ಮೆಕಾಲೆ ಪ್ರಣೀತವಲ್ಲದ, ಶುದ್ಧ ಭಾರತೀಯ ಪಾರಂಪರಿಕ ಶಿಕ್ಷಣ ನೀಡುವ ಪರಂಪರಾ ಗುರುಕುಲ ಈ ವರ್ಷದ ಜೂನ್‍ನಿಂದ ಗೋಕರ್ಣ ಸಮೀಪದ ಅಶೋಕೆಯಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.
ದೇಶದ ಮೇಲೆ ಬಾಹ್ಯ ಮತ್ತು ಆಂತರಿಕವಾಗಿಯೂ ಆಕ್ರಮಣಗಳು ನಡೆದಿವೆ. ಈ ಅವಧಿಯಲ್ಲಿ ದೇಶವನ್ನು ಹಾಳು ಮಾಡುವ ಪ್ರಯತ್ನಗಳು ನಡೆದಿವೆ. ಆಂತರಿಕವಾಗಿ ಜನಮಾನಸವನ್ನು ಹಾಳು ಮಾಡುವ ಪ್ರಯತ್ನಗಳು ಕೂಡಾ ನಿರಂತರವಾಗಿ ನಡೆಯುತ್ತಿವೆ. ನಮ್ಮತನವನ್ನೇ ಮರೆಸುವ ಪ್ರಯತ್ನಗಳು ನಡೆದಿದ್ದು, ಇಂದು ಭಾರತೀಯರು ಬಾಹ್ಯವಾಗಿ ಕಂದುಬಣ್ಣದವರಾಗಿದ್ದರೂ, ಅಂತರ್ಯದಲ್ಲಿ ನಾವು ಬಿಳಿಯರೇ (ಬ್ರಿಟಿಷರು) ಆಗಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ಜೀವನಪದ್ಧತಿ ಇಂದು ಪರಕೀಯವಾಗಿದೆ. ನಮ್ಮ ಸಹಜ ಸಂಸ್ಕøತಿ ವಿಚಿತ್ರ ಎನಿಸುವ ಸ್ಥಿತಿ ಇದೆ. ನಮ್ಮ ಆಹಾರ ವಿಹಾರ, ಉಡುಗೆ- ತೊಡುಗೆ ಅನುಷ್ಠಾನ ಹೀಗೆ ನಮ್ಮ ದಿನಚರಿಯನ್ನು ಅವಲೋಕಿಸಿದರೆ ನಾವು ನಾವಾಗಿ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅದನ್ನು ಸ್ವಸ್ಥ ರೂಪಕ್ಕೆ ತರುವ ಉದ್ದೇಶದಿಂದಲೇ ವಿವಿವಿ ಆವೀರ್ಭವಿಸಿದೆ ಎಂದು ಸ್ಪಷ್ಟಪಡಿಸಿದರು.
ಆಯಾ ಕಾಲದ ಸವಾಲುಗಳಿಗೆ ಉತ್ತರ ನೀಡಬೇಕು ಎನ್ನುವುದೇ ಶ್ರೀಶಂಕರರ ಆಶಯ. ಅವರ ಹಾದಿಯಲ್ಲಿ ನಡೆಯುವುದೇ ಈ ವಿಶಿಷ್ಟ ಪ್ರಯತ್ನ. ದೇಶ- ಧರ್ಮವನ್ನು ಉಳಿಸುವ ಧರ್ಮಯೋಧರನ್ನು ಸಾವಿರಾರು ಸಂಖ್ಯೆಯಲ್ಲಿ ಸೃಷ್ಟಿಸಿ ಸಮಾಜಕ್ಕೆ ಅರ್ಪಿಸುವ ಪ್ರಯತ್ನ ನಮ್ಮ ವಿಶ್ವವಿದ್ಯಾಪೀಠದ್ದು. ಬೇರೆ ಯಾರೂ ಮಾಡಲಾಗದ್ದನ್ನು ಮಾಡುವುದು ಶ್ರೀಪೀಠದ ಸಂಕಲ್ಪ. ಇದರ ಫಲ ದೇಶಕ್ಕೆ ವಿಶ್ವಕ್ಕೆ ದೊರಕಿಸುವ ಮಹಾಯಜ್ಞದಲ್ಲಿ ನಿಮ್ಮ ಪಾತ್ರವೂ ಇರಬೇಕು ಎಂದು ನೆನಪಿಸುವುದೇ ವಿವಿವಿ ಸಂವಾದದ ಉದ್ದೇಶ. ಭವ್ಯ ಸೌಧದಲ್ಲಿ ನೀವು ಇಟ್ಟಿಗೆಯಾಗಿ. ಭವ್ಯ ಯಜ್ಞದಲ್ಲಿ ಕಟ್ಟಿಗೆಗಳಾಗಿ. ಮಠದ ಶಿಷ್ಯರಲ್ಲಿ ಅಪಾರ ಶಕ್ತಿ ಇದೆ. ಇಂಥ ಇತಿಹಾಸ ಸೃಷ್ಟಿಸಲು ನಿಮ್ಮ ಶಕ್ತಿ ವಿನಿಯೋಗಿಸಿ ಎಂದು ಕರೆ ನೀಡಿದರು.
ವಿವಿವಿ ವಿದ್ಯಾಪರಿಷತ್ ಕಾರ್ಯದರ್ಶಿ ಎಸ್‍ಎಸ್ ಹೆಗಡೆ ಮತ್ತು ವಿಶ್ವೇಶ್ವರ ಭಟ್ ಉಂಡೇಮನೆ ಪ್ರಾಸ್ತಾವಿಕ ಮಾತನಾಡಿದರು.
ಆರೆಸ್ಸೆಸ್ ಮುಖಂಡ ನಾ. ಸೀತಾರಾಮ, ಅರ್ಥಶಾಸ್ತ್ರ ಉಪನ್ಯಾಸಕಿ ಯಶೋಧಾ ರಾಮಚಂದ್ರ, ಉದ್ಯಮಿ ಗಿರಿಧರ ಹೆಗಡೆ, ಗೇರು ಉದ್ಯಮಿ ಸುಧಾಕರ ಕಾಮತ್, ವರ್ತಕ ಸಮುದಾಯದ ಆನಂದ ಪೂಜಾರಿ, ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್, ಪ್ರೊ.ಶ್ರೀಕೃಷ್ಣ ಭಟ್, ಪದ್ಮನಾಭ ಭಟ್, ಶ್ರೀಧರ ಭಟ್ ಕುದ್ಕುಳಿ, ಜಗನ್ನಿವಾಸ ರಾವ್, ಸುರೇಶ್ ಕಣೆಮರಡ್ಕ, ಗೋಪಾಲ ರಾವ್, ಶಿವಪ್ರಸಾದ್, ಶ್ರೀಕೃಷ್ಣ ಮೀನಗದ್ದೆ ಮತ್ತಿತರರು ಉಪಸ್ಥಿತರಿದ್ದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…