ಹೀಗೆ ಸುಮ್ಮನೆ… ಸರಳ ಅರ್ಥಶಾಸ್ತ್ರ(simple Economy).. ನಿಮ್ಮ ಮಗ(Son) ಹಳ್ಳಿಯಲ್ಲಿ(Village) ಕೂತು ಕೃಷಿ(Agriculture) ಮಾಡಿದ್ರೆ..? ಮೊದಾಲಿಗೆ ಅವನಿಗೆ ಯಾರೂ ಹುಡುಗಿ(Girl) ಕೊಡಲ್ಲ ಅಂತಾ ನಿಮಗೆ ಆಕ್ರೋಶ ಬರುತ್ತೆ. 40 ಖಂಡಿ ಅಡಿಕೆ(Areca Nut), ಟೈಲ್ಸ್ ಹಾಕಿದ ಮನೆ, ಗ್ರಾಂಡ್ ವಿಟಾರ ಎಲ್ಲಾ ಇದೆ. ಆದ್ರೆ ಸರಿಯಾಗಿ ಹೆಂಡ್ತಿ ಇಲ್ಲಾಂದ್ರೆ ಎಂತ ಕಥೆ..?
ನಿಮ್ಮ ತೋಟದಲ್ಲಿ ಕೆಲಸ ಮಾಡಲು ಸರಿಯಾದ ಹುಡುಗರು ಬರ್ತಾ ಇಲ್ಲಾ ತಾನೇ..? ಅಡಿಕೆ ಹೆಕ್ಕಲು, ಮನೆ ಒರಸಲು ಹುಡಗಿಯರು ಬರಲ್ಲ ತಾನೇ..? ಯಾವ ಗ್ರಾಚಾರಕ್ಕೆ ಅವ್ರು ಪೇಟೆಗೆ ಹೋಗೋದು? ಸಿಗೋದು ಅಬ್ಬಬ್ಬಾ ಅಂದರೆ 7,000/ ಅಡಿಕೆ ತೋಟದಲ್ಲಿ ಕೆಲಸ ಮಾಡಿದ್ರೆ 400/ ರಂತೆ ಹನ್ನೆರಡು ಸಾವಿರ ಬರುತ್ತೆ. ಆದ್ರೆ ಅವ್ರು ಬರಲ್ಲ..?
ಯಾಕೆ ಹೀಗೆ.? ಇನ್ನು ಹಳದಿ ರೋಗ, ಎಲೆ ಚುಕ್ಕಿ ರೋಗ, ನೀರಿಲ್ಲ, ಬೆಳೆ ನಿರಂತರ ಕಡಿಮೆ, ತೋಟ ವಿಸ್ತರಣೆಯಿಂದಾಗಿ ನಿರಂತರ ಹಿಂದೆ ಬರ್ತಾ ಇರೋ ಅಡಿಕೆ ದರ. ಇದೆಲ್ಲ ನಾನು ಮಾತಾಡೇ ಇಲ್ಲ. ಅದು ಇನ್ನೊಮ್ಮೆ ಮಾತಾಡಬೇಕಷ್ಟೆ..
ಚಿಕ್ಕ ಪ್ರಾಯದೋರು ನಿಮ್ಮಲ್ಲಿ ಯಾಕೆ ಕೆಲಸಕ್ಕೆ ಬರಲ್ಲ ಅಂತೀರಾ..? ನಿಮ್ಮ ಮಗನನ್ನು ಇಂಗ್ಲೀಶ್ ಮೀಡಿಯಂ ಸಾಲೆ, ಎಕ್ಪರ್ಟ್ ಎಲ್ಲ ಕಳಿಸೋದು ಅವ್ರು ಪಕ್ಕ ಇಲ್ಲಿಂದ ದಾಟಿ ನಗರಕ್ಕೆ ಹೋಗಲಿ ಅಂತಾ ಅಲ್ವಾ..? ನಿಮ್ಮ ಹುಡುಗರು ಪೇಟೆಗೆ ಹೋಗೋದು, ತೋಟಕ್ಕೆ ಇಳಿಯದಿರುವುದು ಖಾಯಂ ಆದಾಗ ಅದೇ ಮಾನಸಿಕತೆಯಲ್ಲಿ ಕೂಲಿ ಹುಡುಗರು ಪೇಟೆಗೇ ಹೋಗ್ತಾರೆ. ಅವ್ರು ಬರಬೇಕು ಅಂತಾ ನಾವು ನಿರೀಕ್ಷೆ ಮಾಡೋದೇ ಸ್ವಲ್ಪ ತಪ್ಪಲ್ವಾ..? ಸತ್ಯ ಹೇಳಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗುವ ಯಾವ ಮಕ್ಕಳು ಕೃಷಿಗೆ ಬಂದಿದ್ದಾರೆ. ಬಂದೋರೆಲ್ಲ ಹೆಚ್ಚಾಗಿ ಶಾಲೆ ಕೂಡದೋರೇ ಅಲ್ವಾ..?
