( ಮಾಜಿ ಮತ್ತು ಹಾಲಿ ಸಭಾಪತಿಗಳಾದ ರಮೇಶ್ ಕುಮಾರ್ ಮತ್ತು ವಿಶ್ವನಾಥ್ ಹೆಗಡೆ ಕಾಗೇರಿ ಅವರು ಅತ್ಯಾಚಾರದ ವಿಷಯದಲ್ಲಿ ನೀಡಿದ ಕ್ರಿಯೆ ಪ್ರತಿಕ್ರಿಯೆಗಳು ಮರೆಯುವ ಮುನ್ನ….. )
ನಿರ್ಭಯ ತೆರೆದಿಟ್ಟ ಮನಸ್ಸು – ಹೃದಯ – ದೇಹ – ಚೂಡಿದಾರ – ಆ ಮೂರು ಗಂಟೆಗಳು………
ಆ ಡ್ರೈವರ್ ಅನುಭವಿಸಿ ಮತ್ತೆ ಚಾಲಕನ ಸೀಟಿನತ್ತ ತೆರಳಿದ. ಆಗ ಇದನ್ನೆಲ್ಲಾ ನೋಡುತ್ತಾ ಯಾರಾದರೂ ಬಂದರೆ ಎಚ್ಚರಿಸಲು ಒಬ್ಬ ಚಿಕ್ಕ ಹುಡುಗ ಕಾವಲಿನಂತೆ ಕೆಲಸ ಮಾಡುತ್ತಿದ್ದ. ನನ್ನ ಪುಟ್ಟ ತಮ್ಮನಂತೆ ಕಾಣಿಸುತ್ತಿದ್ದ. ಡ್ರೈವರ್ ಹೋಗುವಾಗ ಆ ಹುಡುಗ ಕಣ್ಸನ್ನೆಯಲ್ಲಿ ಏನೋ ಕೇಳಿದ. ಆತ ನಗುತ್ತಾ ತಲೆ ಅಲ್ಲಾಡಿಸಿದ. ಆ ಹುಡುಗ ಅತ್ಯುತ್ಸಾಹದಿಂದ ನನ್ನ ಮೇಲೆರಗಿದ. ಯಾಕೋ ಈ ಬಾರಿ ತುಂಬಾ ನೋವಾಯಿತು. ಮೊದಲ ಬಾರಿಗೆ ಸಾವಿನ ಅನುಭವವಾಗತೊಡಗಿತು. ನಾನು ಎಲ್ಲಿದ್ದೇನೆ ಎಂದು ಮರೆತಂತಾಯಿತು.
ಆ ಸಮಯದಲ್ಲಿ ಉಳಿದ ನಾಲ್ವರು ಪಾಂಡೆಯನ್ನು ಕೆಳಕ್ಕೆ ಒತ್ತಿ ಹಿಡಿದು ತಾವು ಕಟ್ಟಿಸಿಕೊಂಡು ಬಂದಿದ್ದ ಬಿರ್ಯಾನಿ ತಿನ್ನುತ್ತಾ ಬಿಯರ್ ಕುಡಿಯುತ್ತಿದ್ದರು.
ಕೆಲವೇ ನಿಮಿಷಗಳು ಮಾತ್ರ. ಆ ರಾಕ್ಷಸರು ಮತ್ತೆ ನನ್ನ ಮೇಲೆ ದಾಳಿ ಪ್ರಾರಂಭಿಸಿದರು. ಈ ಬಾರಿ ಅವರು ಮತ್ತಿನಲ್ಲಿದ್ದರು. ಘನಘೋರ ವರ್ತನೆ ತೋರಿದರು. ಹಸಿ ಜೇಡಿ ಮಣ್ಣಿನ ಬೊಂಬೆಯಂತೆ ನನ್ನನ್ನು ಎಳೆದಾಡುತ್ತಾ ತಮಗೆ ಅನುಕೂಲಕರ ರೀತಿಯಲ್ಲಿ ಉಪಯೋಗಿಸಿದರು. ಸಾವು ಖಚಿತವಾಯಿತು. ಅದು ಶೀಘ್ರವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸತೊಡಗಿದೆ. ಈಗಾಗಲೇ ದೈಹಿಕ ನೋವಿನಿಂದ ನನಗೆ ಮುಕ್ತಿ ದೊರೆತಿತ್ತು. ನನ್ನ ಮೆದುಳು ದೇಹದ ಸ್ಪರ್ಶ ಶಕ್ತಿಯನ್ನೇ ಗ್ರಹಿಸುತ್ತಿರಲಿಲ್ಲ. ಹೆಚ್ಚು ಕಡಿಮೆ ಶವವಾಗಿದ್ದೆ. ಆದರೆ ಮನಸ್ಸು ಇನ್ನೂ ಜೀವಂತವಿತ್ತು.
