ಹಸಿದ ಹೊಟ್ಟೆಗೆ ಆಸರೆಯಾಗಿˌ ಎಲ್ಲರಿಗೂ ಮಾದರಿಯಾದ ತಂಡ ಇದು…!

July 24, 2021
11:32 PM
ಕೊರೋನಾ ಮಹಾಮಾರಿ ದೇಶವನ್ನೇ ತಲ್ಲಣಿಸಿತು. ಅದು ನಗರ-ಗ್ರಾಮೀಣ ಎಂಬ ಯಾವ ಬೇಧವನ್ನೂ ಮಾಡದೆ ಎಲ್ಲೆಡೆ ಸಂಕಟ ತಂದೊಡ್ಡಿತು. ಅದು ಕರಾವಳಿಯನ್ನೂ ಬಿಡಲಿಲ್ಲ.  ಕರಾವಳಿಯಲ್ಲೂ ಅನೇಕರು ಜನರು ಸಂಕಷ್ಟದಲ್ಲಿ ಇದ್ದರು, ಈಗಲೂ ಇದ್ದಾರೆ.  ಈ ಸಮಯದಲ್ಲಿ ಒಂದು ದಿನದ ಊಟಕ್ಕೂ ತೀರಾ ಸಮಸ್ಯೆ ಇರೋ ಕೆಲವು ಮನೆಗಳನ್ನು ಗುರುತಿಸಿ ಅವರಿಗೆ ಒಂದಷ್ಟು ಆಹಾರ ಕಿಟ್‌ ನೀಡಬೇಕು ಎಂಬ ಮನೋಭಾವದಿಂದ  ಮಂಗಳೂರಿನ ವಿವೇಕ್  ಹಾಗೂ ಸ್ನೇಹಿತರು  ಜೊತೆಗೂಡಿ  ಹಸಿದವರಿಗೆ ತಮ್ಮಿಂದ ಅದಷ್ಟು ಸಹಾಯ ಮಾಡಬೇಕೆಂದು  ನಿರ್ಧರಿಸಿ ಸದ್ದಿಲ್ಲದೆ ಕೆಲಸ ಮಾಡಿದರು. ಆದರೆ ಅವರು ಆರಿಸಿಕೊಂಡದ್ದು ಗ್ರಾಮೀಣ ಭಾಗವನ್ನು.
ಆರಂಭದಲ್ಲಿ ಕಾಡಿನ ಒಳಭಾಗದ ಸ್ಥಳಗಳಲ್ಲಿ ವಾಸಿಸುವ  ಐವತ್ತು ಮನೆಗಳ ಲೆಕ್ಕಾಚಾರ ಮಾಡಿ  ದಿನಕಳೆದಂತೆ 475 ಮನೆಗಳಿಗೆ ಸಹಾಯ ನೀಡುವಲ್ಲಿ  ತಂಡ   ಯಶಸ್ವಿಯಾಯಿತು.ಸುಮಾರು ಐದಿನೈದು ಕೆ.ಜಿ ಅಕ್ಕಿ, ಕೆಲವು ಕಡೆ ಇಪತ್ತು ಹಾಗು ಇಪತೈದು ಕೆ.ಜಿ ಅಕ್ಕಿ, ಇದರ ಜೊತೆಗೆ  ಇತರ ಹನ್ನೆರೆಡು ಆಹಾರ ಪದಾರ್ಥಗಳ ಕಿಟ್ ನ್ನು  ಸಿದ್ದಪಡಿಸಿ ಬಡಕುಟುಂಬಗಳಿಗೆ ತಲುಪಿಸಬೇಕೆಂಬುದು ತಂಡದ ಮುಖ್ಯ ಉದ್ದೇಶವಾಗಿತ್ತು. ಕೆಲಸವಿಲ್ಲದೆ ತೀರಾ ಸಮಸ್ಯೆ ಅನುಭವಿಸುತ್ತಿರುವ ಅಥವಾ ದೈಹಿಕ ಸಮಸ್ಯೆಯಿಂದ ದುಡಿಯಲು ಅನಾನುಕೂಲವಾಗಿರುವ ಮನೆಗಳಿಗೆ  ಕಿಟ್ ತಲುಪಿರುವವುದು ನಿಜಕೂ ತೃಪ್ತಿದಾಯಕವಾದ ವಿಷಯ ಎಂದು ಹೇಳುತ್ತಾರೆ ವಿವೇಕ್.