ನಿಮ್ಮ ಮಗಳನ್ನು ಯಾರಾದ್ರೂ ಹಳ್ಳಿಯಲ್ಲಿ ರಾತ್ರೆ ಸ್ಪ್ರಿಂಕ್ಲರ್ ಹಾಕೋ ಹುಡುಗನ ಪೊದು ಬಂದ್ರೆ ಕೊಡಲು ತಯಾರೇ ಇಲ್ಲಾಂತಾದ್ರೆ, ನಿಮ್ಮ ಮಗನಿಗೆ ಬೇರೆಯವರು ಯಾಕೆ ಹುಡುಗಿ ಕೊಡಬೇಕು ಅಂತಾ ಪ್ರಶ್ನೆ ಬಂದೇ ಬರುತ್ತೆ. ನಮ್ಮ ಮಕ್ಕಳು ಬರ್ಮುಡಾ ಹಾಕಿ, ಪೇಟೆಯಲ್ಲಿ ವಾಕ್ ಹೋಗೋದಾದ್ರೆ ನಮ್ಮೂರಿನ ಎಲ್ಲ ಕೂಲಿ ಕೆಲಸ ಮಾಡೋ ಮನೆಯ ಹುಡುಗಿಯರು ಪೇಟೆಗೆ ಹೋಗಿ ಅಂಗಡಿಯಲ್ಲಿ, ಕಂಪ್ಯೂಟರ್ ಶಾಪಲ್ಲಿ, ಸಂಜೀವ ಶೆಟ್ರ ಜವಳಿ ಅಂಗಡಿಯಲ್ಲಿ ಕೆಲಸ ಮಾಡಿದ್ರೆ ಅದು ಬಹಳ ಸಹಜ.
ದೇಶ ಆರ್ಥಿಕವಾಗಿ ಸಭಲ ಆಗ್ತಾ ಹೋದಾಗೆ, ಮೂಲಭೂತ ಸೌಕರ್ಯಗಳು ಹೆಚ್ಚುತ್ತೆ. ಹಳ್ಳಿಗೆ ರಸ್ತೆಗಳು, ಕರೆಂಟು, ಮೊಬೈಲ್ ಸಿಗ್ನಲ್ ಎಲ್ಲವೂ ಊರಿಗೆ ಬರಲು ಶುರು ಆದಾಗ ಈ ಪರಿವರ್ತನೆ ನಿರೀಕ್ಷಿತ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರೆತಾಗ ಅವರು ಹೊಸತನಕ್ಕೆ ತೆರೆದುಕೊಳ್ತಾರೆ. ದೇಶದ ಜಿಡಿಪಿ ಗಣನೀಯವಾಗಿ ಏರಿದ ಎಲ್ಲ ದೇಶಗಳಲ್ಲಿ ಇದು ನಡೆದಿದೆ. ಆಧುನಿಕ ನಗರ ಜೀವನಕ್ಕೆ ಮನಸೋಲದೋರು ಜಗತ್ತಿನಲ್ಲಿ ಯಾರೂ ಇಲ್ಲ. ಬೆಂಗ್ಳೂರಲ್ಲಿ ಕಷ್ಟ ಆದರೆ ಅವ್ರು ಊರಿಗೆ ಬರೋದ ಅಲ್ಲಾ ಅಮೇರಿಕಾಕ್ಕೆ ಹಾರೋದಾ ಅಂತಾ ಆಯ್ಕೆ ಬಂದಾಗ ಅವ್ರು ಎರಡನೇಯದ್ದೇ ಮಾಡ್ತಾರೆ.
ನಮ್ ಪುಟ್ಟ ಬಂಗಾರಡ್ಕದಲ್ಲಿ ಈವಾಗ ಸುಮಾರು 26 ಜನ ಯುವಕ ಯುವತಿಯರು ನಿತ್ಯ ಪುತ್ತೂರಿಗೆ ಹೋಗ್ತಾರೆ. 7-8 ಸಾವಿರ ದುಡೀತಾರೆ. ಆದರೆ ಅವರ ಜೀವನ ಶೈಲಿ ಬಹಳ ಸುಧಾರಿಸಿದೆ. ಅವರು ರಿಲಯನ್ಸ್ ಮಾಲಲ್ಲಿ ದಿನ ಪೂರ್ತಿ ಏಸಿಯಲ್ಲಿ ಕೆಲಸ ಮಾಡ್ತಾರೆ. ಹಸಿವಾದಾಗ ಗಡ್ ಬಡ್ ತಿನ್ನದಿದ್ರೂ ಸಮೋಸಾ ಆದ್ರೂ ತಿಂತಾರೆ. ಕ್ಯೂಟ್ ಅನಿಸುವ ಬಟ್ಟೆ ದರಿಸ್ತಾರೆ. ಒಳ್ಳೆ ಸ್ಮಾರ್ಟ್ ಫೋನ್ ಹಿಡೀತಾರೆ. ಹೋಗಲು ಕಂತಿನಲ್ಲಿ ಯಾಕ್ಟೀವಾ ಮಾಡ್ಕೊಳ್ತಾರೆ. ಕೈ ಕಾಲುಗಳಲ್ಲೆ ಬಿಳಿಯಾಗಿ, ಕೋಮಲವಾಗಿದೆ.
ಏಸಿ ಅಡಿಯಲ್ಲಿ ಕೆಲಸ ಮಾಡಿ ಮುಖ ಎಲ್ಲ ಶೈನಿಂಗ್ ಶೈನಿಂಗ್ ಆಗಿದೆ. ಅದರ ಬದಲು ಎರಡು ಸಾವಿರ ಹೆಚ್ಚು ಸಿಕ್ತದೆ ಅಂತಾ ನಿಮ್ಮ ತೋಟಕ್ಕೆ ಅಡಿಕೆ ಹೆಕ್ಕಲು ಬಂದಿದ್ರೆ, ಅವ್ರು ಇಡೀ ದಿನ ಹಳೇ ಜೋಪಡಿಯಲ್ಲಿ ಮಣ್ಣಿನ ನೆಲದಲ್ಲಿ ಸೊಳ್ಳೆ ಹೊಡೀತಾ ಇರಬೇಕು. ತುಂಬಾ ಕಡೆ ನೀರು ಕುಡಿಯಲು ತೋಡಿನಲ್ಲಿ ಹೊಂಡ ತೋಡಿ, ಆ ನೀರನ್ನ ಕೊಡಪಾನದಲ್ಲಿ ತರಬೇಕು. ಗಲೀಜು ಎನಿಸುವ ನೈಟಿಯೇ ಅವರ ಸರ್ವಸ್ವ. ನಿಮ್ಮ ಮಗ ಹಳ್ಳಿಯಲ್ಲಿ ಕೂತ್ರೆ ಹುಡುಗಿ ಸಿಗಲ್ಲ ಅಂತೀರಾ..? ಈ ಬಡ ಹುಡುಗಿಯರು ತೋಟದ ಕೆಲಸಕ್ಕೆ ಹೋದರೆ ಅವರಿಗೆ ಗಂಡೇ ಸಿಗಲ್ಲ. ಹಾಗಾಗಿ ಅವರೆಲ್ಲ ನಗರಕ್ಕೆ ಹೋಗೋದು ಸಹಜ ಅಲ್ವಾ?. ನಗರ ಶಬ್ದದ extended form ನಾಗರೀಕತೆ.