ಬಸ್ಸು ಚಲಿಸುತ್ತಲೇ ಇತ್ತು. ಎಲ್ಲವೂ ಮುಗಿದ ಮೇಲೆ ಅವರು ಮುಂದಿನ ಸೀಟಿನಲ್ಲಿ ಕುಳಿತು ತಮ್ಮ ಕಾರ್ಯಯೋಜನೆಯ ಬಗ್ಗೆ ಮಾತನಾಡುತ್ತಿದ್ದರು.
ಪಾಂಡೆ ಮೆಲ್ಲಗೆ ತೆವಳುತ್ತಾ ನನ್ನ ಬಳಿ ಬಂದ. ಅವರು ದುರುಗುಟ್ಟಿ ನೋಡಿದರು. ಆದರೆ ಏನೂ ಮಾಡಲಿಲ್ಲ. ನಾನು ಕೀರಲು ಧ್ವನಿಯಲ್ಲಿ ಅವನ ಕಿವಿಯಲ್ಲಿ ಉಸುರಿದೆ ” ಪಾಂಡೆ ನನ್ನನ್ನು ಕ್ಷಮಿಸು. ನನ್ನ ಜೀವನ ಮುಗಿಯಿತು. ಇವರು ನನ್ನನ್ನು ಜೀವಂತ ಬಿಟ್ಟರೆ ಕೆಳಗಿಳಿದು ಇದೇ ಬಸ್ಸಿನ ಚಕ್ರಕ್ಕೆ ತಲೆಕೊಟ್ಟು ಸಾಯುತ್ತೇನೆ. ನನ್ನಿಂದ ನಿನಗೂ ತುಂಬಾ ಏಟಾಯಿತು. ಬಹುಶಃ ಇನ್ನು ಅವರು ನಮ್ಮನ್ನು ಬಿಟ್ಟು ಬಿಡಬಹುದು. ನಿನ್ನ ಬದುಕು ಇನ್ನು ಮುಂದಾದರೂ ಸುಖಮಯವಾಗಲಿ ” ಎಂದೆ.
ತನ್ನ ಕಣ್ಣ ಮುಂದೆಯೇ ಸಾಮೂಹಿಕ ಅತ್ಯಾಚಾರವಾದ ಹೆಣ್ಣನ್ನು ಯಾರು ಮದುವೆಯಾಗುತ್ತಾರೆ.
ಆದರೆ ಪಾಂಡೆ ನನ್ನ ಕೈಹಿಡಿದು ಹೇಳಿದ ” ನಿನ್ನನ್ನು ಸಾಯಲು ನಾನು ಬಿಡುವುದಿಲ್ಲ. ಏನೇ ಆಗಲಿ ನಾನು ನಿನ್ನನ್ನೇ ಮದುವೆಯಾಗುತ್ತೇನೆ. ನೀನಿಲ್ಲದೆ ನಾನು ಇರುವುದಿಲ್ಲ. ಅವರು ಬಿಟ್ಟ ತಕ್ಷಣ ನಿನ್ನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇನೆ. ಗುಣವಾದ ಮೇಲೆ ನಾವು ಇಲ್ಲಿರುವುದು ಬೇಡ. ಯಾವುದಾದರೂ ದೂರದ ರಾಜ್ಯಕ್ಕೆ ಹೋಗಿ ಬಿಡೋಣ. ಕೂಲಿಯಾದರೂ ಮಾಡಿ ನಿನ್ನನ್ನು ಸಾಕುತ್ತೇನೆ. ನೀನು ಯಾವುದೇ ಕಾರಣಕ್ಕೂ ಸಾಯುವ ಮಾತನಾಡಬೇಡ ” ಎಂದು ಕೈಮುಗಿದು ಕೇಳಿಕೊಂಡ….
