2014 ರಲ್ಲಿ ಬಾಲಕನ ಸಂಶೋಧನೆ – ಈಗ ವಿಜ್ಞಾನಿಗಳ ಸಂಶೋಧನೆಯೂ ಹೌದು…! |

February 9, 2021
3:24 PM

ಗಿಡಿಗಳಿಗೆ ನೀರುಣಿಸಲು ಬತ್ತಿಯ ಮಾದರಿಯ ತಂತ್ರಜ್ಞಾನವನ್ನು ಪರಿಚಯ ಮಾಡಿರುವ ಬಾಲಕ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ವಿಸ್ಮಯ ದೇವಸ್ಯ. ಅದು 2014  ರಲ್ಲಿ. ಈ ಪ್ರಾಜೆಕ್ಟ್‌ ಗೆ ಅಂದು ಚಿನ್ನದ ಪದಕವೂ ಲಭ್ಯವಾಗಿತ್ತು. ಇದೀಗ ಅದೇ ಮಾದರಿಯ ನೀರುಣಿಸುವ ತಂತ್ರಜ್ಞಾನವನ್ನು ಪರಿಚಯ ಮಾಡಿದ್ದಾರೆ ಐ ಐ ಎಚ್‌ ಆರ್‌ ನ ವಿಜ್ಞಾನಿ. ..!

Advertisement
Advertisement
Advertisement

ಲೋಮನಾಳ ಹೀರಿಕೆ ಅಥವಾ ಬತ್ತಿ ಎಣ್ಣೆ ಬೆಳಗಿದಂತೆ ಗಿಡಗಳು ನೀರನ್ನು ಹೀರುವ ಮಾದರಿಯನ್ನು ವಿಸ್ಮಯ ದೇವಸ್ಯ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ  2013-14  ವಿದ್ಯಾರ್ಥಿಯಾಗಿದ್ದ ಈ ಬಾಲಕ ಮಾಡಿರುವ ಈ ಮಾದರಿಗೆ ಅಂದು ಚಿನ್ನದ ಪದಕ ಲಭ್ಯವಾಗಿತ್ತು. ಸೈನ್ಸ್‌ ಸೊಸೈಟಿ ಆಫ್‌ ಇಂಡಿಯಾ ಆಯೋಜಿಸಿದ ಈ ಮೇಳದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ  ಲಕ್ಷ್ಮಣ ದೇವಸ್ಯ ಅವರ ಪುತ್ರ ಬಾಲಕ ವಿಸ್ಮಯ ದೇವಸ್ಯ ಮಾಡಿರುವ ಈ ಪ್ರಾಜೆಕ್ಟ್‌ ಅಂದು ಗಮನ ಸೆಳೆದಿತ್ತು.

Advertisement

 

Advertisement

ಇದೀಗ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೇ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಮಾಹಿತಿ ನೀಡಿದೆ. ತಕ್ಷಣವೇ ಈ ಬಗ್ಗೆ ಗಮನ ಸೆಳೆದ ಬಾಲಕ ವಿಸ್ಮಯ ದೇವಸ್ಯ ಅವರ ಹೆತ್ತವರು ” ಈ ಮಾದರಿಯನ್ನು ವಿಸ್ಮಯ ದೇವಸ್ಯ ಈ ಹಿಂದೆಯೇ ಮಾಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.

Advertisement

ವಿದ್ಯಾರ್ಥಿಗಳು ಮಾಡುವ ಬಹುತೇಕ ಪ್ರಾಜೆಕ್ಟ್‌ ಗಳು ಕೃಷಿಕರಿಗೆ ಅನುಕೂಲವಾಗುವಂತೆ ಇರುತ್ತದೆ. ಆದರೆ ಅದನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಅಥವಾ ಹಾಗೆಯೇ ಅನುಷ್ಟಾನ ಮಾಡುವ ವೇಳೆ ವಿದ್ಯಾರ್ಥಿಗಳ ಕಾರ್ಯವನ್ನೂ, ಕೆಲಸವನ್ನೂ ಉಲ್ಲೇಖ ಮಾಡದೆಯೇ ಅನ್ಯಾಯ ಮಾಡಬಾರದು. ವಿದ್ಯಾರ್ಥಿಗಳ ಸಾಧನೆ ಅಪಾರ ಇರುತ್ತದೆ. ಅದರ ಹಿಂದೆ ಅಪಾರ ಶ್ರಮ ಇರುತ್ತದೆ. ವಿಜ್ಞಾನಿಗಳು ಯಾವುದೇ ಸಂಶೋಧನೆ ಮಾಡುವ ಮುನ್ನ ವಿವಿದೆಡೆ ಇಂತಹ ಪ್ರಾಜೆಕ್ಟ್‌ ಅಥವಾ ಮಾದರಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾದ್ದು ಮೂಲಭೂತವಾದ ವಿಷಯವಾಗಿದೆ. ಈ ಪ್ರಾಜೆಕ್ಟ್‌ ಗೂಗಲ್‌ ಮೂಲಕ ಲಭ್ಯವಾಗುವ ಕಾರಣದಿಂದ ವಿದ್ಯಾರ್ಥಿಯ ಹೆಸರನ್ನು ಉಲ್ಲೇಖ ಮಾಡಬೇಕಿತ್ತು ಮಾತ್ರವಲ್ಲ ವಿಜ್ಞಾನಿಗಳು ಈ ಮಾದರಿಯ ಕೆಲಸ ಮಾಡಬಾರದು ಎಂದು ಬಾಲಕ ವಿಸ್ಮಯನ ಪೋಷಕರು ಹೇಳುತ್ತಾರೆ.

 

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ
November 26, 2024
5:53 AM
by: ದ ರೂರಲ್ ಮಿರರ್.ಕಾಂ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror