ದೇಹದಲ್ಲಿ ವಿಟಮಿನ್ಸ್ ಹಾಗೂ ವಿವಿಧ ಬಗೆಯ ಪೌಷ್ಠಿಕ ಸತ್ವಗಳು ಸಮತೋಲನದಲ್ಲಿ ಇರಬೇಕು. ಇದಕ್ಕಾಗಿ ಆರೋಗ್ಯಕಾರಿ ಆಹಾರಪದ್ಧತಿ ಹಾಗೂ ಜೀವನಶೈಲಿಯನ್ನು ಅನುಸರಿಸಬೇಕು. ದೇಹದಲ್ಲಿ ಮುಖ್ಯವಾಗಿ ವಿಟಮಿನ್ ಬಿ12 ಕೊರತೆಯನ್ನು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ವಿಟಮಿನ್ ಬಿ12 ಕೊರತೆ ಕಂಡುಬಂದಲ್ಲಿ ನರವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಸಮಸ್ಯೆಗಳು: ವಿಟಮಿನ್ ಬಿ12 ಕೊರತೆಯಾದಲ್ಲಿ ನರಮಂಡಲಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಕಣ್ಣಿನ ದೃಷ್ಟಿಯ ಸಮಸ್ಯೆ, ನೆನಪಿನ ಶಕ್ತಿ ಕಡಿಮೆಯಾಗುವುದು, ಚರ್ಮದ ಹಳದಿಯಾಗುವುದು, ಪದೇ ಪದೇ ಸುಸ್ತು ಆಯಾಸ, ಹಾಗೂ ಕಾಲಿನ ನರಗಳಲ್ಲಿಯೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ವಿಟಮಿನ್ ಬಿ12 ಕೊರತೆಯು ಹಿಮೋಗ್ಲೋಬಿನ್ ಅನ್ನು ಕಡಿಮೆ ಮಾಡುತ್ತದೆ, ಇದು ಸರಿಯಾದ ಆಮ್ಲಜನಕದ ಪೂರೈಕೆಯನ್ನು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ ನರಕೋಶಗಳ ರಚನೆಯನ್ನು ತಡೆಯುತ್ತದೆ. ನರ ಕೋಶಗಳು ರೂಪುಗೊಳ್ಳದಿದ್ದಾಗ, ನರಗಳು ದುರ್ಬಲಗೊಳ್ಳುತ್ತವೆ. ಇದು ಮುಖ್ಯವಾಗಿ ದೇಹದ ಮೇಲಿನ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುತ್ತದೆ.
ಸ್ನಾಯುಗಳ ಸಮನ್ವಯವನ್ನು ದುರ್ಬಲಗೊಲಿಸುತ್ತದೆ. ಇದು ಕಾಲಿನ ಸ್ನಾಯುಗಳಲ್ಲಿ ಒತ್ತಡ, ಬಿಗಿತ ಅಥವಾ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇನ್ನು ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಗೆ ವಿಟಮಿನ್ ಬಿ12 ಅತ್ಯಗತ್ಯವಾಗಿದ್ದು, ಇದರ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಈ ಸ್ಥಿತಿಯಲ್ಲಿ ದೇಹದ ಮೂಲಕ ಆಮ್ಲಜನಕದ ಹರಿವು ದುರ್ಬಲಗೊಳ್ಳುತ್ತದೆ.
ಪರಿಹಾರ: ವಿಟಮಿನ್ ಬಿ12 ಕೊರತೆಯಿಂದ ಅದೇಷ್ಟೋ ಸಮಸ್ಯೆಗಳು ಎದುರಾಗಬಹುದು. ಇದರಿಂದ ಮೊಟ್ಟೆ, ಡೈರಿ ಉತ್ಪನ್ನಗಳು, ಧಾನ್ಯಗಳು, ಅಲೂಗಡ್ಡೆ, ಅಣಬೆಗಳು, ಬಲವರ್ಧಿತ ಉಪಾಹಾರ ಧಾನ್ಯಗಳು, ಕಾಲೋಚಿತ ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…