ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯ ತಾಣವಾಗಬೇಕು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 12 ದಿನಗಳ ರಾಜ್ಯಮಟ್ಟದ ಯುರೇಕಾ ವಿಜ್ಞಾನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

Advertisement
Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯಡಾ.ಕೆ.ಎನ್ ಸುಬ್ರಹ್ಮಣ್ಯ ಮಾತನಾಡಿಶಿಬಿರದಲ್ಲಿ ಕಲಿತ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿಉಪಯೋಗವಾಗುವಂತಾಗಬೇಕು.ಈ ಮೂಲಕ ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯತಾಣವಾಗಬೇಕು ಎಂದರು.

Advertisement

ಅತಿಥಿಯಾಗಿದ್ದ ವೇಕಾನಂದಇಂಜಿನಿಯರಿಂಗ್‍ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ  ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತುಜ್ಞಾನವನ್ನು ಜಾಗೃತಗೊಳಿಸುವಲ್ಲಿ ಯುರೇಕಾಶಿಬಿರದಿಂದ ಸಾಧ್ಯವಾಗುತ್ತದೆ.ಕ್ರಿಯಾಶೀಲತೆಯು ಬೆಳೆಯುವುದಕ್ಕೆ ಕಾರಣವಾಗುತ್ತದೆ.ಈ ಮೂಲಕ ಬದುಕಿಗೆ ಪೂರಕವಾದ ಶಿಕ್ಷಣ ದೊರೆತು ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

ಕಾರ್ಯಾಗಾರದಲ್ಲಿರಾಜ್ಯದ ವಿವಿಧ ಭಾಗಗಳಿಂದ ಸುಮಾರು ನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಶಿಬಿರದ ಕುರಿತು ಪುತ್ತೂರಿನರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭೂಮಿಕಾ ಜಿ, ಕೃಷ್ಣಪ್ರಸಾದ್, ಪುಣಚದ ಶ್ರೀ ದೇವಿ ಪ್ರೌಢಶಾಲೆಯ ಈಶ ಕೃಷ್ಣ, ನೆಹರೂನಗರಸುದಾನ ಪ್ರೌಢಶಾಲೆಯಆದಿತ್ಯರಾಮ, ತೆಂಕಿಲ ವಿವೇಕಾನಂದಆಂಗ್ಲ ಮಾಧ್ಯಮ ಪ್ರೌಢಶಾಲೆಯಆತ್ಮೀಯ ಎಂ.ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಹರ್ಷಿತಾ, ಸುಳ್ಯದ ಸೈಂಟ್‍ಜೋಸೆಫ್ ಪ್ರೌಢಶಾಲೆಯ ನಿಶ್ಮಾ , ಪ್ರಗತಿ ಪ್ರೌಢಶಾಲೆಯ ಪ್ರಧಾನ್ ಎಂ. ಎನ್, ವೇಣೂರು ಸರಕಾರಿ ಪ್ರೌಢಶಾಲೆಯ ಸಂಪದ ಕೆ. ಎಸ್‍ತಮ್ಮಅಭಿಪ್ರಾಯವನ್ನುಹಂಚಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತುಸ್ಮರಣಿಕೆಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು.

Advertisement

ಯುರೇಕಾಕಾರ್ಯಾಗಾರದ ಮುಖ್ಯ ಸಂಯೋಜಕ ಹರೀಶ ಶಾಸ್ತ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಹನ್ನೆರಡು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳ ಬಗ್ಗೆ ವರದಿಯನ್ನುಉಪನ್ಯಾಸಕಿ ಪಲ್ಲವಿ ಮಂಡಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ.ಶ್ರುತಿ ನಿರೂಪಿಸಿದರು. ಉಪನ್ಯಾಸಕಿಚೇತನಾ ಸ್ವಾಗತಿಸಿ ಶರ್ಮಿಳಾ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯ ತಾಣವಾಗಬೇಕು"

Leave a comment

Your email address will not be published.


*