ಈಗ ವಾಸ್ತವ ಏನೂಂದ್ರೆ ನಿಮ್ಮ ಕೂಲಿ ಕೆಲಸದ ಮನೆಯ ಹುಡುಗಿ ಮೇಲೆ ಹೇಳಿದಂತೆ ಜೀವನ ಮಾಡೋದು, ನಿಮ್ಮ ಹಣ ನೋಡಿ ನಿಮ್ಮ ಮಗನಿಗೆ ಹುಡುಗಿ ಯಾರಾದ್ರೂ ಕೊಟ್ಟಿದ್ರೆ ಅವ್ರು ಹಗಲು ಅಡಿಕೆ ತೆಗೆಯೋರಿಗೆ 24 ದೋಸೆ ಎರೆದು ಕೊಡೋದು, ಸಂಜೆ ಸೊಳ್ಳೆ ಹೊಡೀತಾ ಮಿಶನ್ ಗೆ ಒಳ್ಳೆ ಮೆಣಸು ಹಾಕ್ತಾ ಕೈ ಪೂರ್ತಿ ಕಪ್ಪು ಮಾಡ್ಕೊಂಡು ಇರೋದು ಅಲ್ವಾ..? ಈಗ ಹೇಳಿ ನಿಮ್ಮ ಮಗಳು ಹೀಗೆ ಜೀವನ ಮಾಡಿದ್ರೆ ನಿಮಗೆ ಬೇಜಾರು ಆಗಲ್ವಾ..? ಹಾಗಾದ್ರೆ ಸೊಸೆ ಬೇಕು ಅಂದ್ರೆ ಹೇಗೆ.?
ಹಲವು ಬಾರಿ ಹೇಳಿದಂತೆ ದೇಶದ ಒಟ್ಟು ಲೇಬರ್ ಫೋರ್ಸಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡೋರು 45% ಇರಬಹುದು. ಒಟ್ಟು ಜನಸಂಖ್ಯೆಯ 20 % ಯುವ ಪೀಳಿಗೆ ಹಳ್ಳಿಯಲ್ಲಿ ಇದ್ದು ಪೇಟೆಯಲ್ಲಿ ಕೆಲಸ ಮಾಡ್ತಿದ್ದಾರೆ. ಅದರಲ್ಲಿ ಇರೋರು ನಿಮ್ಮಲ್ಲಿ ತೋಟದ ಕೆಲಸ ಮಾಡೋ ಮುದುಕ ಕೂಲಿ ಕಾರ್ಮಿಕರ ಮುಂದಿನ ಜನಾಂಗವೇ.
ದೇಶ ಅಭಿವೃದ್ದಿ ಆಗುತ್ತೆ ಅಂದರೆ ಹಳ್ಳಿಯಲ್ಲಿ ಇರೋ ಜನ ಕಡಿಮೆ ಆಗಲೇ ಬೇಕು. ಜಿಡಿಪಿಯಲ್ಲಿ ಕೃಷಿಯ ಪಾಲು ಈಗಿರುವ 14% ಕ್ಕಿಂತ ಎಷ್ಟು ಕಡಿಮೆ ಅಂದರೂ 7% ಕ್ಕೆ ಇಳಿಯಲೇ ಬೇಕು. ಹಳ್ಳಿಯಲ್ಲಿ ಕೃಷಿಗೆ ಬಹಳ ಕಷ್ಟ ಅಂತಾ ಅನಿಸಿದಾಗ ತಂತ್ರಜ್ನಾನದ ಹೊಳೆಯೇ ಹರಿಯಬೇಕು. ಶಕ್ತರು ಮಾತ್ರ ಕೃಷಿ ಮಾಡಬೇಕು.
ಅಮೇರಿಕಾದವರು ಬಾಳೆ ಹಣ್ಣು ಕೃಷಿ ಮಾಡಿದರೆ ಭಾರತದವರಿಗಿಂತ ಈಗಲೂ ಕಡಿಮೆ ಕಾಸ್ಟ್ ನಲ್ಲಿ ಮಾಡಲು ಶಕ್ತರು. ಆದರೆ ಅವರು ಮಾಡಲ್ಲ. ಕಾರಣ ಅವರ ಲೇಬರ್ ವಾಲ್ಯೂ ಬಹಳ ಮೇಲೆ (law of comparitive advantage). ಅದನ್ನು ಡ್ರೋನ್, ವಿಮಾನ, ತಯಾರಿಸಲು ಉಪಯೋಗಿಸ್ತಾರೆ ಹಾಗೂ ದೊರೆತ ಹಣದ ಒಂದಂಶದಲ್ಲಿ ಮೆಕ್ಸಿಕೋದಿಂದ ಬಾಳೆ ಹಣ್ಣು ತರ್ತಾರೆ, ಬಾಂಗ್ಲಾದಿಂದ ಬಟ್ಟೆ ತರ್ತಾರೆ, ಚೀನಾದಿಂದ ಮೊಬೈಲ್ ತರ್ತಾರೆ, ಜಪಾನಿಂದ ಕಾರ್ ತರ್ತಾರೆ. ಅಷ್ಟೇ..