ಸಾವು ಪ್ರೀತಿ ಬದುಕಿನ ನಡುವೆ ಮನಸ್ಸು ಹೊಯ್ದಾಡತೊಡಗಿತು. ಕೇವಲ ಮೂರು ಗಂಟೆಗಳ ಮೊದಲು ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಜೋಡಿಗಳು ಈಗ ಸಾವಿನ ನೆರಳಲ್ಲಿ ನರಳುತ್ತಿದ್ದವು. ಆ ನೋವಿನಲ್ಲೂ ಪ್ರೀತಿಯ ಆಳದ ಅನುಭವವನ್ನು ಸವಿಯುತ್ತಿದ್ದೆ.
ಕೆಲವು ನಿಮಿಷಗಳ ನಂತರ ಅವರು ಒಟ್ಟಾಗಿ ಬಂದರು. ಇನ್ನೇನು ಕಾದಿದೆಯೋ ಎಂದು ಭಯವಾಯಿತು. ಅದರಲ್ಲಿ ಒಬ್ಬ ಕಾಲಿನಿಂದ ಖುದಿರಾಮನಿಗೆ ಬಲವಾಗಿ ಒದ್ದು ಈ ವಿಷಯ ಪೋಲಿಸರಿಗೆ ಹೇಳಿದರೆ ನೀವು ಎಲ್ಲಿದ್ದರೂ ಹುಡುಕಿಕೊಂಡು ಬಂದು ಕೊಲ್ಲುತ್ತೇವೆ. ನಾವು ಯಾರಿಗೂ ಹೆದರದ ರೌಡಿಗಳು ಎಂದು ಧಮಕಿ ಹಾಕಿ ಇನ್ನು ಮೇಲೆ ದೆಹಲಿಯಲ್ಲಿ ಕಾಣಿಸಕೂಡದು ಎಂದು ಹೇಳಿ ಎಲ್ಲರೂ ಒಟ್ಟಾಗಿ ನಮ್ಮ ಕಾಲುಗಳನ್ನು ಹಿಡಿದು ಧರಧರನೆ ಎಳೆಯುತ್ತಾ ಡ್ರೈವರ್ ಗೆ ಬಸ್ಸಿನ ವೇಗ ಕಡಿಮೆ ಮಾಡಲು ಹೇಳಿ ಬಾಗಿಲಿನಿಂದ ಆಚೆ ನೂಕಿದರು. ಮೊದಲು ನಾನು ಕೆಳಗೆ ಬಿದ್ದೆ. ತಲೆ ನೆಲಕ್ಕೆ ಬಡಿಯಿತು.
ಅಷ್ಟೆ, ಅಲ್ಲಿಂದ ಮುಂದೆ ನಡೆದದ್ದೆಲ್ಲವೂ ನಿಮಗೆ ತಿಳಿದಿದೆ.
ಪಾಂಡೆ ಪ್ರಜ್ಞೆ ತಪ್ಪಿದ ನನ್ನ ದೇಹವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಸ್ವತಃ ರಕ್ತ ಸುರಿಯುತ್ತಿದ್ದರು ಸಿಕ್ಕ ಸಿಕ್ಕ ಆಟೋ ನಿಲ್ಲಿಸಲು ಪ್ರಯತ್ನಿಸಿ ಕೊನೆಗೆ ಒಂದು ಆಸ್ಪತ್ರೆಗೆ ಸೇರಿಸಿದ. ಕೆಲ ಗಂಟೆಗಳ ನಂತರ ಡಾಕ್ಟರ್, ಎಷ್ಟೋ ಸಮಯದ ನಂತರ ಪೋಲೀಸ್, ಅನಂತರ ಮಾಧ್ಯಮ, ತದನಂತರ ಸಾರ್ವಜನಿಕರು ಮುಂದೆ ಸರ್ಕಾರ ಕೊನೆಗೆ ಇಡೀ ದೇಶವೇ ನನಗಾಗಿ ಸ್ಪಂದಿಸಿತು.
ಕೆಲ ದಿನಗಳ ನಂತರ ನನ್ನಂತ ಸಾಮಾನ್ಯಳ ದೇಹವನ್ನು ಅದೂ ರಾಜಧಾನಿಯ ಆರು ಜನ ಸಾಮೂಹಿಕ ಅತ್ಯಾಚಾರದ ನಂತರ ಸರ್ಕಾರ ವಿಶೇಷ ವಿಮಾನದಲ್ಲಿ ಸಿಂಗಪುರಕ್ಜೆ ಸಹ ಕೊಂಡೊಯ್ಯಲಾಯಿತು. ನನ್ನನ್ನು ಉಳಿಸಲು ಸೃಷ್ಟಿಸಿದವನಿಗೂ ಸಾಧ್ಯವಿರಲಿಲ್ಲ ಅಷ್ಟರಮಟ್ಟಿಗೆ ನನ್ನ ದೇಹ ಜರಡಿಯಂತಾಗಿತ್ತು……..
ಸುಮಾರು 9 ವರ್ಷಗಳು ಕಳೆದವು. ನನ್ನ ಆತ್ಮ ಇನ್ನೂ ದೆಹಲಿಯನ್ನು ಸುತ್ತುತ್ತಲೇ ಇದೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿ ಅವರೂ ಸತ್ತಿದ್ದಾರೆ. ಅದು ಅವರು ಮಾಡಿದ ಅಪರಾಧಕ್ಕಾಗಿ. ಆದರೆ ಏನೂ ಅಪರಾಧ ಮಾಡದ ನನಗೆ ಈ ಶಿಕ್ಷೆ ಯಾಕೆ ?
ಪಾಂಡೆ ಕೆಲವು ವರ್ಷಗಳು ನನ್ನದೇ ನೆನಪಿನಲ್ಲಿ ಹುಚ್ಚನಂತಾದ. ಊರಿನಲ್ಲಿ ಖಿನ್ನತೆಯಿಂದ ಬಳಲಿದ. ಇತ್ತೀಚೆಗೆ ಅವರ ಮನೆಯವರು ತುಂಬಾ ಒತ್ತಾಯ ಮಾಡಿ ಒಂದು ಮದುವೆ ಮಾಡಿದರು ಎಂದು ತಿಳಿಯಿತು. ಮನಸ್ಸು ತುಂಬಾ ಭಾರವಾಯಿತು. ಪಾಪ ನಾನು ಇನ್ನೆಂದಿಗೂ ಬರುವುದಿಲ್ಲ ಎಂದು ಅವನಿಗೂ ಅರ್ಥವಾಗಿದೆ. ಅವನಿಗೆ ಒಳ್ಳೆಯದಾಗಲಿ.
ದಯವಿಟ್ಟು ಕ್ಷಮಿಸಿ, ನನ್ನ ಒಂದು ಕೋರಿಕೆ ಏನೆಂದರೆ, ಮುಂದಿನ ಜನ್ಮದಲ್ಲಿ ನಾನು ಗಂಡಾಗಿ ಹುಟ್ಟಲು ಆಸೆ ಪಡುತ್ತೇನೆ. ಸಾಕು ಈ ಹೆಣ್ಣು ಜನ್ಮ…….
ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ….. ನಿರ್ಭಯ………
# ವಿವೇಕಾನಂದ ಎಚ್ ಕೆ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…