ವಿವೇಕ್‌
 ಎರಡು  ತಿಂಗಳ ಅವಧಿಯಲ್ಲಿ ಇರಾ ಗ್ರಾಮದ 20 ಮನೆಗಳಿಗೆ  ವಿವೇಕ್ ಸ್ನೇಹಿತರಾದ ,ಸ್ನೇಕ್ ಕಿರಣ್ ,ಅಪುಲ್ ಆಳ್ವ ಅವರ ಜೊತೆಗೆ ಆರಂಭಿಸಿದ ಈ ಕೆಲಸ  ದಿನ ಕಳೆದಂತೆ ತವರು ಜಿಲ್ಲೆ ಬಿಟ್ಟು ಪಕ್ಕದ ಜಿಲ್ಲೆಗಳಲ್ಲಿ ಕಿಟ್ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಲ್ಲಿತ್ತು. ಕೆಲವು ದ್ವೀಪ ಪ್ರದೇಶಗಳಿಗೆ ದೋಣಿ ಮೂಲಕ ತೆರಳಿ ಆಹಾರ ಸಾಮಗ್ರಿಗಳನ್ನು, ಕಾಡಿನ ನಡುವೆಯು 4 ಕಿ.ಮೀ ದೂರ ನಡೆದುಕೊಂಡು ಹೋಗಿ ತಲುಪಿಸಿ ಕಬ್ಬಿನಾಲೆ ಎಂಬ ಕಾಡಿನ ನಡುವೆ ಮೂಲಭೂತ ಸೌಕರ್ಯ ವಂಚಿತ ಮಲೆಕುಡಿಯ ಸಮುದಾಯದ ಇಪತ್ತು ಮನೆಗಳಿಗೆ ನಡೆದುಕೊಂಡು ಹೋಗಿ ಆಹಾರ ಸಾಮಗ್ರಿ ಕೊಡುವಾಗ ಅವರ ಮುಖದಲ್ಲಿ ನಗು ಕಂಡ ಖುಷಿ ತಂಡಕೆ ತೃಪ್ತಿ ನೀಡಿದೆ ಎಂದು ಹೇಳುತ್ತಾರೆ ವಿವೇಕ್.‌
ಈ ತಂಡ ಕಿಟ್ ನೀಡಿದ ಮಾಹಿತಿ ತಿಳಿದು, ಊರ ಕೆಲವು ವ್ಯಕ್ತಿಗಳು ಜಾತಿ, ಧರ್ಮ,ಎಲ್ಲವನ್ನ ಬದಿಗೊತ್ತಿ ಯಾವುದೇ ಬೇದಭಾವವಿಲ್ಲದೆ  ಮೊತ್ತದ ಧನ ಸಹಾಯ ಮಾಡಿ ಬೆಂಬಲಿಸುವ ಮೂಲಕ  ಐನೂರು ಮನೆಗಳಿಗೆ ಕಿಟ್ ಕೊಡುವಲ್ಲಿ ಯಶಸ್ವಿಯಾಗಿ ಮುಂದುವರೆಯಿತು . ನಮ್ಮರಾಜ್ಯದ ದೇಶದ, ಹೊರ ರಾಷ್ಟ್ರಗಳಲ್ಲಿ ಕೆಲಸ ಮಾಡುವಂತಹ ಮಂದಿಯೂ ಕೂಡ ತಂಡದ  ಜೊತೆ ಕೈ ಜೋಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಬೀದಿಬದಿ ಆಹಾರವಿಲ್ಲದೆ ಸಂಕಷ್ಟದಲ್ಲಿದ ಶ್ವಾನಗಳಿಗೆ,ಹದ್ದು,ಪಾರಿವಾಳ,ಕಾಗೆ ಇತರ ಪ್ರಾಣಿಗಳಿಗೂ ಹಸಿವು ನೀಗಿಸುವ ಕಾರ್ಯ ಕೂಡ ಮಾಡುವಲ್ಲಿ ಮೂಕ ಪ್ರಾಣಿಗಳ ಹಸಿವು ನೀಗಿಸಿ  ಮಾನವೀಯತೆ ಎಂಬ ಪದಕ್ಕೆ ಜೀವ ತುಂಬುವಲ್ಲಿ ಈ ತಂಡ ಸಾಕ್ಷಿಯಾಗಿದೆ .
ಈ  ಸೇವೆಯಲ್ಲಿ ಬೆನ್ನೆಲುಬಾಗಿ ಸಹಕಾರ ನೀಡಿದ ದಿನೇಶ್ ಹೊಳ್ಳ, ಶಿವಾನಿ ಮಂಗಳೂರು,   ಕ್ರಿಸ್ಟಿ ,ವಿಕ್ಟೋರಿಯ ಟೀಚರ್ ,ಸುಕನ್ಯಾ ಎನ್ ಆರ್, ಸೂರಜ್ ಮಂಗಳೂರು   ,ಅವಿನಾಶ್ ಶಿಶಿಲ, ಸಚಿನ್ ಮುಂಡಾಜೆ, ರಾಜು ಅರಣ್ಯ ಇಲಾಖೆ, ಅಜಯ್, ರಾಕೇಶ್ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ್ದರು ಎಂದು ಹೇಳುತ್ತಾರೆ ವಿವೇಕ್.‌

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group