ವಿವೇಕಾನಂದ ಮಹಾವಿದ್ಯಾಲಯದಲ್ಲಿ ಎನ್ಇಪಿ ಕಾರ್ಯಾಗಾರ

December 4, 2021
9:05 PM

ಒಂದು ಪ್ರಸಂಗದ ಪಾತ್ರವನ್ನು ವಿಭಿನ್ನರೀತಿಯಲ್ಲಿ ಪ್ರದರ್ಶನ ಮಾಡಬಹುದು. ಆದರೆ ಆ ಪಾತ್ರವನ್ನು ಅರ್ಥೈಸಿಕೊಂಡು ಜೀವತುಂಬುವ ಸಾಮಥ್ರ್ಯ ನಮ್ಮಲ್ಲಿರಬೇಕು.ಎಂದು ಮಂಗಳೂರು ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಮತ್ತು ಮೆಟೀರಿಯಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಮಂಜುನಾಥ್ ಪಟ್ಟಾಭಿ ಹೇಳಿದರು.

Advertisement

ಅವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದಆಶ್ರಯದಲ್ಲಿಆಯೋಜಿಸಲಾದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತಾದಒಂದು ದಿನದಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು. ಈಗಿನ ಆಧುನಿಕಯುಗದಲ್ಲಿ ವಿದ್ಯಾರ್ಥಿಗಳು ಮಾಹಿತಿಯನ್ನು ತಿಳಿದುಕೊಳ್ಳುವುದರಲ್ಲಿ ಬಹಳಷ್ಟು ಮುಂದುವರೆದಿದ್ದಾರೆಆದರೆಅದನ್ನುಜೀವನಕ್ಕೆ ತೊಡಗಿಸಿಕೊಳ್ಳುವ ಅರಿವುಇನ್ನು ತಿಳಿದಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಮೊದಲಿನಿಂದಲೇಕಲ್ಪಿಸುತ್ತ ಬಂದಿದ್ದರುಅದನ್ನು ಉಪಯೋಗಿಸಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ನಿಯಮಇರಲಿಲ್ಲ ಆದರೆ ಈಗಿನ ಹೊಸ ಶಿಕ್ಷಣ ನೀತಿ ಅವಕಾಶಗಳನ್ನು ಕಲ್ಪಿಸುತ್ತವುದರಜೊತೆಗೆ ಅವುಗಳನ್ನು ಸದುಪಯೋಗ ಮಾಡಲೇಬೇಕಾದ ನಿಯಮಗಳನ್ನು ತಂದಿದೆ ಎಂದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಎನ್ ಇ ಪಿಯ ನೋಡಲ್‍ ಅಧಿಕಾರಿಪ್ರೊ. ರವೀಂದ್ರಾಚಾರಿ ಮಾತನಾಡಿ, ಬದಲಾವಣೆಜಗದ ನಿಯಮ, ಬದಲಾವಣೆ ಬಹಳ ಔಚಿತ್ಯಪೂರ್ಣ ವಾಗಿರಬೇಕು ಹಾಗಿದ್ದರೆ ಮಾತ್ರಅದುಅರ್ಥಪೂರ್ಣವಾಗುವುದು. ಶಿಕ್ಷಣ ಕೇವಲ ಮೂರು ಗಂಟೆಗಳಲ್ಲಿ ಬರೆಯುವಂತಹ ಪರೀಕ್ಷೆಗೆ ಸೀಮಿತವಾಗಿರದೆ ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮಾದರಿಯುತ್ತ ಶಿಕ್ಷಣ ವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ವಿವಿಧ ಪದವಿ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಜಿ. ಶ್ರೀಧರ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಭಟ್‍ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಬಯಲು | 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |
April 21, 2025
7:37 AM
by: The Rural Mirror ಸುದ್ದಿಜಾಲ
ಪ್ರೀತಿಯಲ್ಲಿ ನಿಪುಣರು ಈ ರಾಶಿಯವರು…!
April 21, 2025
7:13 AM
by: ದ ರೂರಲ್ ಮಿರರ್.ಕಾಂ
ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
April 20, 2025
8:55 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ
April 20, 2025
5:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group