿಸುತ್ತದೆ.

ಪೊವಾಸನ್ ವೈರಸ್ ಸಾಮಾನ್ಯವಾಗಿ ಸೋಂಕಿತ ಜಿಂಕೆ ಉಣ್ಣೆಗಳು, ಗ್ರೌಂಡ್ಹಾಗ್ ಉಣ್ಣೆಗಳು ಅಥವಾ ಅಳಿಲು ಉಣ್ಣೆಗಳಿಂದ ಕಚ್ಚುವ ಮೂಲಕ ಮಾನವರಿಗೆ ಹರಡುತ್ತದೆ, ಸಾಮಾನ್ಯವಾಗಿ ಉತ್ತರ ಅಮೆರಿಕದ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ವಸಂತ ಕಾಲದ ಕೊನೆಯಲ್ಲಿ ಮತ್ತು ಶರತ್ಕಾಲದ ಮಧ್ಯದ ನಡುವೆ ಕಂಡುಬರುತ್ತದೆ. ಈ ಪ್ರಕರಣಗಳು ವಿರಳವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಅದಕ್ಕೂ ಹೆಚ್ಚಾಗಿ ಯುಎಸ್, ಕೆನಡಾ ಮತ್ತು ರಷ್ಯಾದಲ್ಲಿ ಪೊವಾಸನ್ ವೈರಸ್ ಸೋಂಕುಗಳು ವರದಿಯಾಗಿವೆ.
ಪೊವಾಸನ್ ವೈರಸ್ ಸೋಂಕಿತ ಜನರಲ್ಲಿ ಹೆಚ್ಚಿನವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ, ಟಿಕ್ ಕಡಿತದಿಂದ ಅನಾರೋಗ್ಯ ಅನುಭವಿಸುವ ಸಮಯ 1 ವಾರದಿಂದ 1 ತಿಂಗಳಾಗಿರುತ್ತವೆ.

Advertisement

ಆರಂಭಿಕ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ವಾಂತಿ ಮತ್ತು ಸುಸ್ತು ಸೇರಿವೆ.
-ಪೊವಾಸನ್ ವೈರಸ್ ಮೆದುಳಿನ ಸೋಂಕು (ಎನ್ಸೆಫಾಲಿಟಿಸ್) ಅಥವಾ ಮೆದುಳು ಮತ್ತು ಬೆನ್ನುಹುರಿಯ ಸುತ್ತಲಿನ ಪೊರೆಗಳು (ಮೆನಿಂಜೈಟಿಸ್) ಸೇರಿದಂತೆ ತೀವ್ರ ಕಾಯಿಲೆಗೆ ಕಾರಣವಾಗಬಹುದು.
-ಗೊಂದಲ, ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು, ಮಾತನಾಡಲು ತೊಂದರೆ ಮತ್ತು ಸೆಳೆತಗಳು, ತೀವ್ರ ಕಾಯಿಲೆಯ ರೋಗಲಕ್ಷಣಗಳಲ್ಲಿ ಒಂದಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror