ಗುತ್ತಿಗಾರು ಗ್ರಾಮ ಕಮಿಲ ಕೋಡುಕಜೆಯ ದಿ.ಪರಮೇಶ್ವರ ಗೌಡರ ಪುತ್ರ ಕೆ.ವಿಶ್ವನಾಥ ಭಾರತೀಯ ಸೇನೆಯಲ್ಲಿ 17 ವರ್ಷಗಳ ಸೇವೆ ಸಲ್ಲಿಸಿ ಡಿಸೆಂಬರ್ ಅಂತ್ಯಕ್ಕೆ ಸೇವೆಯ ಬಳಿಕ ನಿವೃತ್ತಿ ಹೊಂದಿದರು. ಬಳಿಕ ಜ.5 ಕಮಿಲಕ್ಕೆ ಆಗಮಿಸಿದ ಸಂದರ್ಭ ಗ್ರಾಮಭಾರತದ ತಂಡ ಹಾಗೂ ಕಮಿಲ, ಮೊಗ್ರ ಪ್ರದೇಶದ ನಾಗರಿಕರು ಅವರ ಮನೆಗೆ ತೆರಳಿ ವಾಹನದ ಮೂಲಕ ಮೊಗ್ರ ಬಲ್ಲಾಳರ ರಾಜಾಂಗಣಕ್ಕೆ ಕರೆತಂದು ಅವರನ್ನು ಗೌರವಿಸಿ, ಅಭಿನಂದಿಸಿದ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ವಿಶ್ವನಾಥ ಅವರ ತಾಯಿಯವರನ್ನೂ ಗೌರವಿಸಲಾಯಿತು.
ಅಭಿನಂದನಾ ಸಮಾರಂಭದಲ್ಲಿ ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾಕುಮಾರಿ, ಭರತ್ ಕೆವಿ, ಪ್ರಮುಖರಾದ ಕಾರ್ಯಪ್ಪ ಗೌಡ ಚಿಕ್ಮುಳಿ, ಮಹೇಶ್ ಪುಚ್ಚಪ್ಪಾಡಿ, ಬಿಟ್ಟಿ ಬಿ ನೆಡುನೀಲಂ, ಸುಧಾಕರ ಮಲ್ಕಜೆ, ಲಕ್ಷ್ಮಣ ದೇವಸ್ಯ, ರಾಮಕೃಷ್ಣ ಚಿಕ್ಮುಳಿ, ವಿಶ್ವನಾಥ ಅವರ ತಾಯಿ ಕೆಂಚಮ್ಮ, ರಘುವೀರ್ ಎಂ ಆರ್ , ಮಂಜುನಾಥ ಮುತ್ಲಾಜೆ, ಬಾಬು ಕಮಿಲ ಮೊದಲಾದವರಿದ್ದರು.

ಅಚ್ಚುತ ಮಲ್ಕಜೆ ಸ್ವಾಗತಿಸಿ ರಘುವೀರ್ ವಂದಿಸಿದರು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




